ಲಗ್ನ ಶುಬೇ ಚಾಷ್ಟಮಶುದ್ಧಿಸಂಯುತೇ ರಕ್ಷಾ ಪಶೂನಾಂ ನಿಜಯೋನಿಬೇ ಚರಣ
ರಿಕ್ತಾಷ್ಟಮೀದರ್ಯಕುಜಶ್ರವೋಧ್ರುವತ್ವಷ್ಟ್ರೇಷು ಯಾನಂ ಸ್ಥಿತಿವೇಶನಂ ನ ಸತ್*
ಅಷ್ಟಮ ಭಾವ ಶುದ್ಧ ಗ್ರಹರಹಿತ ವಾಗಿದ್ದರೆ ಮತ್ತು ಶುಭ ಗ್ರಹದ ರಾಶಿಯಲ್ಲಿದ್ದರೆ ಜಾತಕನ ಸ್ವಯಂ ಯೋನಿಯ ನಕ್ಷತ್ರ ವಿವಾಹೋಕ್ತ ನಕ್ಷತ್ರವಿದ್ದರೆ ಮತ್ತು ಚರ ನಕ್ಷತ್ರವಿದ್ದರೆ ಪಶುಗಳ ರಕ್ಷಣೆ ಶುಭವಾಗುತ್ತದೆ. ಹಾಗೂ ರಿಕ್ತಾ ಅಷ್ಟಮಿ, ಅಮಾವಾಸ್ಯೆ ತಿಥಿ ಮಂಗಳವಾರ, ಶ್ರಾವಣ, ದ್ರುವಸಂಜ್ಞಕ,ಮತ್ತು ಚಿತ್ತ ನಕ್ಷತ್ರ ಇವುಗಳಲ್ಲಿ ಹಸುವನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುವುದು, ಮನೆಯಲ್ಲಿ ಇರಿಸುವುದು ಮತ್ತು ಪಾಲನೆ ಮಾಡಲು ಪ್ರಾರಂಭಿಸುವುದು ಅಶುಭವಾಗುತ್ತದೆ.
ಔಷಧೀಯ ನಿರ್ಮಾಣ ಮತ್ತು ಸೇವನೆ :
ಭೈಷಜ್ಯಂ ಸಲ್ಲಘಮೃಚರೇ ಮೂಲಭೇ ದ್ವ್ಯಂಗಲಗ್ನೇ *
ಶುಕ್ರೆಂದಿವಜ್ಯೇ ವಿದಿ ಚ ದಿವಸೇ ಚಾಪಿ ತೇಷಾಂ ರವೇಶ್ಚ |
ಶುದ್ಧೇರಿಃ ಫದ್ಯೂ ನಮೃತಿಗೃಹೇ ಸತ್ತಿಥೌ ನೋ ಜನೇರ್ಭೇ
ಸೂಚಿಕರ್ಮ್ಪ್ಯದಿತಿವಸುಭ ತ್ವಾಷ್ಟ್ರಮಿತ್ರಾಶ್ವಿಪುಷ್ಯೇ ||
|ಲಘಸಂಜ್ಞಕ ಹಸ್ತಾ, ಅಶ್ವಿನಿ, ಪುಷ್ಪ, ಅಭಿಜಿತ, ಮೃದುಸಂಜ್ಞಕ ಮೃಗಶಿರಾ, ರೇವತಿ, ಚಿತ್ತಾ, ಅನುರಾಧಾ, ಚರಸಂಜ್ಜಕ,ಸ್ವಾತಿ, ಪುನರ್ವಸು, ಶ್ರಾವಣ, ಧನಿಷ್ಠ, ಶತಭಿಷಾ, ಮತ್ತು ಮೂಲ ನಕ್ಷತ್ರದಲ್ಲಿ ಹಾಗೂ ದ್ವಿಸ್ವಭಾವ ಲಗ್ನದಲ್ಲಿ ಶುಕ್ರ, ಚಂದ್ರ, ಬುಧ,ಗುರು, ಮತ್ತು ರವಿವಾರದಲ್ಲಿ ಲಗ್ನದಿಂದ ದ್ವಾದಶ, ಸಮಸ್ತ ಮತ್ತು ಅಷ್ಟಮ ಶುದ್ದಗಿದ್ದರೆ, ಶುಭ ತಿಥಿಯಲ್ಲಿ ಔಷಧಿಯ ನಿರ್ಮಾಣ ಮತ್ತು ಸೇವನೆ ಶುಭವಾದದು. ಜನ್ಮ ನಕ್ಷತ್ರದಲ್ಲಿ ಶುಭವಲ್ಲ. ಪುನರ್ವಸು, ದನಿಷ್ಠಾ ಚಿತ್ತಾ, ಅನುರಾಧ, ಅಶ್ವಿನಿ ಮತ್ತು ಪುಷ್ಯ ನಕ್ಷತ್ರಗಳಲ್ಲಿ ಬಟ್ಟೆ ಹೊಲಿಯುವುದು ಶುಭವಾದುದು.
ಖರೀದಿ – ಮಾರಾಟ
ಕ್ರಯರ್ಕೇ ವಿಕ್ರಯೋ ನೇಷ್ಟೋ ವಿಕ್ರಯರ್ಕೇ ಕ್ರಯೋಪಿನ|
ಪೌಷ್ಣಾಂಬು *ಪಾಶ್ವಿನೀವಾತಶ್ರವಶ್ಚಿತ್ರಾಃ ಕ್ರಯೇ*ಶುಭಾ ||
ಖರೀದಿಯ ನಕ್ಷತ್ರದಲ್ಲಿ ಮಾರುವುದು ಮತ್ತು ಮಾರುವ ನಕ್ಷತ್ರದಲ್ಲಿ ಖರೀದಿಸುವುದನ್ನು ಮಾಡಬಾರದು. ರೇವತಿ, ಶತತಾರಕಾ, ಅಶ್ವಿನಿ, ಸ್ವಾತಿ, ಶ್ರಾವಣ, ಮತ್ತು ಚಿತ್ತಾ ನಕ್ಷತ್ರಗಳಲ್ಲಿ ಖರೀದಿ ಮಾಡುವುದು. ಶುಭವಾದದು. ಮಾರಾಟ ಮಾಡುವುದು ಅಶುಭವಾದದು.