ಮನೆ ಅಂತಾರಾಷ್ಟ್ರೀಯ ಶೇಖ್​ ಹಸೀನಾ ಮತ್ತು ಮಾಜಿ ಸಂಸದರ ರಾಜತಾಂತ್ರಿಕ ಪಾಸ್​ ಪೋರ್ಟ್​ ರದ್ದುಗೊಳಿಸಿದ ಬಾಂಗ್ಲಾ ಸರ್ಕಾರ

ಶೇಖ್​ ಹಸೀನಾ ಮತ್ತು ಮಾಜಿ ಸಂಸದರ ರಾಜತಾಂತ್ರಿಕ ಪಾಸ್​ ಪೋರ್ಟ್​ ರದ್ದುಗೊಳಿಸಿದ ಬಾಂಗ್ಲಾ ಸರ್ಕಾರ

0

ಬಾಂಗ್ಲಾದೇಶದ ಸರ್ಕಾರವು ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಮಾಜಿ ಸಂಸದರ ರಾಜತಾಂತ್ರಿಕ ಪಾಸ್ ​ಪೋರ್ಟ್ ​ಗಳನ್ನು ರದ್ದುಗೊಳಿಸಿದೆ.

Join Our Whatsapp Group

ಈ ಹಿಂದೆ ಆಯ್ದ ದೇಶಗಳಿಗೆ ವೀಸಾ-ಮುಕ್ತ ಪ್ರಯಾಣದಂತಹ ವಿವಿಧ ಸವಲತ್ತುಗಳನ್ನು ನೀಡುತ್ತಿದ್ದ ಈ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಹಸೀನಾ ಅವರ ಆಡಳಿತದಲ್ಲಿ ಸಂಸದರಿಗೆ ನೀಡಲಾಗಿತ್ತು.

ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಶೇಖ್​ ಹಸೀನಾ ಆಗಸ್ಟ್​ 5ರಿಂದ ಭಾರತದಲ್ಲಿ ನೆಲೆಸಿದ್ದು, ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅವರ ಸುರಕ್ಷತೆಗೆ ಬೆದರಿಕೆಗಳ ಮಧ್ಯೆ ಆಶ್ರಯ ಪಡೆಯುತ್ತಿದ್ದಾರೆ.

ಶೇಖ್ ಹಸೀನಾ ವಿರುದ್ಧ ಇಲ್ಲಿಯವರೆಗೆ 44 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪಾಸ್ ಪೋರ್ಟ್ ರದ್ದುಪಡಿಸಲು ಕಾರಣ ನೀಡಲಾಗಿದೆ. ಇದರೊಂದಿಗೆ ಇನ್ನೂ ಕೆಲವು ಪ್ರಕರಣಗಳು ದಾಖಲಾಗಬಹುದು.

ಯುಕೆ ಅಥವಾ ಯಾವುದೇ ದೇಶವು ಹಸೀನಾರ ವಿನಂತಿಯನ್ನು ಅನುಮೋದಿಸಿದ ಕಾರಣ ಅವರು ಭಾರತದಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸಂಸತ್ತಿನಲ್ಲಿ ಹಸೀನಾ ಪ್ರಸ್ತುತ ಭಾರತದಲ್ಲಿದ್ದಾರೆ ಮತ್ತು ಸಹಾಯದ ಅಗತ್ಯವಿದೆ ಎಂದು ಖಚಿತಪಡಿಸಿದ್ದಾರೆ.

ಢಾಕಾದಲ್ಲಿ ಇತ್ತೀಚೆಗೆ ಮಾಡಿದ ಭಾಷಣದಲ್ಲಿ, ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಅವರು ಹಸೀನಾಳನ್ನು ಹಸ್ತಾಂತರಿಸುವಂತೆ ಕರೆ ನೀಡಿದರು, ಅವರು ತನ್ನ ತಾಯ್ನಾಡಿನಲ್ಲಿ ವಿಚಾರಣೆಯನ್ನು ಎದುರಿಸಬೇಕು ಎಂದು ಒತ್ತಾಯಿಸಿದರು.

ನೀವು ಅವರನ್ನು ಬಾಂಗ್ಲಾದೇಶ ಸರ್ಕಾರಕ್ಕೆ ಕಾನೂನು ರೀತಿಯಲ್ಲಿ ಹಸ್ತಾಂತರಿಸಬೇಕು ಎಂಬುದು ನಮ್ಮ ಮನವಿ, ಅವರು ವಿಚಾರಣೆ ಎದುರಿಸಲಿ ಎಂದು ಹೇಳಿದರು.