ಮನೆ ಆರೋಗ್ಯ ಕ್ಯಾನ್ಸರ್: ಭಾಗ ಒಂದು

ಕ್ಯಾನ್ಸರ್: ಭಾಗ ಒಂದು

0

ಕ್ಯಾನ್ಸರ್ ಅಂದರೆ ಕ್ಯಾನ್ಸರ್ ಎಂದು ಸಾಮಾನ್ಯರು ಭಾವಿಸುತ್ತಾರೆ. ಯಾರಿಗಾದರೂ, ಎಲ್ಲಾದರೂ ಚಿಕ್ಕ ಗಡ್ಡೆ ಕಾಣಿಸಿದ ಕೂಡಲೇ, ಅದು ಕ್ಯಾನ್ಸರ್ ಗಡ್ಡೆ ಯಿರಬಹುದೆಂದು ಭಯಪಡುತ್ತಾರೆ. ಆದರೆ ವಾಸ್ತವೇನೆಂದರೆ ದೇಹದ ಮೇಲಾದ ಪ್ರತಿ ಗಡ್ಡೆಯೂ ಕ್ಯಾನ್ಸರ್ ಗಡ್ಡೆಯಲ್ಲ.

Join Our Whatsapp Group

ಯಾವ ಮನುಷ್ಯನಿಗಾದರೂ ದೇಹದ ಯಾವ ಭಾಗದಲ್ಲಾದರೂ ಗಡ್ಡೆಗಳು ಏಳಬಹುದು,ಆ ಭಾಗಗಳ ಶರೀರ ಕಣಜಾಲ  ಅಸಾದಾರಣವಾಗಿ ಬೆಳೆಯುವುದರಿಂದ ಹಾಗೆ ಗಡ್ಡೆಯುಂಟಾಗುತ್ತದೆ.

ಪ್ರಾಥಮಿಕವಾಗಿ ನಮ್ಮ ದೇಹದಲ್ಲೇಳುವ ಗಡ್ಡೆಗಳು ಎರಡು ರೀತಿಯವು:

★ಹಾನಿಯುಂಟು ಮಾಡದವು

 ★ಹಾನಿ ಮಾಡುವಂತಹವು   

    ಹಾನಿ ಮಾಡುದವುಗಳನ್ನು ಬೆನಿಗ್ನ್ ತುಂಔರ್ಸ್ ಎನ್ನುತ್ತಾರೆ. ಇವು ಪಕ್ಕದ ಕಣಜಾಲಗಳಿಗೆ ಹರಡುವ ಸಂಭವವಿಲ್ಲ ಇವು ಕ್ಯಾನ್ಸರ್  ಗಡ್ಡೆಗಳಲ್ಲ.

    ಹಾನಿಕಾರಕವಾದವುಗಳನ್ನು Maignant, Tumoursಎನ್ನುತ್ತಾರೆ.ಈ ಗಡ್ಡೆಗಳು ಕ್ಯಾನ್ಸರ್ ಗೆ ಸಂಬಂಧಿಸಿದವು ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ಇವು ನೆರೆ ಊತಗಳಿಗೂ ಹರಡಿ,, ಅಲ್ಲಿನ  ಭಾಗವನ್ನು ಕೂಡಾ ನಾಶ ಮಾಡುತ್ತವೆ

     ಶರೀರದಲ್ಲಿ ಎಲ್ಲಾದರೂ ಗಡ್ಡೆ ಕಾಣಿಸಿದ ಕೂಡಲೇ,ಮೊದಲು ಅದು Benignನದೇ ಅಥವಾ Malignant ನದೇ,ಎಂಬ ವಿಷಯವನ್ನು ತೀರ್ಮಾನಿಸುವುದು ಮುಖ್ಯ. ಪ್ರಾರಂಭಿಕ ಹಂತದಲ್ಲೆ ಹಾಗೆ ತಿಳಿದುಕೊಂಡರೆ ಒಂದು ವೇಳೆ ಅದು ಕ್ಯಾನ್ಸರ್ ಗೆಡ್ಡೆಯಾಗಿದ್ದರೆ ಚಿಕಿತ್ಸೆಯ ಮೂಲ ಗುಣಪಡಿಸಿಕೊಳ್ಳುವುದು ಸುಲಭವಾಗುತ್ತದೆ.

ಅದನ್ನು ಬಿಟ್ಟು ಇದು ಮಾಮೂಲು ಗಡ್ಡೆಯೇ ಇರಬೇಕು ಎಂದು ಆಲಕ್ಷ ಮಾಡಿ,ಅನಂತರ ಯಾವಾಗಲೋ ಅದು ಕ್ಯಾನ್ಸರ್ ಗಡ್ಡೆಯೆಝದು ಕಂಡುಹಿಡಿದು, ಟ್ರೀಟ್ ಮೆಂಟ್ ಮಾಡಿಸಿಕೊಳ್ಳಲು ಪ್ರಯತ್ನಿಸಿದರೆ ಪ್ರಯೋಜನವಾಗದು .

ಇನ್ನೊಂದು ವಿಷಯವೂ ಇದೆ ಕೆಲವು ಸಾಧಾರಣ ಗಡ್ಡೆಗಳು ಕೂಡಾ ಕೆಲವು ಕಾಲದ ನಂತರ ಕ್ಯಾನ್ಸರ್ ಗಡ್ಡೆಗಳಾಗಿ ರೂಪಗೊಳ್ಳುವ ಸಂಭವವಿದೆ.

ಸಾಮಾನ್ಯವಾಗಿ ಕ್ಯಾನ್ಸರ್ ವಯಸ್ಸು ಮೀರಿದ ಮೇಲೆ ಬರುವ ವ್ಯಾದಿಯೆಂದು ಸ್ವಾಭಾವಿ ಭಾವಿಸುತ್ತಾದೆ 45 ವರ್ಷಗಳು ದಾಟಿದವರಿಗೆ ಬರಲು ಹೆಚ್ಚು ಅವಕಾಶಗಳಿವೆ ಹಾಗೆಂದು ಚಿಕ್ಕ ವಯಸ್ಸಿನಲ್ಲಿ ಬರುವುದಿಲ್ಲವೆಲ್ಲ.

ಕ್ಯಾನ್ಸರ್ ಯಾವ ವಯಸ್ಸಿನಲ್ಲಾದರೂ ಬರಬಹುದು. ಆದರೆ ವಯಸ್ಸಾದವರಿಗೆ ಬರುವ ಸಂಭವ  ಹೆಚ್ಚು.

ಕ್ಯಾನ್ಸರ್ ಎನ್ನುವುದು, ತೋಟದಲ್ಲಿ ಬೆಳೆಯುವ ಕಳೆಯಂತೆ ಪ್ರಾರಂಭದಲ್ಲಿಯೇ ಕಿತ್ತು ಹಾಕಿದರೆ ಯಾವ ಅಪಾಯವೂ ಇರದು. ನಿರ್ಲಕ್ಷ ಮಾಡಿ ಬಿಟ್ಟುಬಿಟ್ಟರೆ ಸುತ್ತಮುತ್ತ ವ್ಯಾಪಿಸುತ್ತದೆ. ಆಗ ಅರೋಗ್ಯಕ್ಕೆ ಹಾನಿಯಾಗುವುದು, ಸುತ್ತಲಿನ ಕಣಜಾಲಗಳು ನಾಶವಾಗುವುದು ಚಿಕಿತ್ಸೆಗೆ ಕೈ ಮೀರಿದ ಸ್ಥಿತಿಯನ್ನು ತಲುಪುವುದು ಖಂಡಿತ. 

ಯಾವಾಗಲಾದರೂ ಸರಿ, ಕ್ಯಾನ್ಸರ್ ಎಂದು ಸಂಶಯ ಬಂದ ಕೂಡಲೇ ಜನರಲ್ ಸರ್ಜನ್ ಅಥವಾ ಕ್ಯಾನ್ಸರ್ ಸ್ಪೆಷಲಿಸ್ಟ್, ಇಲ್ಲವೇ ಕ್ಷಾನ್ಸರ್ ಆಸ್ಪತ್ರೆ ಆಸ್ಪತ್ರೆಯನ್ನು ಸಂಪರ್ಕಿಸಿ ಸಂಶಯ ನಿವಾರಣೆ  ಮಾಡಿಕೊಳ್ಳುವುದು ಒಳ್ಳೆಯದು.

ಗಡ್ಡೆ ಒಳಗಿದೆಯೇ, ಅಥವಾ ಹೊರಗೆ ಕಾಣಿಸುತ್ತಿದೆಯೇ ಎಂಬುದಕ್ಕನುಗುಣವಾಗಿ ಬಯಾಪ್ಸಿ  ಗಡ್ಡೆಯಿಂದ ಕೆಲವು ಕಣಜಾಲಗಳನ್ನು ತೆಗೆದು  ಮೈಕ್ರೋಸ್ಕೋಪ್ನ ಮೂಲಕ ಪರಿಚಯಿಸುವುದು.

ಗಡ್ಡೆಯ ಒಳಭಾಗದಲ್ಲಿದರೆ Gastroscope ಇಲ್ಲವೇ Sigmoidoscope ಮೂಲಕಗ ಬಯಾಪ್ಸಿ ಮಾಡುತ್ತಾರೆ. ಕಿಬ್ಬೊಟ್ಟೆಯೊಳಗಿದ್ದರೆ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ  ಮೂಲಕ ಬಯಾಪ್ಸಿ ಮಾಡುತ್ತಾರೆ.

ಯಾವಾಗಲಾದರೂ ಸರಿ, ಶರೀರದ ಒಳಗಾಗಲಿ, ಹೊರಗಾಗಲಿ ಗಡ್ಡೆ Tumour ಕಾಣಿಸಿಕೊಂಡಾಗ ಅದು ಕ್ಯಾನ್ಸರಿಗೆ ಸಂಬಂಧಿಸಿದ್ದೇ,  ಅಲ್ಲವೇ ಎಂದು ತಿಳಿದುಕೊಳ್ಳಲು ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವುದು  ಅತ್ಯಗತ್ಯ.