ಮನೆ ಮನೆ ಮದ್ದು ಆರೋಗ್ಯ ವೃದ್ಧಿಗಾಗಿ

ಆರೋಗ್ಯ ವೃದ್ಧಿಗಾಗಿ

0
  1. ಊಟ ಆದ 2 ಗಂಟೆಗಳ ನಂತರ ಮಲಗುವ ಮುನ್ನ ಬಿಸಿ ಹಾಲನ್ನು, ಕಡಿಮೆ ಸಕ್ಕರೆ ಬೆರೆಸಿ ಕುಡಿಯುತ್ತಿದ್ದರೆ ಆರೋಗ್ಯ ವೃದ್ಧಿ ಆಗುವುದು.
  2. ಚಳಿಗೆ ಮುಖದಲ್ಲಿ ಚರ್ಮ ಒಡೆದಾಗ ಹಾಲಿನ ಕೆನೆಯನ್ನು ಹಚ್ಚಿಕೊಂಡರೆ ಶೀಘ್ರವೇ ಒಡಕು ಮಾಯ ಆಗುವುದು.
  3. ಪ್ರತಿದಿನವೂ ಎದ್ದಾಗ ಒಂದು ಬಟ್ಟಲು ನೊರೆ ಹಾಲನ್ನು ದಿನವೂ ಸೇವಿಸುತ್ತಿದ್ದರೆ ಆರೋಗ್ಯ ವೃದ್ಧಿಸುವುದು.
  4. ಪ್ರತಿದಿನವೂ ಸೇಬು ಹಣ್ಣನ್ನು ಊಟ ಆದ ನಂತರ ಸೇವಿಸುವುದರಿಂದ ಆರೋಗ್ಯ ವೃದ್ಧಿಸುವುದರೊಂದಿಗೆ ಮುಖದಲ್ಲಿ ಕಳೆ ಹೆಚ್ಚುವುದು.
  5. ಮಾವಿನ ಹಣ್ಣನ್ನು ದಿನವು ಮಿತವಾಗಿ ಸೇವಿಸುವುದರಿಂದ ಆರೋಗ್ಯ ವೃದ್ಧಿಸುವುದರೊಂದಿಗೆ ಜೀವ ಕಳೆಯೂ ಅಧಿಕಗೊಳ್ಳುವುದು.
  6. ದಿನವೂ ಊಟ ಆದ ನಂತರ ಬಾಳೆಹಣ್ಣು ತಿನ್ನುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುವುದರೊಂದಿಗೆ,ಆರೋಗ್ಯ ವೃದ್ಧಿಸುವುದು.
  7. ದಿನವೂ ನೆಲ್ಲಿಕಾಯಿಯ ಮೊರಬ್ಬಾ ಸೇವನೆಯಿಂದ ಶರೀರದಲ್ಲಿ ಲವಲವಿಕೆ ಹೆಚ್ಚಾಗುವುದರೊಂದಿಗೆ ಆರೋಗ್ಯ ವೃದ್ಧಿಸುವುದು .
  8. ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ,ಮಕ್ಕಳಿಗೆ ಕುಡಿಸುವುದರಿಂದ ರಕ್ತ ಶುದ್ಧಿಯಾಗಿ ಆರೋಗ್ಯ ಸುಧಾರಿಸುವುದು.
  9. ಅಡಿಗೆ ಉಪ್ಪನ್ನು ದೇಹದ ಭಾಗಗಳಿಗೆ ತಿಕ್ಕಿ ಸ್ನಾನ ಮಾಡುವುದರಿಂದ ರಕ್ತ ಸಂಚಾರದಲ್ಲಿ ತೀವ್ರತೆ ಹೆಚ್ಚಿ, ಆರೋಗ್ಯ ವೃದ್ಧಿಸುವುದು.
  10. ಕಡಲೆಕಾಯಿ ಎಣ್ಣೆ ಲೇಪಿಸಿಕೊಂಡು, ದಿನವೂ ಕೆಲಕಾಲ ಎಳೆ ಬಿಸಿನಲ್ಲಿ ನಿಂತು ಸ್ನಾನ ಮಾಡುವುದರಿಂದ ಕೈಕಾಲುಗಳಿಗೆ ಶಕ್ತಿ ಹೆಚ್ಚುವುದರೊಂದಿಗೆ ಆರೋಗ್ಯ ಸುಧಾರಣೆಯು ಆಗುವುದು.
  11. ಕುಂಬಳಕಾಯಿಯನ್ನು ಅಡಿಗೆಯಲ್ಲಿ ವಿವಿಧ ರೀತಿಯಲ್ಲಿ ಬಳಸುವುದರಿಂದ ಆರೋಗ್ಯ ಸ್ಥಿತಿ ಸುಧಾರಿಸುವುದು.
  12. ಹಸಿ ಬಟಾಣಿಯನ್ನು ನೀರಿನಲ್ಲಿ ಬೇಯಿಸಿ ಉಪ್ಪು, ಬೆರೆಸದೆ ತಿನ್ನುತ್ತಿದ್ದರೆ ಆರೋಗ್ಯ ಸ್ಥಿತಿ ಸುಧಾರಿಸುವುದು.
  13. ಇದೇ ರೀತಿ ಬೇಯಿಸಿದ ಬಟಾಣಿಯನ್ನು ಟೊಮೇಟೊ ಹಣ್ಣಿನ ಚೂರುಗಳೊಂದಿಗೆ ಬೆರೆಸಿ ತಿನ್ನುವುದರಿಂದಲೂ ಆರೋಗ್ಯ ವೃದ್ಧಿಸುವುದು.
  14. ಬೂದಗುಂಬಳದ ಸೇವನೆಯಿಂದ ಆರೋಗ್ಯ ವೃದ್ಧಿಸುವುದು.
  15. ಮುಸುಕಿನ ಜೋಳವನ್ನು ಬರಿಯ ಹೊಟ್ಟೆಯಲ್ಲಿ ತಿನ್ನುವುದರಿಂದ ದೈಹಿಕ ಶಕ್ತಿ ಹೆಚ್ಚಿ ಆರೋಗ್ಯ ಸುಧಾರಿಸುವುದು.
  16. ನೆನೆಸಿದ್ದ ರಾಗಿಯಲ್ಲಿ ಹಾಲನ್ನು ತೆಗೆದು, ಕಾಯಿಸಿ ಅದಕ್ಕೆ ಲವಂಗ, ಧಾಲ್ಚಿನಿ, ಹಾಲು ಹಾಗೂ ಸಕ್ಕರೆ ಸೇರಿಸಿ, ದಿನವೂ ಕುಡಿಯುತ್ತಿದ್ದರೆ ಶಾರೀರಿಕ ಶಕ್ತಿ ಹೆಚ್ಚುವುದರೊಂದಿಗೆ. ಆರೋಗ್ಯವೃದ್ಧಿ ಆಗುವುದು.
  17. ನವಿಲುಕೋಸು ಹಸಿಯಾಗಿ ತುರಿದು,ಕೊಸುಂಬರಿ ಮಾಡಿ ತಿಂದರೆ ರಕ್ತ ವೃದ್ಧಿ ಆಗುವುದರೊಂದಿಗೆ ಆರೋಗ್ಯ ವೃದ್ಧಿಯೂ ಹೆಚ್ಚುವುದು.
  18. ಖರ್ಜೂರದ ಹಣ್ಣನ್ನು ಬೂರಾ ಸಕ್ಕರೆಯಲ್ಲಿ ಬೆರೆಸಿ ತಿನ್ನುವುದರ ಮೂಲಕ ಬೂರಾ ಸಕ್ಕರೆಯಲ್ಲಿ ಬೆರೆಸಿ ಪಾನಕ ಮಾಡಿ ಕುಡಿಯುವುದರಿಂದ ರಕ್ತ ಸುದ್ದಿ ಆಗುವುದರೊಂದಿಗೆ ಆರೋಗ್ಯವು ಹೆಚ್ಚುವುದು.
  19. ಅವರೇಬೇಳೆಯೊಂದಿಗೆ ಗೋಣಿಸೊಪ್ಪನ್ನು ಸಾರು ಮಾಡಿ,ಊಟದಲ್ಲಿ ಸೇವಿಸುವುದರಿಂದ ದೇಹದಲ್ಲಿ ತಂಪು ಹೆಚ್ಚಿ. ಆರೋಗ್ಯ ಸುಧಾರಿಸುವುದು.
  20. ಚಪ್ಪರದವರೆಕಾಯಿ ಪಲ್ಯ ಹಾಗೂ ಬಸಿದು ಸಾರು ಮಾಡಿಕೊಂಡು ಊಟ ಮಾಡುವುದರಿಂದ ಆರೋಗ್ಯ ಸುಧಾರಿಸುವುದು.
  21. ಬಲಿತ ಚಕ್ರಮುನಿ ಸೊಪ್ಪನ್ನು ಚೆನ್ನಾಗಿ ಒಣಗಿಸಿ ತುಪ್ಪದಲ್ಲಿ ಹರಿದು, ಒಣಗಿದ ಮೆಣಸಿನಕಾಯಿ, ಉಪ್ಪು, ಹುಣಸೆಹಣ್ಣು ಬೆರೆಸಿ, ಕುಟ್ಟಿ ಪುಡಿ ಮಾಡಿದ ಚಟ್ನಿಪುಡಿ ಬಳಸುವುದರಿಂದ ದೈಹಿಕ ಶಕ್ತಿ ವೃದ್ಧಿಸುವುದರೊಂದಿಗೆ ಆರೋಗ್ಯ ವೃದ್ಧಿಯೂ ಆಗುವುದು.
  22. ದೇಹದ ಬೆಳವಣಿಗೆಯಲ್ಲಿ ಪೊಟಾಶಿಯಂ ಲವಣಗಳ ಕೊರತೆ ಇದ್ದಾಗ ತುಪ್ಪದ ಹೀರೆಕಾಯಿಯನ್ನು ಅಡಿಗೆಯಲ್ಲಿ ಬಳಸುವುದರಿಂದ ದೈಹಿಕ ಶಕ್ತಿ ಹೆಚ್ಚುವುದರೊಂದಿಗೆ ಆರೋಗ್ಯ ಸುಧಾರಣೆಯೂ ಆಗುವುದು.
  23. ತೊಂಡೆಕಾಯಿ ಪಲ್ಯವನ್ನು ವಾರದಲ್ಲಿ ಎರಡು ಮೂರು ಬಾರಿ ಆದರೂ ಸೇವಿಸುವುದರಿಂದ ಅನ್ನಾಂಗಗಳು ಒದಗಿ,ಆರೋಗ್ಯ ವೃದ್ಧಿಸುವುದು.
  24. ಸೀತಾಫಲದ ಹಣ್ಣುಗಳನ್ನು ತಿನ್ನುವುದರಿಂದ ಮಾಂಸ ಖಂಡಗಳಿಗೆ ಶಕ್ತಿ ಹೆಚ್ಚಿ, ನರ ದೌರ್ಬಲ್ಯ ಕಡಿಮೆ ಆಗುವುದರೊಂದಿಗೆ ಆರೋಗ್ಯ ಸುಧಾರಿಸುವುದು .