1. ರಸಭರಿತವಾದ ಕಬ್ಬಿನ ರಸವನ್ನು ಹಿತಮಿತವಾಗಿ ಕುಡಿದರೆ ಆಯಾಸ ಪರಿಹಾರ ಆಗುವುರೊಂದಿಗೆ ಶರೀರದಲ್ಲಿ ಲವಲವಿಕೆ ಹೆಚ್ಚುವುದು.
2. ಮೋಸಂಬಿ ಹಣ್ಣಿನ ರಸವನ್ನು ಸೇವಿಸುವುದರಿಂದ ಹಣ್ಣುಗಳಲ್ಲಿ ಹೊಳಪು ಹೆಚ್ಚುವುದಲ್ಲದೆ ದಣಿವು ನಿವಾರಣೆ ಆಗುವುದು.
3. ಕಿತ್ತಲೆ ಹಣ್ಣಿನ ರಸವನ್ನು ಕುಡಿಯುವುದರಿಂದ ರಕ್ತಶುದ್ದಿ ರಕ್ತವೃದ್ಧಿ ಆಗುವುದಲ್ಲದೆ ಆಯಾಸ ಕಡಿಮೆ ಆಗುವುದು.
4. ಕೆಂಪು ಮೂಲಂಗಿಯನ್ನು ತುರಿದು, ಕೋಸುಂಬರಿ ಮಾಡಿ ಸೇವಿಸುವುದರಿಂದ ಆಯಾಸ ಪರಿಹಾರದ ಜೊತೆಗೆ ಕೆಲಸ ಕಾರ್ಯಗಳನ್ನು ಮಾಡುವಾಗ ಹೊಸ ಹುರುಪು ಬರುವುದು
5. ಹಸಿಯ ಅಳಸುಂಡೆ ಕಾಳನ್ನು ಬೆಲ್ಲದೊಂದಿಗೆ ಚೆನ್ನಾಗಿ ಅಗಿದು ತಿನ್ನುವುದರಿಂದ ಅಲಸ್ಯ ದೂರ ಆಗುವುದಲ್ಲದೆ ಆಯಾಸ ಪರಿಹಾರ ಆಗುವುದು.
6. ಗರಿಕೆ ಹುಲ್ಲಿನ ರಸ ಸೇವಿಸುತ್ತಿದ್ದರೆ ದಣಿವು, ಬಳಲಿಕೆ ಕಡಿಮೆ ಆಗುವುದು
7. ಒಂದು ಬಟ್ಟಲು ಮಾವಿನ ಹಣ್ಣಿನ ರಸವನ್ನು ಅಷ್ಟೇ ಪ್ರಮಾಣದ ಹಾಲಿನೊಂದಿಗೆ ಬೆರೆಸಿ,ಒಂದು ಟೀ ಸ್ಪೂನಿನಷ್ಟು ದಿನವೂ ಜೇನುತುಪ್ಪ ದೊಂದಿಗೆ ಸೇವಿಸುತ್ತಿದ್ದರೆ ದಣಿವು ದೂರ ಆಗುವುದು.
8. ಬೆಲ್ಲದ ನೀರಿಗೆ ನಿಂಬೆಹಣ್ಣಿನ ರಸವನ್ನು ಬೆರೆಸಿ ಕುಡಿಯುವುದರಿಂದಲೂ ಆಯಾಸ ಪರಿಯರ ಆಗುವುದು.
9. ಕಲ್ಲಂಗಡಿ ಹಾಗೂ ಕರ್ಬೂಜದ ಹಣ್ಣಿನ ಪಾನಕವನ್ನು ಸೇವಿಸುವುದರಿಂದ ಬಿಸಿಲಿನ ಬವಣೆಯಲ್ಲ ಆಯಾಸ ದೂರ ಆಗುವುದು.