ಮನೆ ರಾಜಕೀಯ ಬಿಜೆಪಿಯವರು ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದಾರೆ: ಈಶ್ವರ ಖಂಡ್ರೆ

ಬಿಜೆಪಿಯವರು ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದಾರೆ: ಈಶ್ವರ ಖಂಡ್ರೆ

0

ಬೀದರ್:‌ ಹಿಂಬಾಗಿಲಿನಿಂದಲೇ ಬಂದು ಅಧಿಕಾರ ನಡೆಸುವುದು ಬಿಜೆಪಿಗರ ಚಾಳಿಯಾಗಿದೆ. ಮತ್ತೆ ಈಗ ಅದೇ ರೀತಿಯಲ್ಲಿ ಮಾಡಬೇಕೆಂಬ ಭ್ರಮೆಯಲ್ಲಿದ್ದಾರೆ, ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

Join Our Whatsapp Group

ನಗರದಲ್ಲಿ ರವಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ನೇರ ದಾರಿಯಲ್ಲಿ ಬಂದು ಎಂದೂ ಅಧಿಕಾರ ನಡೆಸಿಲ್ಲ. ಎರಡು ಬಾರಿ ಹಿಂಬಾಗಿನಿಂದಲೇ ಅಧಿಕಾರಕ್ಕೆ ಬಂದಿದೆ. ಜನರ ಆಶೀರ್ವಾದ ಬಿಜೆಪಿಗರಿಗೆ ಯಾವತ್ತೂ ಸಿಕ್ಕಿಲ್ಲ. ಶಾಸಕರನ್ನು ಖರೀದಿಸಲು ನೂರು ಕೋಟಿ ಬಿಜೆಪಿಯವರಿಗೆ ಎಲ್ಲಿಂದ ಬರುತ್ತಿದೆ. ಇಡಿ, ಐಟಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಗಟ್ಟಿಯಾಗಿದ್ದು, ಐದು ವರ್ಷಗಳವರೆಗೆ ನಾವೇ ಸುಭದ್ರ ಸರ್ಕಾರ ನಡೆಸುತ್ತೇವೆ. ಅಷ್ಟೇ ಅಲ್ಲ ಮುಂದಿನ ಅವಧಿಗೂ ಸಹ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದುರ.

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಅರೋಪಕ್ಕೆ ಪ್ರತಿಕ್ರಯಿಸಿದ ಖಂಡ್ರೆ, ಹಾದಿ ಬೀದಿಯಲ್ಲಿ ಹೋಗುವವರ ಕಡೆ ದೂರು ಕೊಡಿಸಿದರೆ ಸರ್ಕಾರ ನಡೆಸಲು ಆಗುತ್ತದೆಯೇ? ಹೋಗುತ್ತಾ ಹೋಗುತ್ತಾ ಯಾರ‍್ಯಾರ ಮೇಲೆ ದೂರು ಕೊಡುತ್ತಾರೆ, ಹಾಗೆಂದು ಅವರನ್ನೆಲ್ಲಾ ರಾಜೀನಾಮೆ ಕೊಡಿಸಲು ಆಗುತ್ತಾ? ಎಲೆಕ್ಟ್ರೋಲ್ ಬಾಂಡ್ ಮೂಲಕ್ 2,400 ಕೋಟಿ ಲೂಟಿಯಾಗಿದೆ. ಈ ಪ್ರಕರಣಕ್ಕೆ ಪ್ರಧಾನಿ ಮೋದಿ ರಾಜೀನಾಮೆ ಕೊಡುತ್ತಾರಾ? ಈ ವಿಚಾರಕ್ಕೆ ಅಮಿತ್ ಶಾ ಅವರ ರಾಜೀನಾಮೆ ಕೇಳಲಿ ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದರು.