ಹತ್ತಿ ಬಂದೆ ನಾ ||
ನಿನ್ನ ನೋಡಲೇಳು ಬೆಟ್ಟ ಹತ್ತಿ ಬಂದೆ ನಾ |
ಹೊತ್ತು ತಂದೆ ನಾ||
ನನ್ನ ಭಕ್ತಿ ಬುತ್ತಿಯನ್ನು ಹೊತ್ತು ತಂದೆ ನಾ |
ಹತ್ತಿ ಬಂದೆ ನಾ ||
ನಿನ್ನ ನೋಡಲೇಳು ಬೆಟ್ಟ ಹತ್ತಿ ಬಂದೆ ನಾ |
ಬಿಸಿಲಂತೆ ಸುಡು, ಬಿಸಿಲಂತೆ |
ಭೂಮಿ ತಾಯಿ ಬಾಯಿ ಬಿಟ್ಟು ಕೊಂಡಳಂತೆ |
ನಡೆಯುವವರ ಪಾದವೆಲ್ಲ |
ಬೊಂಬೆ ಎದ್ದು ತಲೆಸುತ್ತಿ ಬಿದ್ದರಂತೆ |
ತಿಳಿದಿಲ್ಲಾ ನನಗೆ ತಿಳಿದಿಲ್ಲ
ನಿನ್ನ ನಾಮ ಜಪಿಸುತ ಬಂದೇನಲ್ಲ ||
ಕಲ್ಲಿರಲ್ಲಿ ಮುಳ್ಳಿರಲಿ ಬೃಂಗಕೆಶ ಎಂಬರಲ್ಲಿ ನೋವಿಲ್ಲ |
ನಿನ್ನ ತುಂಬಿಕೊಂಡ ಜೀವಕ್ಕೆಲ್ಲ ಭಯವಿಲ್ಲ || ಹತ್ತಿ ||
ಓಂ ವೆಂಕಟೇಶಾಯ ನಮಃ |
ಓಂ ತಿರುಮಲೇಶಾಯ ನಮಃ |
ಓಂ ಶೇಷಾದ್ರಿವಾಸಾಯ ನಮಃ | ಓಂ|
ಎಲ್ಲ ಕೊಟ್ಟೆ ನನಗೆಲ್ಲ ಕೊಟ್ಟೆ |
ಅಷ್ಟೈಶ್ವರ್ಯ ಬಾಕಿ ಬಾಚಿ ಚೆಲ್ಲಿ ಬಿಟ್ಟೆ |
ಕೀರ್ತಿ ಕೊಟ್ಟೆ ಒಳ್ಳೆ ಬಿರುದು ಕೊಟ್ಟೆ|
ಮೀಸೆ ತಿರುವಿ ಮರೆಯೋದಕ್ಕೆ ರಾಜ್ಯ ಕೊಟ್ಟೆ |
ಎಲ್ಲ ಇದ್ದು ತೃಪ್ತಿಯಿಲ್ದೆ ಕೂತುಬಿಟ್ಟೆ|
ಏನೋ ಒಂದು ಕೊರತೆ ಅಂತ ಕೊರಗಿಬಿಟ್ಟೆ |
ನಿನ್ನ ಪೂಜೆ ಮಾಡೋದನ್ನ ಮರೆತುಬಿಟ್ಟೆ |
ಭಕ್ತಿತುಂಬೋ ಮನಸನ್ನ ಕಾಲಿ ಇಟ್ಟೆ|
ಅದರೂನು ನನ್ನ ನಿನ್ನ ಕ್ಷಮಿಸಿಬಿಟ್ಟೆ |
ಭಕ್ತ ಎಂದು ಬಾಚಿ ನನ್ನ ಅಪ್ಪಿಕೊಂಡೆ |
ಜನ್ಮಪೂರ್ತಿ ನಿನ್ನ ಹೆಸರ ಮನಸಿಲಿಟ್ಟೆ |
ನನ್ನ ಮನಸಿಲಿಟ್ಟೆ ||ಹತ್ತಿ ||