ಮನೆ ಮನೆ ಮದ್ದು ಅಸ್ತಮ

ಅಸ್ತಮ

0

1. ಮೆಂತ್ಯ ಮತ್ತು ಓಮಕಾಳುಗಳನ್ನು ಸರಿ ಪ್ರಮಾಣದಲ್ಲಿ ಬೆರೆಸಿ ಕಷಾಯ ಮಾಡಿ, ಜೇನುತುಪ್ಪ ಬೆರೆಸಿ, ದಿನವೂ ಮೂರು ಮೂರು ಬಾರಿ ಸೇವಿಸುತ್ತಿದ್ದರೆ ಆಸ್ತಮ ರೋಗ ಕ್ರಮೇಣ ದೂರ ಆಗುವುದು.

Join Our Whatsapp Group

 ಆಹಾರ ರುಚಿಸದಿದ್ದಾಗ :-

1. ಒಂದು ಚೂರು ಹಸಿ ಶುಂಠಿ ಹಾಗೂ ಒಂದು ಚಿಟಿಕೆ ಕರಿಮೆಣಸಿನ ಪುಡಿಯನ್ನು ತಿಂದರೆ,ಸಪ್ಪೆ ನಾಲಿಗೆಗೆ ಆಹಾರ ಹೆಚ್ಚು ರುಚಿಸುವುದು.

 ಅಲ್ಸರ್ ಕಾಯಿಲೆ :-

1. ಅಲ್ಸರ್ ಖಾಯಿಲೆಯಿಂದ ನರಳುತ್ತಿರುವ ರೋಗಿಗಳು ಸೇಬಿನ ಹಣ್ಣಿನ ರಸವನ್ನು ದೀರ್ಘಕಾಲ ಸೇವಿಸುತ್ತಾ ಬಂದರೆ ಆನ್ಸರ್ ಖಾಯಿಲೆಯಿಂದ ಬೇಗ ಗುಣಮುಖರೆನಿಸುವರು.

2. ನೇಂದ್ರ ಬಾಳೆಹಣ್ಣನ್ನು ಚೆನ್ನಾಗಿ ಬೇಯಿಸಿ, ಅದಕ್ಕೆ ಶುಂಠಿ, ಯಾಲಕ್ಕಿಪುಡಿ ಜೀರಿಗೆಪುಡಿ, ಬೆಲ್ಲ ಸೇರಿಸಿ ದಿನವು ಸೇವಿಸುವುದರಿಂದ ಆಲ್ಸರ್ ಖಾಯಿಲೆ ಅತಿ ಕ್ಷಿಪ್ರದಲ್ಲಿಯೇ  ಕ್ಷೀಣಿಸುವುದು.

 ಎದೆ ನೋವು :-

1. ಒಂದು ದೊಡ್ಡ ಬಟ್ಟಲು ತಣ್ಣೀರು ಮತ್ತು ನಿಂಬೆ ರಸವನ್ನು ಒಂದು ವಾರದವರೆಗಾದರೂ ಸೇವಿಸುತ್ತಿದ್ದರೆ ಎದೆ ನೋವು ಕಡಿಮೆ ಆಗುವುದು.

2. ಕುತ್ತುಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ,ಈ ಪುಡಿಯನ್ನು ನೀರಿನಲ್ಲಿ ನೆನೆಹಾಕಿ ಚೆನ್ನಾಗಿ ಕಿವುಚಿ ಶೋಧಿಸಿ, ಕಷಾಯಕ್ಕೆ ಹಾಲು, ಸಕ್ಕರೆ ಬೆರೆಸಿ ಸೇವಿಸಿದರೆ ಎದೆನೋವು ಕಡಿಮೆ ಆಗುವುದು .

3. ಬೀಜ ಬಲಿಯದ ಸೀಬೆಕಾಯಿಗಳ ಕಷಾಯವನ್ನು ಸಿದ್ಧಪಡಿಸಿ, ಮಜ್ಜಿಗೆಯೊಂದಿಗೆ ಕುಡಿದರೆ ಎದೆನೋವು ಕಡಿಮೆ ಆಗುವುದು.

4. ಕೊತ್ತುಂಬರಿ ಸೊಪ್ಪನ್ನು ತಂಗಿನ ಎಳನೀರಿನೊಂದಿಗೆ ರುಬಿ, ಕಲ್ಲು ಸಕ್ಕರೆ,ಏಲಕ್ಕಿ ಪುಡಿ ಸೇರಿಸಿ ದಿನವೂ ಒಂದೊಂದೇ ಬಾರಿ ಸೇವಿಸುತ್ತಿದ್ದರೆ ಎದೆ ನೋವು ಕಡಿಮೆ ಆಗುವುದು .

5. ದಾಳಿಂಬೆ ಹಣ್ಣನ್ನು ತಿನ್ನುತ್ತಿದ್ದರೆ ಕೆಮ್ಮುಸಹಿತ ಉಂಟಾಗುವ ಎದೆನೋವು, ನಿವಾರಣೆ ಆಗುವುದು.