ಮನೆ ಯೋಗಾಸನ ಅನಂತಾಸನ

ಅನಂತಾಸನ

0

     ‘ಅನಂತ’ ನೆಂಬ ಹೆಸರು ಅನಾದಿ ಯೆನಿಸಿದ ವಿಷ್ಣುವಿಗೂ ಮತ್ತು ಆತನ ಹಾಸಿಗೆಯೆನಿಸಿದ ಆದಿಶೇಷನಿಗೂ ಅನ್ವಯಿಸುತ್ತದೆ. ಪೌರಾಣಿಕ ಕಥೆಯೊಂದು ಹೀಗಿದೆ: ಚತುರ್ಯುಗಗಳ ಕೊನೆಯಲ್ಲಿ ಜಲಪ್ರಳಯವಾಗಿ ಪ್ರಪಂಚವೆಲ್ಲವೂ ನೀರಿನಿಂದ ತುಂಬಿಕೊಳ್ಳುವುದು.ಆಗ ಸೃಷ್ಟಿಸ್ಥಿತಿಲಯಗಳಿಗೆ  ಕಾರಣನಾಗಿ ಚೇತನಸ್ವರೂಪನೆನಿಸಿದ ಶ್ರೀ ಮಹಾ ವಿಷ್ಣುವು ಸಹಸ್ರದೆಡೆಗಳಿಂದ ಕೂಡಿದ ಆದಿಶೇಷನ ಮೇಲೆ ಪವಡಿಸಿ ಆ ನೀರಿನ ಮೇಲೆ ಯೋಗ ನಿದ್ರೆಯಲ್ಲಿ ನೆಲೆಸಿರುತ್ತಾನೆ. ಆಗ ‘ಸೋಕಾಮಯತ’ ಎಂಬ ಶ್ರುತಿ ವ್ಯಾಕ್ಯದಂತೆ ಮತ್ತೆ ಪ್ರಪಂಚ ಸೃಷ್ಟಿಯನ್ನು ಸಮಸ್ತಜೀವ ರಾಶಿಗಳಡನೆ  ಅನುಗೊಳಿಸಬೇಕೆಂಬ ಬಯಕೆ ಆ ವಿಷ್ಣು ದೇವನಿಗೆ  ತಲೆದೂರಿದ ತತಕ್ಷಣವೇ ಆತನ ನಾಭಿಕಮಲದಲ್ಲಿ ಚತುರ್ಮುಖಬ್ರಹ್ಮನು  ಜನಿಸಿ, ಆತನು ತನ್ನ ಜನ್ಮದಾತನಾದ ಸ್ವಾಮಿಯ ಆಜ್ಞೆಯಂತೆ ಹಿಂದಿನಂತೆಯೇ ಜಗದುತ್ವತ್ತಿ ಜೀವಿಗಳ ಸೃಷ್ಟಿ ಮೊದಲಾದವುಗಳನ್ನು ಕೈಗೊಳ್ಳುತ್ತಾನೆ ಆ ಮಹಾ ಸ್ವಾಮಿಯೇ  ತಾನು ಬ್ರಹ್ಮ ವಿಷ್ಣು ಮಹೇಶ್ವರನೆಂಬ ಮೂರು ಭಾಗಗಳಾಗಿ ವಿಂಗಡಹೊಂದಿ ಕ್ರಮವಾಗಿ ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣನಾದನೆಂದೂ, ಈ ಕಾರ್ಯ ನೆರವೇರಿದ ಮೇಲೆ, ‘ಅನಂತಪದ್ಮನಾಭ’ ಎಂಬ ಅನ್ವರ್ಥನಾಮದಿಂದ ‘ಅನಂತಶಯನ’ ನಾಗಿ ಅದೇ ಹೆಸರಿನ ಸ್ಥಳದಲ್ಲಿ ಅಂದರೆ ಈಗಿನ ತಿರುವನಂತಪುರದಲ್ಲಿ ಯೋಗ ನಿದ್ರೆಯಿಂದ ಪವಡಿಸಿ ಅಸಂಖ್ಯಾತ ಭಕ್ತರ ಕೈಕಾರ್ಯವನ್ನು ಸ್ವೀಕರಿಸುತ್ತಿದ್ದಾನೆ ಎಂಬ ನಂಬಿಕೆಯಿಂದೆ. ಇಂಥ ಅನಂತ ಪದ್ಮನಾಭಸ್ವಾಮಿಯ ಹೆಸರಿಗೆ ಈ ಆಸನವು ಮೀಸಲಾಗಿದೆ.

Join Our Whatsapp Group

 ಅಭ್ಯಾಸ ಕ್ರಮ

1. ಮೊದಲು ಬೆನ್ನನ್ನು ನೆಲದ ಮೇಲೂರಿ ಉದ್ದಕ್ಕೂ ಚಪ್ಪಟೆಯಾಗಿ ಮಲಗಬೇಕು. ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು, ಎಡಗಡೆಗೆ ತಿರುಗಿ, ದೇಹವನ್ನು ಒಂದು ಪಕ್ಕಕ್ಕೆ ನೆಲದ ಮೇಲೊರಗಿಸಬೇಕು.

2. ಆಮೇಲೆ, ತಲೆಯನ್ನು ಮೇಲೆತ್ತಿ, ಎಡಗೈಯನ್ನು ತಲೆಯಿಂದಾಚೆಗೆ ಅಂದರೆ ದೇಹವೂರಗಿಸಿದ ರೇಖೆಗೆ ಸರಿಯಾಗಿ ನೀಳವಾಗಿ ಚಾಚಿಡಬೇಕು.ಅನಂತರ ಎಡಮಣಕೈಯನ್ನು ಬಗ್ಗಿಸಿ, ಮುಂದೋಳನ್ನು ಮೇಲೆತ್ತಿ, ಎಡದಂಗೈಯನ್ನು  ಕಿವಿಯಿಂದ ಮೇಲಕ್ಕೆ ಊರುಗೊಟ್ಟಂತೆ ಇರಿಸಬೇಕು. ಈಭಂಗಿಯಲ್ಲಿ ಕೆಲವು ಸೆಕೆಂಡುಗಳ ಕಾಲ, ಸಾಮಾನ್ಯ ಇಲ್ಲವೇ ಆಳವಾದ ಉಸಿರಾಟದಿಂದ ನೆಲೆಸಬೇಕು.

3. ಆ ಬಳಿಕ, ಬಲಮಂಡಿಯನ್ನು ಬಗ್ಗಿಸಿ,ಬಲದುಂಗಟವನ್ನು ಬಲಗೈಯ ಮೊದಲ ಮೂರೂ ಬೆರಳುಗಳಿಂದ ಅಂದರೆ ಹೆಬ್ಬೆರಳು, ತೋರುಬೆರಳು, ಮತ್ತು ನಡುಬೆರಲಳುಗಳಿಂದ ಬಿಗಿಯಾಗಿ ಹಿಡಿದುಕೊಳ್ಳಬೇಕು.

4. ಇದಾದಮೇಲೆ,ಉಸಿರನ್ನು ಹೊರಬಿಟ್ಟು ಬಳಿಕ ಬಲಗಾಲ ಬಲತೋಳುಗಳನ್ನು ಒಟ್ಟಿಗೆ ನೆರವಾಗಿ ಹಿಗ್ಗಿಸಿಟ್ಟು ಆ ಭಂಗಿಯಲ್ಲಿ ಸಾಮಾನ್ಯ ಉಸಿರಾಟ ನಡೆಸುತ್ತಾ 15-20 ಸೆಕೆಂಡುಗಳ ಕಾಲ ನೆನೆಸಬೇಕು.

5. ತರುವಾಯ, ಉಸಿರನ್ನ ಹೊರ ಹೋಗಿಸಿ  ಬಲಮಂಡಿಯನ್ನು ಬಗಿಸಿ,ಆಮೇಲಿನ ಎರಡನೇ ಖಂಡದಲ್ಲಿ ವಿವರಿಸಿರುವ ಸ್ಥಿತಿಗೆ ಹಿಂದುರುಗಬೇಕು.

6. ಆಮೇಲೆ, ಎಡದಂಗೈಮೇಲಿರುವ ತಲೆಯನ್ನು ಮೆಲ್ಲಗೆ ನೆಲಕ್ಕಿ ಳಿಸಿ, ಬಳಿಕ ಬೆನ್ನ ಮೇಲೆ ನೆಲದಲ್ಲಿ ಚಪ್ಪಟೆಯಾಗಿ ಪವಡಿಸಬೇಕು.

7. ಈ ಭಂಯಗಿ ಅಭ್ಯಾಸವನ್ನು ಮತ್ತೊಂದು ಕಡೆಗೂ ನೇರವೇರಿಸಿ. ಆ ಭಂಗಿಯಲ್ಲಿ ಅಷ್ಟೇ  ಕಾಲ ನೆಲೆಸಿ ಬಳಿಕ ವಿಶ್ರಾಂತಿ ಪಡೆಯಬೇಕು.

ಪರಿಣಾಮಗಳು 

     ಈ ಆಸನದಿಂದ ವಸ್ತಿಕುಹದ ಭಾಗಗಳು ಉತ್ತಮವಾದ ವ್ಯಾಯಾಮವನ್ನು ಪಡೆಯುವುದಲ್ಲದೆ,ಜಾನುರಜ್ಜುಗಳ ಮಾಂಸಖಂಡಗಳು ಸರಿಯಾದ ಬಗೆಯಲ್ಲಿ ತಮ್ಮ ಕಾರ್ಯಗಳನ್ನು ಸರಿಯಾದ ಕ್ರಮದಲ್ಲಿ ನೆರವೇರಿಸುವವು. ಅಲ್ಲದೆ,ಆಸನವು ಬೆನ್ನ ನೋವನ್ನು ಕಳೆದು, ಅಂಡ ವಾಯುವು ಬರದಂತೆ  ತಡೆಯುತ್ತದೆ.