ಮನೆ ಜ್ಯೋತಿಷ್ಯ ಅಂಧಾದಿ ನಕ್ಷತ್ರಗಳ ಫಲ

ಅಂಧಾದಿ ನಕ್ಷತ್ರಗಳ ಫಲ

0

 ವಿನಷ್ಠಾರ್ಥಸ್ಯ ಲಾಭೇಂದೇ ಶೀಘ್ರಂ ಮಂದೇ ಪ್ರಯತ್ನತಃ|

 ಸ್ಯಾದ್ ದೂರೇ ಶ್ರವಣಂ ಮಧ್ಯೇ ಶ್ರುತ್ಯಾಪ್ತೀ ನ ಸುಲೋಚನೆ ||

Join Our Whatsapp Group

    ಅಂಧ ನಕ್ಷತ್ರದಲ್ಲಿ ಕಳೆದು ಹೋದ ಧನ ಶೀಘ್ರಪ್ರಾಪ್ತಿಯಾಗುತ್ತದೆ.ಮಂದಾಕ್ಷದಲ್ಲಿ ಪ್ರಯತ್ನ ಮಾಡಿದ ನಂತರ,ಮಧ್ಯಾಕ್ಷದಲ್ಲಿ ದೂರದಿಂದ ಕೇವಲ ಶ್ರಾವಣಮಾತ್ರವಾಗುತ್ತದೆ.ಅಂದರೆ ಇಂಥ ಸ್ಥಾನದಲ್ಲಿದೆ ಎಂಬುದು ಗೊತ್ತಾಗುತ್ತದೆ. ಆದರೆ,ಅದು ದೊರೆಯುವುದಿಲ್ಲ ಸಮಾಲೋಚನದಲ್ಲಿ ವ್ಯಾಪ್ತಿಯಾಗುವುದಿಲ್ಲ ಮತ್ತು ಧನದ ಕುರಿತು ಗೊತ್ತು ಆಗುವುದಿಲ್ಲ.

 ಧನ ಕೊಡು ಕೊಳ್ಳುವುದಕ್ಕೆ ವರ್ಜ್ಯ ನಕ್ಷತ್ರ : 

 ತೀಕ್ಷ್ಣಾ ಮಿಶ್ರಧ್ರುವೋಗೈರ್ಯದ್ ದ್ರವಂ ದತ್ತ ನಿವೇಶಿತಮ್|

 ಪ್ರಯುಕ್ತಶ್ಚವಿನಷ್ಟಂಶ ವಿಷ್ಟಯಾಂ ಪಾತೇ ನ ಚಾಪ್ಯತೇ||

    ತೀಕ್ಷ್ಣಸಂಜ್ಞಕಕ,ಮಿಶ್ರಸಂಜ್ಞಕ, ಧ್ರುವಸಂಜ್ಞಕ ಮತ್ತು ಉಗ್ರಸಂಜ್ಞಕ ನಕ್ಷತ್ರಗಳಲ್ಲಿ ಯಾರಿಗಾದರೂ ನೀಡಿದ ಅಥವಾ ಮುಚ್ಚಿಟ್ಟ ವ್ಯವಹಾರದಲ್ಲಿ ತೊಡಗಿಸಿದ ಅಥವಾ ನಷ್ಟವಾದ ಧನ ಪ್ರಾಪ್ತಿಯಾಗುವುದಿಲ್ಲ ಮತ್ತು ಅಂಧ್ಯಾಕ್ಷ,ಭದ್ರಾ ಹಾಗೂ ವ್ಯತಿಪಾತ ಯೋಗದಲ್ಲಿ ವ್ಯವಹಾರದಲ್ಲಿ ತೊಡಗಿಸಿದ ಧನ ಬೇಗ ಹಿಂದಿರುಗಿ ಕೈ ಸೇರುತ್ತದೆ.

 ಬಾವಿ ತೋರಿಸುವುದು ಮತ್ತು ಕಟ್ಟುವುದು :

 ಮಿತ್ರಾರ್ಕ ಧ್ರವ ವಾಸ ವಾಂಬುಪಮಘಾತೋಯಾಂತ್ಯ ಪುಷ್ಯೇಂದುಭಿಃ

 *ಪಾಪೈರ್ಹಿನಬಲೈಸ್ತನೌ ಸುರಗುರೌ ಜ್ಞೇ ವಾ ಭೃಗೌ ಖೇ ವಿಧೌ |

 ಆಪ್ಯೇ ಸರ್ವಜಲಾಯಶಯಸ್ಯ ಖನನಂ ವೃಂಭೋಮಘೈಃ ಸೇಂದ್ರಭೈ

 ಸೈನೃತ್ಯಂ ಹಿಬುಕೇ ಶುಭೈಸ್ತನುಗೃಹೇ ಜ್ಞೇಬ್ಜಜ್ಞರಾಶೌ ಶುಭಮ್||

    ಅನುರಾಧಾ, ಹಸ್ತ, ದ್ರುವಸಂಜ್ಞಕ, ಧನಿಷ್ಠಾ, ಶತಭಿಷಾ ಮಾಘಾ, ಪೂರ್ವಾಷಾಢಾ, ರೇವತಿ,ಪುಷ್ಯ,ಮೃಗಶಿರಾ, ಈ ನಕ್ಷತ್ರಗಳಲ್ಲಿ ಪಾಪಗ್ರಹ ದುರ್ಬಲವಾಗಿದ್ದರೆ,ಲಗ್ನದಲ್ಲಿ ಗುರು ಅಥವಾ ಬುಧನಿದ್ದರೆ  ಲಗ್ನದಿಂದ ದಶಮ ಭಾವದಲ್ಲಿಶುಕ್ರನಿದ್ದರೆ, ಜಲಚರ ರಾಶಿಯ ಚಂದ್ರನಿದ್ದರೆ ಇಂಥ ಸಮಯದಲ್ಲಿ ಬಾವಿ, ಕಲ್ಯಾಣಿ, ಕೆರೆಯನ್ನು ತೋರಿಸಬೇಕು. ಪೂರ್ವಾಷಾಢಾ, ಮತ್ತು ಮಘಾ ಈ ನಕ್ಷತ್ರಗಳನ್ನು ಹೊರತುಪಡಿಸಿ, ಜೇಷ್ಠಾ ಮತ್ತು ಈ ಮೇಲೆ ಹೇಳಿದ ನಕ್ಷತ್ರಗಳಲ್ಲಿ ಚತುರ್ಥ ಭಾವದಲ್ಲಿ ಶುಭಗ್ರಹ ಮತ್ತು ಲಗ್ನದಲ್ಲಿ ಬುಧನಿದ್ದಾರೆ,ಕನ್ಯಾ ಅಥವಾ ಮಿಥುನದಲ್ಲಿ ಚಂದ್ರನಿದ್ದರೆ, ನೃತ್ಯಾರಂಭ  ಶುಭವಾಗುತ್ತದೆ.