ಬೆಟ್ಟ ಹತ್ತಿ ಬಂದೆಯ್ಯಾ ಗೋವಿಂದ
ನಾವು ಸೇವೆ ಮಾಡೆ ನಿನ್ನ ಪಾದರವಿಂದ ||
ಮೆಟ್ಟಿಲು ಮೆಟ್ಟಿಲುಗು ನಾಮ ಹಾಡಿ |
ನಿನ್ನ ಧನ್ಯವನ್ನು ಮಾಡಿಹೆವು ಭಕ್ತಿಯಿಂದ ||ಬೆಟ್ಟ ||
ಬಾಲು : ಕಟ್ಟಿಕೊಂಡು ಬಂದೇವಯ್ಯಾ ಪಾಪದ ಗಂಟು
ನಿನ್ನ ಪಾದದಲ್ಲಿ ಇಟ್ಟ ಕ್ಷಣ ಶಾಂತಿಯುಂಟು||
ನನಗು ನಿನಗು ಏನೋ ಕಾಣೆ ಉಂಟು ನಂಟು ||
ನೀನೇ ನನಗೆ ಕಾಣುತ್ತಿರುವೆ ದಿಕ್ಕು ಏಂಟು || ಬೆಟ್ಟ ||
ವೃಂದ : ವೆಂಕಟೇಶ ಪ್ರಭು ಶ್ರೀನಿವಾಸ
ಶ್ರೀನಿವಾಸ ಪ್ರಭು ವೆಂಕಟೇಶ ||
ಗೋವಿಂದ ಗೋವಿಂದ ಗೋವಿಂದಾ |
ಬಾಲು : ಹುಟ್ಟಿ ಬಂದ ಮೇಲೆ ನಾನು ಭೂಮಿಮೇಲೆ
ಕಟ್ಟಿಕೊಂಡ ಹಾಗೆ ಭವಬಂಧ ಮಾಲೆ ||
ಇಟ್ಟಮೇಲೆ ನಂಬಿಕೆಯ ನಿನ್ನ ಮೇಲೆ ||
ನಮ್ಮ ಆಡಿಸೋದು ಬೀಳಿಸೋದು ನಿನ್ನ ಲೀಲೆ || ಬೆಟ್ಟ ||
ವೃಂದ : ವೆಂಕಟೇಶ ಪ್ರಭು ಶ್ರೀನಿವಾಸ
ಶ್ರೀನಿವಾಸ ಪ್ರಭು ವೆಂಕಟೇಶ ||
ಬಿಟ್ಟುಬಿಟ್ಟೆವಯ್ಯಾ ನಾವು ಎಲ್ಲ ಭೀತಿ
ನೀನು ಇಟ್ಟ ಮೇಲೆ ಮಕ್ಕಳಲ್ಲಿ ಇಷ್ಟು ಪ್ರೀತಿ ||
ಕೈ ಸುಟ್ಟ ಮೇಲೆ ಬುದ್ಧಿ ಬರೋದುಂದು ರೀತಿ ||
ಆದ ಮುಟ್ಟಿದವರ ಪಾಲಿಸೋದೆ ನಿನ್ನ ರೀತಿ || ಬೆಟ್ಟ ||