ಮನೆ ರಾಜ್ಯ ಮುಡಾ ಹಗರಣ ಆರೋಪಿತ ಅಧಿಕಾರಿ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕ

ಮುಡಾ ಹಗರಣ ಆರೋಪಿತ ಅಧಿಕಾರಿ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕ

0

ಮೈಸೂರು: ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಮುಡಾ ಮಾಜಿ ಆಯುಕ್ತ, ಕೆಎಎಸ್​ ಅಧಿಕಾರಿ ದಿನೇಶ್ ಕುಮಾರ್ ಜಿ.ಟಿ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕಗೊಂಡಿದ್ದಾರೆ.

Join Our Whatsapp Group

ಮುಡಾದಲ್ಲಿ 50:50 ಅನುಪಾತದಡಿ ಸೈಟ್​ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಅಕ್ರಮದಲ್ಲಿ ಅಂದಿನ ಮುಡಾ ಆಯಕ್ತ ದಿನೇಶ್ ಕುಮಾರ್ ಜಿ.ಟಿ​​ ಅವರ ಪಾಲುಗಾರಿಕೆಯೂ ಇದೆ ಎಂಬ ಆರೋಪ ಕೇಳಿಬಂದಿತ್ತು. ಆರೋಪ ಕೇಳಿಬಂದ ತಕ್ಷಣ ಮೈಸೂರಿಗೆ ಆಗಮಿಸಿದ್ದ ಸಚಿವ ಭೈರತಿ ಸುರೇಶ್‌ ಸಭೆ ನಡೆಸಿ ಅಂದಿನ ಮುಡಾ ಆಯುಕ್ತರನ್ನು ಜಿಟಿ ದಿನೇಶ್​ ಅವರ ವರ್ಗಾವಣೆಗೆ ಸೂಚಿಸಿದರು. ಅದರಂತೆ, ಸರ್ಕಾರ ದಿನೇಶ್ ಕುಮಾರ್ ಜಿಟಿ​ ಅವರನ್ನು ಮಾಡಿತ್ತು. ಆದರೆ, ಜಿಟಿ ದಿನೇಶ್​ ಅವರಿಗೆ ಸ್ಥಳ ನಿಯೋಜನೆಯಾಗಿರಲಿಲ್ಲ. ಇದೀಗ, ಜಿ.ಟಿ.ದಿನೇಶ್ ಕುಮಾರ್ ಅವ​​ರನ್ನು ಹಾವೇರಿ ವಿಶ್ವ ವಿದ್ಯಾಲಯದ ಕುಲಸಚಿವರಾಗಿ ಸರ್ಕಾರ ನೇಮಕ ಮಾಡಿದೆ.

ಕೆಎಎಸ್​ ಅಧಿಕಾರಿ ದಿನೇಶ್​​ ಕುಮಾರ್​ ಜಿಟಿ ಸೇರಿದಂತೆ ಸರ್ಕಾರ ಒಟ್ಟು ಒಂಬತ್ತು ಕೆಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ವರ್ಗಾವಣೆಯಾದ ಅಧಿಕಾರಿಗಳು

ವೀರಭದ್ರ ಹಂಚಿನಾಳ – ವ್ಯವಸ್ಥಾಪ ನಿರ್ದೇಶಕರು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರಿಗೆ ವರ್ಗಾಯಿಸಲಾಗಿದೆ.

ಅನುರಾಧ ಜಿ – ಮುಖ್ಯ ಆಡಳಿತಾಧಿಕಾರಿ ವಿಜಯನಗರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬಳ್ಳಾರಿ.

ರಾಘವೇಂದ್ರ ಟಿ – ನಿರ್ದೇಶಕರು ವಿಕಲಚೇನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಬೆಂಗಳೂರು.

ಚಿದಾನಂದ ಸದಾಶಿವ ವಟಾರೆ – ಮುಖ್ಯ ಆಡಳಿತಾಧಿಕಾರಿ ಇನ್ಸ್ಟಿಟ್ಯೂಟ್​ ಆಫ್​ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್​ ಆ್ಯಂಡ್​ ಆರ್ಗನ್​ ಟ್ರಾನ್ಸ್​ಪ್ಲಾಂಟ್​, ಬೆಂಗಳೂರು.

ಮಹದೇವ್​ ಎ ಮುರಗಿ – ಕುಲಸಚಿವರು (ಆಡಳಿತ) ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆ. ಮತ್ತು ಪ್ರಾಭರಿ ಆಯುಕ್ತರು ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಕೂಡಲಸಂಗಮ, ಬಾಗಲಕೋಟೆ.

ರವಿಕುಮಾರ್ ಪಿ – ಪ್ರಧಾನ ವ್ಯವಸ್ಥಾಪಕರು (ಆಡಳಿತ) ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಬೆಂಗಳೂರು.

ಡಾ. ಶಂಕರಪ್ಪ ವಣಿಕ್ಯಾಳ್​​ – ಪ್ರಧಾನ ವ್ಯವಸ್ಥಾಪಕರು (ಆಡಳಿತ) ರಾಯಚೂರು ವಿಶ್ವವಿದ್ಯಾಲಯ, ರಾಯಚೂರು.

ಗೀತಾ ಈ ಕೌಲಗಿ – ಕುಲಸಚಿವರು (ಆಡಳಿತ) ಬಾಗಲಕೋಟೆ ವಿಶ್ವವಿದ್ಯಾಲಯ, ಬಾಗಲಕೋಟೆ