ಮನೆ ಮನೆ ಮದ್ದು ಗಾಯಗಳಾದಾಗ

ಗಾಯಗಳಾದಾಗ

0

1. ಒಣಗಿದ ಮಾವಿನ ಎಲೆಯನ್ನು ಸುಟ್ಟು, ಅದರ ಬೂದಿಯನ್ನು ಪೆಟ್ಟು ತಗುಲಿದ ಗಾಯಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಲೇಪಿಸಿದರೆ, ರಕ್ತಸ್ರಾವ ನಿಂತು ಗಾಯ ಬೇಗ ಮಾಗುವುದು.2.  ಬೆಳ್ಳುಳ್ಳಿಯನ್ನು ಸಿಪ್ಪೆ ಇಲ್ಲದೆ ಹೊಂಗೆ ಬೀಜ ಮತ್ತು ಅಡಿಕೆ ಉಪ್ಪಿನೊಂದಿಗೆ ಅರೆದು, ಗಾಯಗಳಿಗೆ ಲೇಪಿಸುವುದರಿಂದ ಬೇಗ ಮಾಗುವುದು.

Join Our Whatsapp Group

.3.ಪರಂಗಿಕಾಯಿಯ ಸಿಪ್ಪೆಯಿಂದ ಹೊರಬರುವ ಬಿಳಿಯ ರಸವನ್ನು ಗಾಯದ ಮೇಲೆ ತೊಟ್ಟಿಕಿಸಿದ ಅದರ ದಪ್ಪ ಸಿಪ್ಪೆ ಯನ್ನು ಗಾಯದ ಮೇಲೆ ಕಟ್ಟುವುದರಿಂದ ಗಾಯ ಬೇಗ ಮಾಗುವುದು.

4. ಕರಿ ಎಳ್ಳು ಹಾಗೂ ಬೇವಿನ ಎಲೆಗಳನ್ನು ಹರಳೆಣ್ಣೆಯಲ್ಲಿ ಹುರಿದು, ಅರಿಶಿನ, ಕರ್ಪೂರದೊಂದಿಗೆ ಅರೆದು, ಮುಲಾಮು ಮಾಡಿಕೊಂಡು ಗಾಯಗಳಿಗೆ ಹಚ್ಚುತ್ತಿದ್ದರೆ ಬೇಗ ಗಾಯ ಒಣಗುವುದು.

5. ಸಬ್ಬಕ್ಕಿ ಸೊಪ್ಪನ್ನು ಅರಿಶಿನದೊಂದಿಗೆ ಅರೆದು, ಗಾಯದ ಮೇಲೆ ಲೇಪಿಸುತ್ತಿದ್ದರೆ ನೋವು ಕಡಿಮೆ ಆಗುವುದು. ಗಾಯವೂ ಮಾಗುವುದು.

6. ಚರ್ಮದ ಮೇಲೆ ಗಾಯಗಳಾದಾಗ,ಬೇವಿನ ತೊಗಟೆಯನ್ನು ಕಲ್ಲಿನ ಮೇಲೆ ತೇದು, ಗಂಧ.ತೆಗೆದು ಗಾಯದ ಭಾಗವನ್ನು ಬೇವಿನಸೊಪ್ಪಿನ ಕಷಾಯದಿಂದ ತೊಳೆದು,ದಿನ ಬಿಟ್ಟು ದಿನ ಗಾಯಕ್ಕೆ ಲೇಪಿಸುತ್ತಿದ್ದರೆ ಗಾಯ ಬೇಗ ವಾಸಿ ಆಗುವುದು.

7. ಜೇನುತುಪ್ಪವನ್ನು ಗಾಯದ ಕಲೆಗಳ ಮೇಲೆ ಹಚ್ಚುತ್ತಿದ್ದರೆ ಕಲೆಗಳು ಮಾಯವಾಗುವುವು.

8. ಬಿಸಿ ಮಾಡಿದ ಹುಣಸೆ ಗೊಜ್ಜನ್ನು ಗಾಯದ ಕಾರಣ ಊತ ಇರುವ ಭಾಗದ ಮೇಲೆ ಲೇಪಿಸುವುದರಿಂದ ಊತ ವೂ ಇಳಿಯುವುದು, ನೋವು ಕಡಿಮೆ ಆಗುವುದು.

9. ಬಳೆಕಾಯಿ ಕತ್ತರಿಸಿದಾಗ ಹೊರಬರುವ ದ್ರವ್ಯವನ್ನು ಚಾಕು ಬ್ಲೇಡು ಮೊದಲಾದವುಗಳಿಂದ ಆದ ಗಾಯದ ಮೇಲೆ ಲೇಪಿಸುವುದರಿಂದ ಗಾಯ ಗುಣ ಮುಖವಾಗುವುದು.

10. ಶ್ರೀಗಂಧದ ಚೆಕ್ಕೆಯನ್ನು ನೀರಿನಲ್ಲಿ ತೇದು,ಊತ ಇರುವ ಜಾಗದಲ್ಲಿ ಲೇಪಿಸಿದರೆ ಊತವೂ ಇಳಿಯುವುದು ನೋವು ಕಡಿಮೆ ಆಗುವುದು.

11. ಸ್ವಮೂತ್ರದಿಂದ ಗಾಯವನ್ನು ದಿನವೂ ಎರಡು ಬಾರಿ ತೊಳೆಯುತ್ತಿದ್ದರೆ. ಗಾಯದ ಮೇಲೆ ಕಿವು ಕಟ್ಟುವುದಿಲ್ಲ ಬೇಗ ಗಾಯ ವಾಸಿ ಆಗುವುದು.

12. ಸುಟ್ಟ ಗಾಯಕ್ಕೆ ಗಾಯ ಆದ ಕೂಡಲೇ ಜೇನುತುಪ್ಪ ಹಚ್ಚುವುದರಿಂದ ಉರಿ ಕಡಿಮೆ ಆಗುವುದಲ್ಲದೆ ಗಾಯವು ಬೇಗ ಆಗುವುದು

13. ಹಣೆಗೆ ಏಟು ಬಿದ್ದು ಊದುಕೊಂಡಾಗ ಹುರಿದ ನುಗ್ಗೆ ಸೊಪ್ಪಿನ ಶಾಖ ಕೊಟ್ಟರೆ ಊಟ ಕಡಿಮೆ ಆಗಿ ನೋವು ನಿವಾರಣೆ ಆಗುವುದು.

14. ಸುಟ್ಟ ಗಾಯಕ್ಕೆ ಅರಸಿನ ಪುಡಿ ಮೆತ್ತುವುದರಿಂದ ನೋವು ಕಡಿಮೆ ಆಗಿ ಗಾಯವನ್ನು ಮಾಗುವುದು.

15. ಆಲೂಗೆಡ್ಡೆಯನ್ನು ಜಜ್ಜಿ ನುಣ್ಣಗೆ ಅರೆದು, ಸುಟ್ಟ ಗಾಯದ ಮೇಲೆ ಲೇಪಿಸಿದರೆ ಬೇಗ ವಾಸಿ ಆಗುವುದು.

16. ಪೆಟ್ಟು ತಗುಲಿ ಊದಿರುವ ಭಾಗವನ್ನು ಹಾಲುಗೆಡ್ಡೆ ಬೇಯಿಸಿದ್ದ ನೀರಿನಿಂದ ತೊಳೆದರೆ ಊತ ಇಳಿದು,, ನೋವು ಕಡಿಮೆ ಆಗುವುದು.

17. ಕರಿ ಎಳ್ಳಿನ ಎಣ್ಣೆಯನ್ನು ಕಾಯದ ಮೇಲೆ ಲೇಪಿಸುವುದರಿಂದ ನೋವೂ ಕಡಿಮೆ ಆಗಿ ಗಾಯವೂ ಮಾಗುವುದು.

18. ಏನಾದರೂ ಏಟು ತಗೂಲಿ ಊಟ ಆದಾಗ ನಿಂಬೆಹಣ್ಣಿನ ರಸದೊಂದಿಗೆ ಓಮು ಅರೆದು ಪಟ್ಟು ಹಾಕಿದರೆ ಊಟ ಕಡಿಮೆ ಆಗುವುದರಿಂದ ನೋವು ನಿಲ್ಲುವುದು.

19. ಪೆಟ್ಟು ಬಿದ್ದು ನೊಯುವ ಭಾಗಕ್ಕೆ 

ಓಮದ ಕಾಳುಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಬೇಯಿಸಿ ತಿಕ್ಕುವುದರಿಂದ ನೋವು ನಿವಾರಣೆ ಆಗುವುದು.