ಮನೆ ರಾಜ್ಯ ಬಸವನಾಡಿನಲ್ಲಿ ಚಿರತೆ ಹಾವಳಿ: ರೈತರು ಕಂಗಾಲು, ಡ್ರೋನ್ ಮೂಲಕ ಕಾರ್ಯಾಚರಣೆ

ಬಸವನಾಡಿನಲ್ಲಿ ಚಿರತೆ ಹಾವಳಿ: ರೈತರು ಕಂಗಾಲು, ಡ್ರೋನ್ ಮೂಲಕ ಕಾರ್ಯಾಚರಣೆ

0

ವಿಜಯಪುರ: ಬಸವನಾಡಿನಲ್ಲಿ ಚಿರತೆ ಹಾವಳಿ ಹೆಚ್ಚಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವ ಪ್ರಾಣಿ ಹಂತಕ ಚಿರತೆಯಿಂದ ರೈತರು ಕಂಗಾಲಾಗಿದ್ದಾರೆ.

Join Our Whatsapp Group

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಸಂಗಿಹಾಳ, ದೇವರನಾವದಗಿ ಗ್ರಾಮಗಳಲ್ಲಿ ದಾಂಗುಡಿ ಇಟ್ಟಿರುವ ಚಿರತೆ, ರೈತರ ಸಾಕು ನಾಯಿ, ಎಮ್ಮೆ, ಆಕಳುಗಳ ಮೇಲೆ ದಾಳಿ ನಡೆಸಿ ಬಲಿ ಪಡೆಯುತ್ತಿದೆ.

ರೈತರ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡಿದ್ದು, ಜಮೀನಿನಲ್ಲಿ ಚಿರತೆಯ ಹೆಜ್ಜೆ ಗುರುತು ಸ್ಪಷ್ಟವಾಗಿ ಕಾಣಿಸಿಕೊಂಡಿವೆ‌.

ಆಸಂಗಿಹಾಳ ಗ್ರಾಮದಲ್ಲಿ ರೈತರೊಬ್ಬರ ಆಕಳನ್ನು ಹತ್ಯೆ ಮಾಡಿ ತಿಂದಿರುವ ಚಿರತೆ, ದೇವರನಾವದಗಿ ಗ್ರಾಮದಲ್ಲಿ ಭೀಮರಾಯ ಜನಿವಾರ ಎಂಬವರ ಜಮೀನಿನಲ್ಲಿ ಸಾಕು ನಾಯಿ ಹಾಗೂ ಎಮ್ಮೆಯ ಮೇಲೆ ದಾಳಿ ನಡೆಸಿ ಭಕ್ಷಿಸಿದೆ.

ಸಾರ್ವಜನಿಕ ದೂರಿನನ್ವಯ ಹೆಜ್ಜೆ ಗುರುತು ಆಧರಿಸಿ ಚಿರತೆ ಇರುವಿಕೆಯ ಸ್ಪಷ್ಟತೆ ಅರಿತ ಅರಣ್ಯ ಇಲಾಖೆ ಅಧಿಕಾರಿಗಳು ಆರ್.ಎಫ್.ಒ. ರಾಜೀವ ಬಿರಾದಾರ ನೇತೃತ್ವದಲ್ಲಿ ಚಿರತೆ ಸೆರೆಗೆ ಮುಂದಾಗಿದ್ದಾರೆ.

ಚಿರತೆ ಸೆರೆ ಹಿಡಿಯುವ ಭಾಗವಾಗಿ ಈಗಾಗಲೇ ಆಸಂಗಿಹಾಳ ಹಾಗೂ ದೇವರನಾವದಗಿ ಗ್ರಾಮಗಳ ರೈತರ ತೋಟಗಳಲ್ಲಿ ತಲಾ ಒಂದೊಂದು ಬೋನ್ ಇರಿಸಲಾಗಿದೆ. ಜೊತೆಗೆ ಚಿರತೆಯ ಚಲನವಲನದ ಮೇಲೆ ನಿಗಾ ಇರಿಸಲು ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.