ಮನೆ ದೇವಸ್ಥಾನ ಸಹ್ಯಾದ್ರಿ ಶ್ರೇಣಿ

ಸಹ್ಯಾದ್ರಿ ಶ್ರೇಣಿ

0

ಭಾರತದ ಪ್ರಾಚೀನ ಭೂಗೋಳದಲ್ಲಿ ಪಶ್ಚಿಮ ಘಟ್ಟಗಳ ಉತ್ತರ ಭಾಗವನ್ನು ಸಹ್ಯಾದ್ರಿ ಎಂದು ದಕ್ಷಿಣ ಭಾಗವನ್ನು ಮಾಲಯಪರ್ವತ ಎಂದು ಕರೆಯಲಾಗಿದೆ ಕರ್ನಾಟಕದಲ್ಲಿ ಈ ಬೆಟ್ಟವು ಬೆಳಗಾವಿಯ ಖಾನಾಪುರದಿಂದ ಪ್ರಾರಂಭವಾಗಿ ಕೊಡಗು ಜಿಲ್ಲೆಯ ಬ್ರಹ್ಮಗಿರಿಯವರಿಗೆ ಹರಡಿಕೊಂಡಿದೆ. ಸಹ್ಯಾದ್ರಿಯಾ ಉತ್ತರ ಭಾಗದ  ದಟ್ಟವಾದ ಅರಣ್ಯಗಳಿಂದ ಕೂಡಿದೆ. ಅರಬ್ಬಿ ಸಮುದ್ರ ಕೆಲವೆಡೆ ಸಹ್ಯಾದ್ರಿಯ

Join Our Whatsapp Group

ಸಮೀಪದಲ್ಲಿದೆ.ಪೌರಾಣಿಕವಾಗಿಯೂ ಈ ಹಾದು ಒಂದೇನೆಂದು ನಿರೂಪಿಸಲಾಗಿದೆ ಸಹ್ಯಾದ್ರಿ ಪ್ರಸಿದ್ಧಿ ಪಡೆದಿದೆ. ಇದರ  ಸೌಂದರ್ಯವನ್ನು ಮಹಿಮೆಯನ್ನು ಪುರಾಣಗಳು ಸೊಗಸಾಗಿ ವರ್ಣಿಸಿವೆ. ಇದರ ತೀರ ಪ್ರದೇಶವು ಪರಶುರಾಮ ಸೃಷ್ಟಿ ಎಂದು ಪುರಾಣಗಳು ಹೇಳುತ್ತವೆ. ಸಹ್ಯಾದ್ರಿಯ ಈ ಭಾಗ ಅತ್ಯಂತ ಪುರಾತನವಾದುದು. ಈ ಬೆಟ್ಟ ಒಂದು ಕಾಲದಲ್ಲಿ ತಮಿಳುನಾಡಿನಲ್ಲಿ ಮೆರೆಯಾಗಿತ್ತು. ರಾಜ ಕೇಸರಿವರ್ಮಕುಲೋತ್ತುಂಗ  ಚೋಳದೇವ ರಾಜ್ಯ ಸಹ್ಯಾದ್ರಿಯ ಮಧ್ಯ ಭಾಗದವರಿಗೆ ವಿಸ್ತರಿಸಿತ್ತೆಂದು ತಿಳಿದು ಬರುತ್ತದೆ. ಶತವಾಹನ ವಂಶದರಸನೊಬ್ಬ ಸಹ್ಯವನ್ನು ಗೆದ್ದಿದ್ದನು. ಮಹಾಭಾರತದ ಭೀಷ್ಮ ಪರ್ವದಲ್ಲಿ ಏಳು ಕುಲ ಪರ್ವತಗಳನ್ನು ಸೂಚಿಸುವಾಗ ಸಹ್ಯಾದ್ರಿಯನ್ನು ಹೆಸರಿಸಿದೆ. ಅನುಗೀತದಲ್ಲಿಯು ಸಹ್ಯಾದ್ರಿ ಪ್ರಸ್ತಾಪ ಬರುತ್ತದೆ. ಪ್ರಪಂಚ ಹೃದಯಂ ಎಂಬ ಸಂಸ್ಕೃತ ಗ್ರಂಥದಲ್ಲಿ ರಕ್ಷಾವತ್, ಮಹೇಂದ್ರ, ವಿಂದ್ಯ, ಮಲಯ, ಸಹ್ಯ, ಸತ್ತಿಮತ್, ಪಾರಿಯಾತ ಎಂದು ಸಪ್ತ ಕೊಂಕಣಗಳ ವಿವರ ಸಿಗುತ್ತದೆ . ಕಾಳಿದಾಸನ ರಘುವಂಶದಲ್ಲಿ ಸಹ್ಯಾದ್ರಿಯನ್ನು ರಘು ಹಾದು ಹೋದನೆಂದು ನಿರೂಪಿಸಲಾಗಿದೆ. ಸಹ್ಯಾದ್ರಿಯು ನಿಸರ್ಗ ಸೌಂದಯದ ಖನಿಯೂ ಹೌದು. ಸುಕ್ಷೇತ್ರಗಳ ಬೀಡೂ ಹೌದು, ಮಾರ್ಕಂಡೇಯನ ಪುರಾಣದಲ್ಲಿ ಸಹ್ಯಾದ್ರಿ, ಉತ್ತರ ಭಾಗ ವಿಶ್ವದಲ್ಲೇ ಮನೋಹರ ವಾದುದು ಎಂದು ವರ್ಣಿಸಲಾಗಿದೆ. ರಾಮಾಯಣದ ಕಿಷ್ಟಿಂದ ಖಂಡದಲ್ಲಿ ಸಹ್ಯಾದ್ರಿಯ ಅರಣ್ಯಗಳ ಚಿತ್ರಣ ಸಿಗುತ್ತದೆ. ಸಹ್ಯ ಪರ್ವತವು ಕೈಲಾಸ ಪರ್ವತಕ್ಕೆ ಸಮಾನ. ಸಹ್ಯ ಪರ್ವತ  ಮತ್ತು ಸಮುದ್ರದ ನಡುವೆ ಶೇಷ್ಠವಾದ ಶಿವಕ್ಷೇತ್ರಗಳಿವೆ . ಸಹ್ಯಾದ್ರಿಯ ತಪ್ಪಲಲ್ಲಿ ಸಹ್ಯಕೇಶ್ವರ, ಸಿಂಹೇಶ, ಶಿತಿಕಂಠ,ತೃಣಜೋತಿಶ್ವರ, ಮರಕತಾಚಲೇಶ್ವರ,ಕಾಳೆಸೇಶ್ವರ, ಮೊದಲಗಿ ಲಿಂಗಗಳಿವೆ. ಎಂದು ಶಿವರಹಸ್ಯದಲ್ಲಿ ವರ್ಣಿಸಲಾಗಿದೆ. ಸಹ್ಯಾದ್ರಿ ಪರ್ವತವು ಶಿವಲಿಂಗವೆಂಬ ಭಾವನೆ. ಆಧುನಿಕ ಕಾಲದಲ್ಲಿ ಕವಿಗಳಿಗೆ ಸಹ್ಯಾದ್ರಿ ಸ್ಪೂರ್ತಿಯ ನೆಲೆ.ಕವಿ ಕುವೆಂಪು ಅವರು ತಮ್ಮ ಕಲ್ಪನೆಗಳಿಗೆ ಇಂಬು  ಕೊಟ್ಟ ತಾಣ ಸಹ್ಯಾದ್ರಿ ಶ್ರೇಣಿ. ಅವರ ಸಾಹಿತ್ಯದಲ್ಲಿ ಸಹ್ಯಾದ್ರಿಯ ಮಲೆಗಳ ಪಾತ್ರ ಪ್ರಧಾನವಾಗಿದೆ. ಸಹ್ಯಾದ್ರಿ ಖಂಡದ ಜೊತೆಗೆ ನಮಗೆ ಪದ್ಮಪುರಾಣದ ಕಾಶಿಖಂಡ, ಶಿವ ಪುರಾಣ, ಕೋಟಿ ರುದ್ರಸಂಹಿತೆ, ದೇವಿಮಹಾಪುರಾಣ ಮಂತ್ರ ಮಹಾರ್ಣವ ಮಂತ್ರಮಾಹೋರಥಿ  ವಿಧಿ ವಿಧಾನ, ದೇವಿ ಭಗವಂತ ಪ್ರಪಂಚಸಾರ ಸಂಗ್ರಹ,ಸಂಗ್ರಹ ಮಂತ್ರಸಾರ ಸಂಗ್ರಹ ಅನ್ನಪೂರ್ಣೇಶ್ವರಿ ಕಲ್ಪ ಮೊದಲಾದ ಕೃತಿಗಳು ಮಲೆನಾಡು ಪ್ರದೇಶದ ಧಾರ್ಮಿಕ ಕ್ಷೇತ್ರಗಳಲ್ಲಿ ಕುರಿತು ತಿಳಿಯಲು ಸಹಕಾರಿಯಾಗಿವೆ.