ಮನೆ ಜ್ಯೋತಿಷ್ಯ ಧಾನ್ಯ ಬಡಿಯುವುದು ಮತ್ತು ರಾಶಿ ಮಾಡುವುದು

ಧಾನ್ಯ ಬಡಿಯುವುದು ಮತ್ತು ರಾಶಿ ಮಾಡುವುದು

0
SAMSUNG DVC PICTURES

ಭಾಗ್ಯಾರ್ಯಮಶ್ರುತಿಮಘೇಂದ್ರವಿಧಾತೃಮೂಲಮೈತ್ರ್ಯಾಂತ್ಯ ಭೇಷು ಕಥಿತಂ ಕಣಮರ್ಧನಂ ಸತ್ |

 ದ್ವಿಷಾಜಪಾನ್ನಿರ್ಋತಿಧಾತಖಶತಾರ್ಯಮಕ್ಷೇ ಸಸ್ಯಸ್ಯ ರೋಪಣಾಮಿಹಾರ್ಕಿ ಕಃಜಜೌ ಬಿನಾ ಸತ್ ||

Join Our Whatsapp Group

     ಪೂರ್ವ ಪಾಲ್ಗುಣಿ, ಉತ್ತರಾ ಪಾಲ್ಗುಣಿ ಶ್ರವಣ, ಮಘಾ, ಜ್ಯೇಷ್ಠಾ,, ರೋಹಿಣಿ ಮೂಲ, ಅನುರಾಧ, ರೇವತಿ ನಕ್ಷತ್ರಗಳಲ್ಲಿ ಧ್ಯಾನ ಮರ್ಧನ ಮಾಡಬೇಕು. ವಿಶಾಖಾ, ಪೂರ್ವಾಭಾದ್ರಪದಾ, ಮೂಲಲಾ, ರೋಹಿಣಿ, ಶತಭಿಷಾ, ಉತ್ತರಾ, ಪಾಲ್ಗುಣಿ ಈ ನಕ್ಷತ್ರಗಳಲ್ಲಿ ಶನಿವಾರ, ಮಂಗಳವಾರಗಳನ್ನು ಹೊರತುಪಡಿಸಿ ಅನ್ಯ ದಿನದಲ್ಲಿ ಧಾನ್ಯಗಳನ್ನು ತೂರಿ ರಾಶಿ ಮಾಡುವುದು ಶುಭವಾದದು.

 *ಧಾನ್ಯ ಸಂಗ್ರಹಿಸುವುದು ಮತ್ತು ಸಾಲ ನೀಡುವುದು :

 ಮಿಶ್ರೋಗ್ರರೌದ್ರಭುಜಗೇಂದ್ರವಿಭಿನ್ನಭೇಸು

 ಕರ್ಕಾಜತೌಲಿರಹಿತೇ ಚತನೌ ಶುಭಾಹೇ |

 ಧಾನ್ಯಸ್ಥಿತಿಃ ಶುಭಕರೀ ಗದಿತಾ ಧ್ರುವೇಜ್ಯ

 ದ್ವಿಶೇಂದ್ರದಸ್ರಚರಭೇಷು ಚ ಧಾನ್ಯವೃದ್ಧಿಃ ||

    -ವಿಶ್ರಸಂಜ್ಞಕ,ಉಗ್ರಸಂಜ್ಞಕ,  ಆರ್ದ್ರಾ,ಆಶ್ಲೇಷಾ, ಜ್ಯೇಷ್ಠಾ- ಇವುಗಳಿಂದ ಭಿನ್ನ (ಬೇರೆ) ನಕ್ಷತ್ರಗಳಲ್ಲಿ  ; ಕರ್ಕ, ಮೇಷ, ತುಲಾ-ಈ ಲಗ್ನಗಳನ್ನು ಹೊರತುಪಡಿಸಿ, ಶುಭದಿನಗಳಲ್ಲಿ ಧಾನ್ಯವನ್ನು ಸಂಗ್ರಹಿಸಿಡುವುದು. ಧ್ರುವಸಂಜ್ಞಂಕ, ಪುಷ್ಯ ವಿಶಾಖಾ, ಜೇಷ್ಠಾ, ಅಶ್ವಿನಿ ಮತ್ತು ಚರಸಂಜ್ಞಕ ನಕ್ಷತ್ರಗಳಲ್ಲಿ ಧಾನ್ಯವನ್ನು ಸಾಲವಾಗಿ ನೀಡುವುದು (ಬಡ್ಡಿಯ ಲಾಭಕ್ಕಾಗಿ) ಶುಭವಾದುದು.