ಮನೆ ಆರೋಗ್ಯ ಬ್ಲಡ್ ಕ್ಯಾನ್ಸರ್

ಬ್ಲಡ್ ಕ್ಯಾನ್ಸರ್

0

ರುಕೇಮಿಯಾ ಚಿಕಿತ್ಸೆ

   ★ ಬಹಳ ಮಂದಿ ರೋಗಿಗಳಿಗೆ ಕಿಮೋಥೆರಪಿಯಿಂದ  ರೋಗ ಪೂರ್ಣವಾಗಿ ಗುಣವಾಗುತ್ತದೆ. 

Join Our Whatsapp Group

   ★ ಮಿದುಳಿನಲ್ಲೂ  ಬೆನ್ನು ಮೂಳೆಯಲ್ಲೂ, ಮಿದುಳು  ಬೆನ್ನು ಮೂಳೆಗೆ, ಅಂಟಿಕೊಂಡಿರುವ ಪೊರೆ ಯಲ್ಲಿ ಗಡ್ಡೆಗಳು ಉಂಟಾದಾಗ ರೇಡಿಯೋ ಥೆರಪಿ ಬಳಸುತ್ತಾರೆ.

     ★ ರೋಗಪೂರ್ಣವಾಗಿ ಕಡಿಮೆಯಾದ ಮೇಲೂ, ಚಿಕಿತ್ಸೆಯನ್ನು ಮುಂದುವರಿಸಬೇಕಾಗುತ್ತದೆ. ಎರಡು ವರ್ಷಗಳ ತನಕ ರೋಗ ಮರುಕಳಿಸಿದಿದ್ದೆರೆ ಚಿಕಿತ್ಸೆಯನ್ನು ನಿಲ್ಲಿಸಬಹುದು.

ಕ್ರಾನಿಕ್ ಲುಕೇಮಿಯಾ ಲಕ್ಷಣಗಳು

 ★ಅಸಾಧಾರಣ ಆಯಾಸ

  ★ಹಸಿವಿನ ನಾಶ, ತೂಕ ಕಡಿಮೆಯಾಗುವಿಕೆ.

 ★ ಪದೇ ಪದೇ ಜ್ವರ.

   ★ಗುಲ್ಮ ದೊಡ್ಡದಾಗುವುದರಿಂದ ಕಿಬ್ಬೊಟ್ಟೆಯ ನೋವು.

  ★ವಸಡುಗಳಲ್ಲಿ ರಕ್ತಸ್ರಾವ, ಮೂಗಿನಿಂದ ರಕ್ತಸ್ರಾವ, ಮಲದಲ್ಲಿ ರಕ್ತ ಬೀಳುವುದು ಇತ್ಯಾದಿ.

ಕ್ರಾನಿಕ್ ಲುಕೆಮಿಯಾ ಚಿಕಿತ್ಸೆ

★ಲಕ್ಷಣಗಳನ್ನು ತಗ್ಗಿಸುವ ಕೀಮೋಥೆರಪಿ ಬಳಸುತ್ತಾರೆ.

★ಬೆಳೆದ ಗುಲ್ಮದ ಗಾತ್ರವನ್ನು ತೆಗ್ಗಿಸಲು ಅಪರಿಪಕ್ಟ ಬಿಳಿಯ ರಕ್ತಕಣಗಳ ಸಂಖ್ಯೆಯನ್ನು ತಗ್ಗೌಸಲು ರೇಡಿಯೋ ಥೆರಪಿ ಬಳಸುತ್ತಾರೆ.

★ಬೆಳೆದ ಗುಲ್ಮವನ್ನು ತೆಗೆದು ಹಾಕಲು ಆ ಮೂಲಕ ಅಲ್ಲಿನ ಹೊಟ್ಟೆನೋವನ್ನು ತಗ್ಗಿಸಲು ಸರ್ಜರಿ ಮಾಡುತ್ತಾರೆ.

ಎಲುಬಿನ ಮಚ್ಚೆಯನ್ನು ಕಸಿ

★ಲುಕೆಮಿಯಾ ಗುಣಪಡಿಸಲು ಎಲುಬಿನ ಮಚ್ಚೆಯನ್ನು  ಬದಲಾಯಿಸುವ ಪ್ರಕ್ರಿಯೆ ಇದನ್ನುಬೋನ್ ಮ್ಯಾರೋ ಟ್ರಾನ್ಸ್ಪೋಟ್ ಎನ್ನುತ್ತಾರೆ ಗಮನಾರ್ಹ ಪಲಿತಾಂಶವನ್ನು ಕೊಡುತ್ತದೆ.

★ಈ ಪ್ರಕ್ರಿಯೆಯಲ್ಲಿ ಹಿಮೋಥೆರಪಿ  ರೇಡಿಯೋ ಥೆರಪಿ ಮೂಲಕ ವ್ಯಾಧಿಗ್ರಸ್ತ ಕಣಗಳನ್ನು ನಾಶಗೊಳಿಸಿದ ಮೇಲೆ,ರೋಗಿಯ ಶರೀರದೊಳಗೆ ಅಭಿಧಮನಿಗಳ ಮೂಲಕ ಆರೋಗ್ಯವಂತ ದಾನಿಯ ಮೂಳೆ ಮಚ್ಚೆಯನ್ನು ಇಂಜೆಕ್ಟ್  ಮಾಡುತ್ತಾರೆ. ಇಂಜೆಕ್ಟ್ ಮಾಡಲ್ಪಟ್ಟ ಆರೋಗ್ಯವಂತ ಕಣಗಳು ರೋಗಿಯ ಎಲುಬು ಮಚ್ಚೆಯಲ್ಲಿ  ಎಲ್ಲಿ ವೃದ್ಧಿಗೊಂಡು, ಅಲ್ಲಿ ಯಥಾವಿಧಿಯಾಗಿ ಸಾಧಾರಣ ರಕ್ತ ಕಣಗಳನ್ನು  ಉತ್ಪಾದಿಸುತ್ತವೆ.

ಜಟಿಲತೆಗಳು ಕಾಂಪ್ಲಿಕೇಷನ್

★ರೋಗನಿರೋಧಕ ಶಕ್ತಿ ಕಡಿಮೆಯಾಗುವುದರಿಂದ, ಸಾಧಾರಣ ಸೋಂಕುಗಳೂ ಕೂಡಾ ಪ್ರಾಣಾಂತಕವಾಗುತ್ತವೆ. ಉದಾಹರಣೆಗೆ ಚಿಕ್ಕ ಮಕ್ಕಳಿಗೆ ದಡಾರ ಸೀತಳ ಸಿಡುಬುಗಳಂತಹವು ಕೂಡಾ ತೀವ್ರ ರೋಗಗಳಾಗಿ ಪರಿಣಿಸುತ್ತವೆ.

★ದೊಡ್ಡವರಿಗೆ ಕಾರಣವಿಲ್ಲದೆಯೇ ಅತಿಯಾದ ರಕ್ತಸ್ರಾವವಾಗುತ್ತಿರುತ್ತದೆ.

ಡಾಕ್ಟರನ್ನು ಯಾವಾಗ ಸಂಪರ್ಕಿಸಬೇಕು

 ★ಬ್ಲಡ್ ಕ್ಯಾನ್ಸರ್ ಇರಬಹುದೆಂಬ ಸಂಶಯ ಬಂದ ತಕ್ಷಣ.

ಡಾಕ್ಟರ್ ಏನು ಮಾಡುತ್ತಾರೆ?

★ ಬ್ಲಡ್ ಕ್ಯಾನ್ಸರ್ ಎಂಬ ಸಂಶಯ ಬಂದ ಕೂಡಲೇ, ರೋಗಿಯನ್ನು ರಕ್ತ ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ಕಳಿಸುತ್ತಾರೆ.

★ಅಲ್ಲಿ ಅದು ಯಾವ ಬಗೆಯ ಲುಕೇಮಿಯಾ ಎಂದು ತಿಳಿದುಕೊಳ್ಳಲು ಎಕ್ಸ್ ರೇ, ಬ್ಲಡ್ ಟೆಸ್ಟ್, ಎಲುದು ಮಚ್ಚೆಯ ಪರೀಕ್ಷೆ ಮಾಡುತ್ತಾರೆ.

★ರಕ್ತ ಬದಲಾವಣೆ,ಆೄಂಟಿ ಲುಕೇಮಿಯಾ ಔಷಧಗಳು, ರೇಡಿಯೋ ಥೆರಪಿ,ಅಗತ್ಯವಾದರೆ ಎಲುಬು ಮಚ್ಚೆಯ ಬದಲಾವಣೆ ಮಾಡುವುದು, ಮುಂತಾದ ಚಿಕಿತ್ಸೆಗಳಿರುತ್ತವೆ.

★ಸೊಂಕು ಇದ್ದರೆ ಅವುಗಳೊಡನೆ  ಹೋರಾಡಲು ಆೄಂಟಿ ಬಯಾಟಿಕ್ಸ್ ಬಳಸಲಾಗುತ್ತದೆ.

★ ಆಧುನಿಕ ಚಿಕಿತ್ಸಾ ವಿಧಾನಗಳ ಮೂಲಕ ಮಕ್ಕಳಲ್ಲಿ ಅರ್ಧ ಭಾಗ ರೋಗಿಗಳಿಗೆ ಪೂರ್ಣವಾಗಿ ಗುಣವಾಗುತ್ತದೆ.

★ದೊಡ್ಡವರಿಗೆ ಗುಣವಾಗಲು ಬಹಳ ಸಮಯ ಹಿಡಿಯುತ್ತದೆ. ಲುಕೇಮಿಯಾಗೆ ಈಡಾದವರಲ್ಲಿ ಬಹಳ ಮಂದಿ ಐದು ವರ್ಷ, ಆದಕ್ಕೂ ಮೀರಿ, ಸುಖಜೀವನ ನಡೆಸಬಲ್ಲರು.