ದೇಹಕ್ಕೆ ಮಸಾಜ್ ಮಾಡುವುದರಿಂದ ರಕ್ತಹೀನತೆಯ ನೋವು ಕಡಿಮೆಯಾಗುತ್ತದೆ.ಸುಸ್ತು ಪರಿಹಾರವಾಗುತ್ತದೆ.ಪ್ರತಿದಿನ ಎರಡು ಬಾರಿಯಂತೆ ಹತ್ತು ನಿಮಿಷ ಪ್ರಾಣಾಯಾಮ ದೀರ್ಘ ಉಸಿರಾಟವು ರಕ್ತದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಯೋಗ
ಪಶ್ಚಮೋತ್ತಾಸನ,ಶವಾಸನಗಳು ದೇಹ ಮತ್ತು ಮನಸ್ಸುನ್ನು ಸಮತೋಲನಕ್ಕೆ ತರುತ್ತದೆ. ಅವರು ಸೋಮಾರಿತನ ಬಿಟ್ಟು ಚಟುವಟಿಕೆಯಿಂದ ಕೂಡಿರಬೇಕು. ಇದರಿಂದ ಅವರಲ್ಲಿ ರಕ್ತಚಲನೆ ಉಂಟಾಗುತ್ತದೆ ರಕ್ತದ ಗುಣಮಟ್ಟ ಹೆಚ್ಚಾಗುತ್ತದೆ.
ಮುದ್ರೆಗಳು
ವರುಣಮುದ್ರೆ ಪ್ರಾಣಮುದ್ರೆ, ಗರುಡಮುದ್ರೆ ಮತ್ತು ಅಪಾನ ಮುದ್ರೆಗಳನ್ನು ಮಾಡಿ ಹತ್ತು ಹದಿನೈದು ನಿಮಿಷಗಳು ಮಾಡುವುದು.
ಜ್ಯೋತಿಷ್ಯಶಾಸ್ತ್ರದ ರೀತಿ
ಜ್ಯೋತಿಷ್ಯದಲ್ಲಿ ರೆಕ್ತಕ್ಕೆ ಕಾರಕ ಗ್ರಹ – ಕುಜ ಅನಂತರ ಚಂದ್ರ.
ರಕ್ತದಲ್ಲಿ ಕೆಂಪು ರಕ್ತ ಕಣಗಳ ಕಾರಕ ಗ್ರಹ – ಸೂರ್ಯ ಬಿಳಿರಕ್ತ ಕಣಗಳ ಕಾರಕ ಚಂದ್ರ
ಕಬ್ಬಿನಾಂಶದ ಕೊರತೆ ಕಾರಕ ಗ್ರಹ- ಶನಿ
ಬಿ. ವಿಟಾಮಿನ್ ಕಾರಕ ಗ್ರಹ- ಚಂದ್ರ
ರಾಶಿಗಳು – ರಾಶಿ – ಸಿಂಹ ರಕ್ತ ಹೀನತೆ ರಾಶಿ -ಮೀನ
ಭಾವಗಳು – ರಕ್ತ ಸೂಚಿಸುವ ಐದನೆಯ ಭಾವ.
ಆಮ್ಲಜನಕ ತೋರಿಸುವ ಭಾವ – ಲಗ್ನ /ಲಗ್ನಾಧಿಪತಿ ಪೀಡಿತವಾದರೆ ರಕ್ತದಲ್ಲಿ ಆಮ್ಲಜನಕ ಕೊರತೆಯಿಂದ ಸುಸ್ತಾಗುತ್ತದೆ. ಮೀನರಾಶಿಯು ಕಬ್ಬಿಣಾಂಶ ರಾಶಿಯಾಗಿ, ಈ ರಾಶಿ ಪೀಡಿತರಾದರೆ ಕಬ್ಬಿಣಾಂಶದ ಕೊರತೆಯಾಗಿ, ರಕ್ತಹೀನತೆ, ಉದ್ವೇಗ, ತಲೆನೋವು, ದೇಹ ಉರಿಯಾಗುವಿಕೆಯಾಗುತ್ತದೆ.
ಕಬ್ಬಿಣಾಂಶದ ಕೊರತೆಯಿಂದ ರಕ್ತದಲ್ಲಿ ಆಮ್ಲಜನಕದ ಕೊರತೆಯಾಗಿ, ರಕ್ತವು ತಲೆಯ ಮಿದುಳು ಭಾಗದಲ್ಲಿಯೂ ಸಂಚರಿಸುತ್ತಾ,ಮಿದುಳಿನ ಯಾವ ಅಂಗದ ನಿಯಂತ್ರಣ ಭಾಗದಲ್ಲಿ ಸರಿಯಾಗಿ ರಕ್ತ ಸಂಚರಿಸುವುದಿಲ್ಲವೋ ಆ ಭಾಗದ ಅಂಗದ ನಿಯಂತ್ರಣ ಕೋಶಗಳಿಗೆ ಆಮ್ಲಜನಕ ಕೊರತೆಯಿಂದ ಕೋಶಗಳು ಶುಷ್ಕವಾಗದೆ, ಆ ದೇಹದ ನಿಯಂತ್ರಣ ಅಂಗವೂ ಸಹ ದೋಷಯುಕ್ತವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದೊಂದು ರಾಶಿಯೂ ಸಹ ಒಂದೊಂದು ಲವಣಕ್ಕೆ ಕಾರಕವಾಗಿದೆ ಆ ರಾಶಿಯು ಪಾಪಗ್ರಹಗಳಿಂದ ಪೀಡಿತವಾದರೆ ಆ ರಾಶಿಯ ಲವಣಗಳೂ ಸಹ ದೇಹದಲ್ಲಿ ಕೊರತೆಯಾಗಿ ದೇಹದ ಅಂಗಕ್ಕೆ ರಾಶಿಯಂತೆ ವ್ಯಾದಿಯನ್ನು ನೀಡುತ್ತದೆ.
ಉದಾಹರಣೆಗೆ ಜಾತಕದಲ್ಲಿ ಮೀನ ರಾಶಿ ಪೀಡಿತವಾದರೆ ಅದರಂತೆ ಫೇರಿಕ್ ಫಾಸ್ಫೇಟ್ ಕಬ್ಬಿಣಾಂಶ ಲವಣ ದೇಹದಲ್ಲಿ ಕೊರತೆಯಾಗಿ ಅದರಿಂದ ರಕ್ತಹೀನತೆ, ಉದ್ವೇಗ, ತಲೆನೋವು ದೇಹ ಉರಿಯಾಗುವಿಕೆಯಾಗುತ್ತದೆ.