ಮನೆ ರಾಷ್ಟ್ರೀಯ ಚೆನ್ನೈ ಬಯೋ ಸಿಎನ್‌ ಜಿ ಘಟಕಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್

ಚೆನ್ನೈ ಬಯೋ ಸಿಎನ್‌ ಜಿ ಘಟಕಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್

0

ಚೆನ್ನೈ(ತಮಿಳುನಾಡು) : ಇಲ್ಲಿನ ಚೆಟ್‌ ಪೇಟೆಯಲ್ಲಿರುವ ಬಯೋ ಸಿಎನ್‌ ಜಿ ಘಟಕಕ್ಕೆ ಭೇಟಿ ನೀಡಿರುವ  ಕರ್ನಾಟಕದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

Join Our Whatsapp Group

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಘನ ತ್ಯಾಜ್ಯ ನಿರ್ವಹಣೆಯಲ್ಲಿ ‘ಚೆನ್ನೈ ಮಾದರಿ’ ಅಧ್ಯಯನ ಮಾಡಲು ನಾನು ನನ್ನ ತಂಡದೊಂದಿಗೆ ಇಲ್ಲಿಗೆ ಬಂದಿದ್ದೇನೆ. ತ್ಯಾಜ್ಯ ನಿರ್ವಹಣೆಗೆ ವಿಭಿನ್ನವಾದ ವಿಧಾನವನ್ನು ಇಲ್ಲಿ ಅಳವಡಿಸಿಕೊಂಡಿದ್ದು, ಅದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ’ ಎಂದರು.

ಇದೇ ವೇಳೆ ಮೇಕೆದಾಟು ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ‘ದೇವರ ದಯೆಯಿಂದ ಉತ್ತಮ ಮಳೆಯಾಗಿದ್ದು, ಎರಡು ರಾಜ್ಯಗಳಿಗೂ ಸಹಾಯವಾಗಿದೆ. ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಉಪಯೋಗವಾಗಲಿದೆ’ ಎಂದು ಹೇಳಿದರು.

 ಬ್ರ್ಯಾಂಡ್ ಬೆಂಗಳೂರು ಮುನ್ನೋಟದ ಭಾಗವಾಗಿ ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಗೆ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಪ್ರಯತ್ನದಲ್ಲಿ ಇಂದು Urbaser ಕಂಪನಿ ಕಚೇರಿಗೆ ಭೇಟಿ ನೀಡಲಾಯಿತು. ಮನೆಗಳಿಂದ ಸಂಗ್ರಹಿಸಿದ ಕಸವನ್ನು ಹೇಗೆ ನಿರ್ವಹಣೆ ಮಾಡುತ್ತಾರೆಂಬ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಎಕ್ಸ್‌ನಲ್ಲಿ  ತಿಳಿಸಿದ್ದಾರೆ.