ಮನೆ ರಾಜಕೀಯ ಮಲ್ಲಿಕಾರ್ಜುನ ಖರ್ಗೆ ಅವರು ವೈಯಕ್ತಿಕ ಲಾಭಕ್ಕಾಗಿ ಅಧಿಕಾರ ಪಡೆದುಕೊಂಡವರಲ್ಲ: ಶರಣಪ್ರಕಾಶ ಪಾಟೀಲ್

ಮಲ್ಲಿಕಾರ್ಜುನ ಖರ್ಗೆ ಅವರು ವೈಯಕ್ತಿಕ ಲಾಭಕ್ಕಾಗಿ ಅಧಿಕಾರ ಪಡೆದುಕೊಂಡವರಲ್ಲ: ಶರಣಪ್ರಕಾಶ ಪಾಟೀಲ್

0

ಕಲಬುರಗಿ: ಹಿರಿಯ ನಾಯಕ ಖರ್ಗೆ ಕುಟುಂಬ ಒಡೆತನದ ಸಿದ್ಧಾರ್ಥ ಟ್ರಸ್ಟ್ ಗೆ ಭೂಮಿ ನೀಡಿದ್ದಕ್ಕೆ ರಾಜ್ಯಪಾಲರು ಕೇಳಿರುವ ವಿವರಣೆಗೆ ರಾಜ್ಯ ಸರ್ಕಾರ ಉತ್ತರ ನೀಡಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪ್ರಕಾಶ ಪಾಟೀಲ್ ಹೇಳಿದರು.

ಮಂಗಳವಾರ ಜಿಲ್ಲೆಯ ಸೇಡಂ ಕ್ಷೇತ್ರದಲ್ಲಿ ಮಳೆಯ ಹಾನಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಲ್ಲಿಕಾರ್ಜುನ ಖರ್ಗೆ ಅವರು 50ವರ್ಷ ರಾಜಕೀಯದಲ್ಲಿದ್ದಾರೆ ಯಾವತ್ತೂ ವೈಯಕ್ತಿಕ ಲಾಭಕ್ಕಾಗಿ ಅಧಿಕಾರ ಪಡೆದುಕೊಂಡಿಲ್ಲ.‌ ನಿಯಮಗಳ ಪ್ರಕಾರ ಭೂಮಿ ನೀಡಲಾಗಿದೆ. ‌ಮುಖ್ಯವಾಗಿ ಪಡೆಯಲಾದ ಭೂಮಿಯಲ್ಲಿ ಮೆಡಿಕಲ್ ಕಾಲೇಜು ಕಟ್ಟಿ ಲಾಭ ಮಾಡಿಕೊಳ್ಳುತ್ತಿಲ್ಲ .ಇದನ್ನು ವಿಧಾನ ಪರಿಷತ್ ವಿಪಕ್ಷ ಛಲವಾದಿ ನಾರಾಯಣಸ್ವಾಮಿ ಇದನ್ನು ಅರ್ಥ ಮಾಡಿಕೊಳ್ಳಬೇಕು.‌ಮಾಜಿ ಸಚಿವ ಮುರುಗೇಶ ನಿರಾಣಿ ತರಹ ಸ್ವಂತಕ್ಕಾಗಿ ಭೂಮಿ ಪಡೆದಿಲ್ಲ.‌ ನಾಲ್ಕು ಜನರಿಗೆ ಅನುಕೂಲವಾಗಲೆಂದು ಭೂಮಿ ಪಡೆಯಲಾಗಿದೆ. ಬಿಜೆಪಿಯವರು ಎಷ್ಟು ಭೂಮಿ ಹೊಡೆದಿದ್ದಾರೆ. ಅವರೇ ಮುಂದೆ ಬರಲಿ. ನಾರಾಯಣ ಸ್ವಾಮಿ ಅವರನ್ನು ಮುಂದೆ ಬಿಡೋದ್ಯಾಕೆ ಎಂದು ಸಚಿವರು ಪ್ರಶ್ನಿಸಿದರು.

ಮಳೆ ಹಾನಿ ಪರಿಶೀಲನೆ, ಪರಿಹಾರದ ಭರವಸೆ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿಪಿಟಿ ಮಳೆಯಿಂದ ಆಗಿರುವ ಹಾನಿಯನ್ನು ಸಚಿವ ಡಾ. ಶರಣಪ್ರಕಾಶ ಪಾಟೀಲ್ ವೀಕ್ಷಿಸಿದರು.‌

ಮಳೆಯಿಂದ ಕುಸಿದಿರುವ ಐತಿಹಾಸಿಕ ಮಳಖೇಡದ ಕೋಟೆಯನ್ನು ಹಾಗೂ ಜಲಾವೃತಗೊಂಡಿರುವ ಉತ್ತರಾದಿ ಮಠವನ್ನು ಸಹ ವೀಕ್ಷಿಸಿದರು. ಅದೇ ತೆರನಾಗಿ ಮಳೆಯಿಂದ ನೀರಲ್ಲಿ ನಿಂತಿರುವ ಬೆಳೆಯನ್ನು ಅವಲೋಕಿಸಿದರು.‌ ತದನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕಳೆದ ಎರಡ್ಮೂರು ದಿನದಿಂದ ಸತತ ಮಳೆಯಾಗುತ್ತಿರುವ ಕಾರಣ ಸೇಡಂ ತಾಲೂಕಿನ ವಿವಿಧೆಡೆ ರಸ್ತೆ, ಸೇತುವೆ, ಮನೆ ಹಾನಿಗಳಾಗಿವೆ. ಕೂಡಲೆ ಅಧಿಕಾರಿಗಳಿಗೆ ಸರ್ವೆ ಮಾಡಲು ಸೂಚಿಸಿದ್ದು ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ಒದಗಿಸಲಾಗುವುದು. ಇನ್ನು ಬೆಳೆ ಹಾನಿಗೆ ಸಂಬಂಧಿಸಿದಂತೆ ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳಿಂದ ಜಂಟಿ ಸರ್ವೇ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಮಳಖೇಡ ಸೇತುವೆ ಬಳಿ ಮೀನುಗಾರಿಕೆ ಮಾಡಿಕೊಂಡ ಮೀನುಗಾರರನ್ನು ಪ್ರವಾಹ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಮೀನುಗಾರರನ್ನು ಸಹ ಸಚಿವರು ಭೇಟಿಯಾಗಿ ಪ್ರವಾಹ ಹಿನ್ನೆಲೆಯಲ್ಲಿ ಮೀನುಗಾರಿಕೆ ಮಾಡದಂತೆ ತಿಳಿಸಿ ಅಲೆಮಾರಿಯವರಿಗೆ 2 ಎಕರೆ ಜಮೀನು ಗುರುತಿಸುವ ಕಾರ್ಯ ನಡೆದಿದೆ ಎಂದರು.

ಸಂಸದ ರಾಧಾಕೃಷ್ಣ ದೊಡ್ಡಮನಿ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರ ಶ್ರೇಯಾಂಕಾ ಧನಶ್ರೀ, ತಾಲೂಕಾ ಪಂಚಾಯತ್ ಇ.ಓ ಸೇರಿದಂತೆ ಅನೇಕ ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಇದ್ದರು.