ಮನೆ ಉದ್ಯೋಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ​ ಇಲಾಖೆಯಲ್ಲಿ ಫೆಲೋಶಿಪ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ​ ಇಲಾಖೆಯಲ್ಲಿ ಫೆಲೋಶಿಪ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಯಲ್ಲಿನ ಫೆಲೋಶಿಪ್​ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ನೇಮಕಾತಿ ನಡೆಯಲಿದೆ. ಎರಡು ವರ್ಷದ ಅವಧಿಗೆ ನೇಮಕಾತಿ ನಡೆಯಲಿದೆ.

Join Our Whatsapp Group

ಹುದ್ದೆಗಳ ವಿವರ: ರಾಜೀವ್​ ಗಾಂಧಿ ಪಂಚಾಯತ್​ ರಾಜ್​ ಫೆಲೋಶಿಪ್​ನ 7 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ ಇರುವ ತಾಲೂಕಿಗೆ ನೇಮಕಾತಿ ನಡೆಸಲಾಗುವುದು.

ವಿದ್ಯಾರ್ಹತೆ: ಸಮಾಜಶಾಸ್ತ್ರ ಅಥವಾ ಅರ್ಥಶಾಸ್ತ್ರ ಅಥವಾ ಗ್ರಾಮೀಣಾಭಿವೃದ್ಧಿ, ಸಾಮಾಜಿಕ ಕಾರ್ಯ ಅಥವಾ ಸಾರ್ವಜನಿಕ ನೀತಿ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ.

ಅಭ್ಯರ್ಥಿಗೆ ಕನ್ನಡವನ್ನು ಸ್ಪಷ್ಟವಾಗಿ ಬರೆಯಲು, ಓದಲು ಮತ್ತು ಮಾತನಾಡಲು ಬರಬೇಕು. ಕಲ್ಯಾಣ ಕರ್ನಾಟಕ ವಿಭಾಗದ ತಾಲೂಕಿನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ವಯೋಮಿತಿ: ಗರಿಷ್ಠ 32 ವರ್ಷ.

ವೇತನ: ಮಾಸಿಕ 60,000 ಶಿಷ್ಯವೇತನ. ಮಾಸಿಕ 1,500 ಪ್ರವಾಸ ಭತ್ಯೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ನ ಅಧಿಕೃತ ಜಾಲತಾಣದಲ್ಲಿ ನಿಗದಿತ ಅರ್ಜಿಯಲ್ಲಿ ನೋಂದಣಿ ಮಾಡಿ ಮುಂದುವರೆಯಬೇಕು.

ಈ ಹುದ್ದೆಗೆ ಸೆಪ್ಟೆಂಬರ್​ 2ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸೆಪ್ಟೆಂಬರ್​ 9 ಕಡೇಯ ದಿನ. ಈ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ prcrdpr.karnataka.gov.in ಇಲ್ಲಿಗೆ ಭೇಟಿ ನೀಡಿ.

ಇನ್ನೂ ಹೆಚ್ಚಿನ ಮಾಹಿತಿಗೆ ಕರ್ನಾಟಕ ಪಂಚಾಯತ್​ ರಾಜ್​​ ಆಯುಕ್ತಾಲಯದ ಸಹಾಯಕ ನಿರ್ದೇಶಕ ಜಗದೀಶ್​ ಕೆ.ಎಸ್.​ ಅವರ ಮೊಬೈಲ್​ ಸಂಖ್ಯೆ 9740790530 ಇಲ್ಲಿಗೆ ಸಂಪರ್ಕಿಸಿ.

ಹೆದ್ದಾರಿ ಪ್ರಾಧಿಕಾರದಲ್ಲಿ ಹುದ್ದೆಗಳು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಖಾಲಿ ಇರುವ ಜನರಲ್​ ಮ್ಯಾನೇರ್​ ಮತ್ತು ಡೆಪ್ಯೂಟಿ ಜನರಲ್​ ಮ್ಯಾನೇಜರ್​ ಮತ್ತು ಮ್ಯಾನೇಜರ್​ ಟೆಕ್ನಿಕಲ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳನ್ನು ಡೆಪ್ಯೂಟೆಷನ್ (ನಿಯೋಜನೆ) ಮೇರೆಗೆ ಭರ್ತಿ ಮಾಡಲಾಗುತ್ತಿದ್ದು, ಅಭ್ಯರ್ಥಿಗಳು ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಯಲ್ಲಿ 9 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು.

ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 23. ಈ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ nhai.gov.in ಇಲ್ಲಿಗೆ ಭೇಟಿ ನೀಡಿ.