ಮನೆ ಅಪರಾಧ ಪವಿತ್ರಾಗೆ ರೇಣುಕಸ್ವಾಮಿ ಅಶ್ಲೀಲ ಮೆಸೇಜ್‌ ಕಳುಹಿಸಿದ್ದು ದೃಢ

ಪವಿತ್ರಾಗೆ ರೇಣುಕಸ್ವಾಮಿ ಅಶ್ಲೀಲ ಮೆಸೇಜ್‌ ಕಳುಹಿಸಿದ್ದು ದೃಢ

0

ಬೆಂಗಳೂರು: ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ ನಿಂದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಕೊಲೆಗೆ ಕಾರಣ ಪತ್ತೆ ಹಚ್ಚುವಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

Join Our Whatsapp Group

ಪವಿತ್ರಾಗೌಡಗೆ ರೇಣುಕ ಸ್ವಾಮಿ ಕಳುಹಿಸಿದ್ದ ಮೆಸೇಜ್‌ ಗಳ ಕುರಿತು ಮಾಹಿತಿಯನ್ನು ಇನ್‌ಸ್ಟಾಗ್ರಾಂ ಮೂಲಕ ಪೊಲೀಸರು ಪಡೆದುಕೊಂಡಿದ್ದಾರೆ. ಅದರಲ್ಲಿ ರೇಣುಕಸ್ವಾಮಿ ಪವಿತ್ರಾಗೌಡಗೆ ಕಳುಹಿಸಿದ್ದ ಅಶ್ಲೀಲ ಫೋಟೋ ಮೆಸೇಜ್‌ಗಳ ಮಾಹಿತಿ ಇದೆ. ಈ ಮೂಲಕ ರೇಣುಕಸ್ವಾಮಿ ಪವಿತ್ರಾ ಗೌಡ ಅಶ್ಲೀಲ ಸಂದೇಶ ಕಳುಹಿಸಿರುವುದು ದೃಢವಾಗಿದೆ ತಿಳಿದು ಬಂದಿದೆ.

ಈ ಹಿಂದೆ ರೇಣುಕಸ್ವಾಮಿ ಕಳುಹಿಸಿದ್ದ ಮೆಸೇಜ್‌ಗಳ ಕುರಿತು ಮಾಹಿತಿ ನೀಡುವಂತೆ ಪೊಲೀಸರು ಇನ್‌ ಸ್ಟಾಗ್ರಾಂಗೆ ರೇಣುಕಸ್ವಾಮಿ ಐಡಿ ಸಮೇತ ಪತ್ರ ಬರೆದಿದ್ದರು. ಈ ಮಾಹಿತಿಯನ್ನು ಪೊಲೀಸರು ಚಾರ್ಜ್‌ ಶೀಟ್‌ ಉಲ್ಲೇಸಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತೂಂದೆಡೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿಖೀಲ್‌ ನಾಯಕ್‌, ಕೇಶವಮೂರ್ತಿ ಹಾಗೂ ಕಾರ್ತಿಕ್‌ ಪೊಲೀಸ್‌ ಠಾಣೆಗೆ ಬಂದು ಶರಣಾಗಿ, ಹಣಕಾಸಿನ ವಿಚಾರಕ್ಕೆ ರೇಣುಕಸ್ವಾಮಿ ಕೊಂದಿದ್ದೇವೆ ಎಂದಿದ್ದರು. ಆದರೆ, ತನಿಖೆಯಲ್ಲಿ ಕೊಲೆಯಲ್ಲಿ ಆರೋಪಿಗಳ ಪಾತ್ರದ ಬಗ್ಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಹೇಳಲಾಗಿದೆ. ಆದರೆ, ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ. ಹೀಗಾಗಿ ಸಾಕ್ಷಿ ನಾಶ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ ಆರೋಪದಡಿ ಸೆಕ್ಷನ್‌ ಉಲ್ಲೇಖಿಸಲಾಗುತ್ತದೆ ಎಂದು ಹೇಳಲಾಗಿದೆ.

ವಿಲ್ಸನ್‌ಗಾರ್ಡನ್‌ ನಾಗ ಆ್ಯಂಡ್‌ ಗ್ಯಾಂಗ್‌ ಸ್ಥಳಾಂತರಕ್ಕೆ ಪತ್ರ

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ ಜತೆ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ಹಾಗೂ ಇತರು ವಿಶೇಷ ಆತಿಥ್ಯ ಸ್ವೀಕರಿಸಿದ ಫೋಟೋ ವೈರಲ್‌ ಸಂಬಂಧ, ದರ್ಶನ್‌ ಹಾಗೂ ಆತನ ಗ್ಯಾಂಗ್‌ ಸದಸ್ಯರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಿದಂತೆ, ವಿಲ್ಸನ್‌ ಗಾರ್ಡನ್‌ ನಾಗ ಹಾಗೂ ಆತನ 20 ಮಂದಿ ಸಹಚರರನ್ನು ಸ್ಥಳಾಂತರ ಮಾಡುವಂತೆ ಕಾರಾಗೃಹ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ. ಕೋರ್ಟ್‌ ಸೂಚನೆ ಮೇರೆಗೆ ಆರೋಪಿಗಳನ್ನು ಕಾರಾಗೃಹ ಇಲಾಖೆ ಸ್ಥಳಾಂತರ ಕುರಿತು ನಿರ್ಧರಿಸಲಿದೆ ಎಂದು ನಗರದ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಮಾಹಿತಿ ನೀಡಿದರು.