ಪ್ರಸಕ್ತ ಸಾಲಿನ ಅಖಿಲ ಭಾರತ ವಕೀಲರ ಪರೀಕ್ಷೆ (AIBE XIX) ಈ ಬಾರಿ ನವೆಂಬರ್ 24ರಂದು ನಡೆಯಲಿದೆ ಎಂದು ಭಾರತೀಯ ವಕೀಲರ ಪರಿಷತ್ (ಬಿಸಿಐ) ಮಂಗಳವಾರ ಘೋಷಿಸಿದೆ.
ಬಿಸಿಐ ಅಧಿಕೃತ ಜಾಲತಾಣದಲ್ಲಿ ಪರೀಕ್ಷೆಯ ಆನ್‌ಲೈನ್ ನೋಂದಣಿ ಸೆಪ್ಟೆಂಬರ್ 3ರಿಂದ ಆರಂಭವಾಗಿದ್ದು ಕೊನೆಯ ದಿನಾಂಕ ಅಕ್ಟೋಬರ್ 25.
ಆನ್‌ಲೈನ್ ವಿಧಾನದಲ್ಲಿ ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನ ಅಕ್ಟೋಬರ್ 28 ಮತ್ತು ನೋಂದಣಿ ನಮೂನೆಯಲ್ಲಿ ತಿದ್ದುಪಡಿ ಮಾಡಲು ಕಡೆಯ ದಿನ ಅಕ್ಟೋಬರ್ 30.ನವೆಂಬರ್ 18ರಂದು ಪರೀಕ್ಷಾ ಪ್ರವೇಶ ಪತ್ರಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಗಮನಾರ್ಹವಾಗಿ, ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬೇಕಾದ ಕನಿಷ್ಠ ಅಂಕ ಶೇ 45 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶೇ 40.