ಮನೆ ಮನರಂಜನೆ  “ಯಲಾ ಕುನ್ನಿ’ ಚಿತ್ರೀಕರಣ ಪೂರ್ಣ: ದ್ವಿಪಾತ್ರದಲ್ಲಿ ಕೋಮಲ್‌

 “ಯಲಾ ಕುನ್ನಿ’ ಚಿತ್ರೀಕರಣ ಪೂರ್ಣ: ದ್ವಿಪಾತ್ರದಲ್ಲಿ ಕೋಮಲ್‌

0

ಕೋಮಲ್‌ ನಾಯಕರಾಗಿ ನಟಿಸುತ್ತಿರುವ “ಯಲಾ ಕುನ್ನಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ಚಿತ್ರ ಬಿಝಿಯಾಗಿದೆ.

Join Our Whatsapp Group

ಅನುಸೂಯ ಕೋಮಲ್‌ ಕುಮಾರ್‌, ಸಹನ ಮೂರ್ತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಪ್ರದೀಪ್‌ ಈ ಸಿನಿಮಾದ ನಿರ್ದೇಶಕರು.

ಬೆಂಗಳೂರು, ಮೈಸೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ನಡೆದಿದೆ. ಕೋಮಲ್‌ ಕುಮಾರ್‌ ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ.

ಚಿತ್ರದಲ್ಲಿ ದತ್ತಣ್ಣ , ಸಾಧು ಕೋಕಿಲ , ಮಿತ್ರ, ಸುಚೇಂದ್ರ ಪ್ರಸಾದ್‌ , ಶಿವರಾಜ್‌ ಕೆ ಆರ್‌.ಪೇಟೆ , ತಬಲಾ ನಾಣಿ, ರಾಜು ತಾಳಿ ಕೋಟೆ, ಸುಮನ್‌ ನಗರಕರ್‌, ಮಾನಸಿ ಸುಧೀರ್‌, ಜಗ್ಗೇಶ್‌ ಅವರ ದ್ವಿತಿಯ ಪುತ್ರ ಯತಿರಾಜ್‌ ಜಗ್ಗೇಶ್‌, ರಘು ರಾಮನಕೊಪ್ಪ ,ಮಹಾಂತೇಶ್‌, ಬೌಬೌ ಜಯರಾಮ್‌ ಮುಂತಾದವರ ತಾರಾಬಳಗವಿದೆ.