ಮನೆ ಕ್ರೀಡೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024: ಶಾಟ್‌ಪುಟ್ ಪಟು ಸಚಿನ್ ಸರ್ಜೆರಾವ್ ಖಿಲಾರಿಗೆ ಬೆಳ್ಳಿ ಪದಕ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024: ಶಾಟ್‌ಪುಟ್ ಪಟು ಸಚಿನ್ ಸರ್ಜೆರಾವ್ ಖಿಲಾರಿಗೆ ಬೆಳ್ಳಿ ಪದಕ

0

ಪ್ಯಾರಿಸ್:   ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಶಾಟ್‌ಪುಟ್ ಪಟು ಸಚಿನ್ ಸರ್ಜೆರಾವ್ ಖಿಲಾರಿ, ಬೆಳ್ಳಿ ಪದಕ ಗೆದ್ದಿದ್ದಾರೆ.

Join Our Whatsapp Group

ಪುರುಷರ ಎಫ್46 ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿರುವ ಸರ್ಜೆರಾವ್, 16.32 ಮೀ. ದೂರ ಶಾಟ್‌ಪುಟ್ ಎಸೆಯುವ ಮೂಲಕ ಭಾರತಕ್ಕೆ ಮಗದೊಂದು ಪದಕ ಗೆಲ್ಲಲು ನೆರವಾದರು.

ಆ ಮೂಲಕ ಸಚಿನ್ ಖಿಲಾರಿ, ತಮ್ಮದೇ ಹೆಸರಲ್ಲಿದ್ದ ಏಷ್ಯನ್ ದಾಖಲೆಯನ್ನು ಉತ್ತಮಪಡಿಸಿದರು.

ಮೇ ತಿಂಗಳಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 34 ವರ್ಷದ ಖಿಲಾರಿ 16.30 ಮೀ. ದೂರ ಶಾಟ್‌ಪುಟ್ ಎಸೆಯುವ ಮೂಲಕ ಏಷ್ಯನ್ ದಾಖಲೆ ಬರೆದಿದ್ದರು.

ಈ ವಿಭಾಗದಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ  ಚಿನ್ನದ ಪದಕ ಗೆದ್ದಿದ್ದ ಗ್ರೆಗ್ ಸ್ಟೀವರ್ಟ್ ಸ್ವರ್ಣ ಪದಕವನ್ನು (16.38 ಮೀ.) ಉಳಿಸಿಕೊಂಡರು. ಕ್ರೋವೆಷಿಯಾದ ಲುಕಾ ಬಾಕೊವಿಕ್ ಕಂಚಿನ ಪದಕ (16.27 ಮೀ.) ಗೆದ್ದರು.

ಕಳೆದ  ವರ್ಷ ಚೀನಾದಲ್ಲಿ ನಡೆದಿದ್ದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲೂ ಸಚಿನ್ ಸರ್ಜೆರಾವ್ ಖಿಲಾರಿ ಚಿನ್ನದ ಪದಕ ಗೆದ್ದಿದ್ದರು.