ಮನೆ ಅಪರಾಧ ಆರ್‌ಟಿಐ ಕಾರ್ಯಕರ್ತ ಹಾಗೂ ಮೂಡ ಹಗರಣದ ದೂರುದಾರ ಗಂಗರಾಜು ಮೇಲೆ ಕೊಲೆ ಯತ್ನ ಎನ್ನಲಾದ ಆರೋಪಕ್ಕೆ...

ಆರ್‌ಟಿಐ ಕಾರ್ಯಕರ್ತ ಹಾಗೂ ಮೂಡ ಹಗರಣದ ದೂರುದಾರ ಗಂಗರಾಜು ಮೇಲೆ ಕೊಲೆ ಯತ್ನ ಎನ್ನಲಾದ ಆರೋಪಕ್ಕೆ ಸ್ಫೋಟಕ ತಿರುವು

0

ಶ್ರೀರಂಗಪಟ್ಟಣ: ಇದೇ ತಿಂಗಳು 1ನೇ ತಾರೀಕಿನ ಭಾನುವಾರ ಆರ್ ಟಿ ಐ ಕಾರ್ಯಕರ್ತರಾದ ಗಂಗರಾಜು ಎಂಬುವರ ಮೇಲೆ ಕಾರಿನಲ್ಲಿ ಮೈಸೂರಿನಿಂದ ತುರುವೇಕೆರೆಗೆ ಕುಟುಂಬ ಸಮೇತರಾಗಿ ಚಾಲನೆಯಲ್ಲಿ ಇರುವಾಗ ಮಾರ್ಗ ಮಧ್ಯೆ ಶ್ರೀರಂಗಪಟ್ಟಣದಲ್ಲಿ ಗಂಗರಾಜುರವರು ಚಲಿಸುತ್ತಿದ್ದ ಕಾರನ್ನು 4ಜನ ಯುವಕರು ಹಿಂಬಾಲಿಸಿ ಕೊಲೆ ಯತ್ನ ಆರೋಪದಡಿ ಮೈಸೂರು ಆಯುಕ್ತರ ಕಚೇರಿಗೆ ದೂರು ಸಲ್ಲಿಸಲಾಗಿತ್ತು.

Join Our Whatsapp Group

ಅಸಲಿಗೆ ಹಿಂಬಾಲಿಸಿದ ಆ ನಾಲ್ಕು ಜನ ಹುಡುಗರು ಬೈಕ್ ಅಥವಾ ಕಾರು ಸಾಲ ಮರುಪಾವತಿ ಮಾಡದೆ ಸಂಚರಿಸುವ ವಾಹನ ಜಪ್ತಿ ಮಾಡುವ ಖಾಸಗಿ ಬ್ಯಾಂಕಿನ ಕೆಲಸಗಾರರಾಗಿರುತ್ತಾರೆ.

ಆ ನಾಲ್ಕು ಜನ ಯುವಕರು ಸಂದೇಶ್ ಎಂ ಕೆ, ಶಿವ ಪ್ರಸಾದ್ ಎಸ್, ಹೇಮಂತ ಕುಮಾರ್ ಕೆ ಎಸ್ ಹಾಗು ಹೇಮಂತ ಎಂ ಬಿ, ಶ್ರೀರಂಗಪಟ್ಟಣ ತಾಲೂಕಿನವರೇ ಆಗಿದ್ದು, ಅವರ ಹೇಳಿಕೆಯ ಪ್ರಕಾರ ನಾವು ಯಾವುದೇ ಕೊಲೆ ಪ್ರಯತ್ನ ಮಾಡಿಲ್ಲ. ಆರ್ ಟಿ ಐ ಕಾರ್ಯಕರ್ತ ಗಂಗರಾಜುರವರು ಚಲಿಸುತ್ತಿದ್ದ ವಾಹನ ರೆಡ್ ಕಲರ್ ಬಲೇನೋ ನಂಬರ್ KA09 MD5058 ನ (ರಾಜೇಂದ್ರ ಬೆಟ್ಟಹಳ್ಳಿ ತಿಮ್ಮೇಗೌಡ ಮಾಲೀಕನ ಹೆಸರು ಇವರು ಗಂಗರಾಜು ರವರಿಗೆ ಚಿಕ್ಕಪ್ಪನಾಗಿರುತ್ತಾರೆ)ಕಾರಿನ ಮೇಲೆ 16 ತಿಂಗಳಿನ ಸಾಲ ಮರುಪಾವತಿ ಬಾಕಿ ಉಳಿದಿದ್ದು, ಅದರ ಮಾಹಿತಿಯನ್ನು ಬ್ಯಾಂಕಿನವರು ವಾಹನ ಜಪ್ತಿ ಮಾಡುವ ಯುವಕರಿಗೆ ರವಾನಿಸಿದ್ದಾರೆ. ಅದರ ಅನುಸಾರ ಸೆಪ್ಟಂಬರ್ 1ನೇ ಭಾನುವಾರದಂದು ಶ್ರೀರಂಗಪಟ್ಟಣದ ಬಳಿ ಕಾರನ್ನು ಕಂಡ ಕೂಡಲೇ ಹಿಂಬಾಲಿಸಿ ಸುಮಾರು 5 ಕಿಲೋಮೀಟರ್ ವರೆಗೂ ಕಾರನ್ನು ನಿಲ್ಲಿಸುವಂತೆ ಸೂಚಿಸಿದರು.  ಗಂಗರಾಜುರವರು ಗಾಬರಿಗೊಂಡು  ಮಾತನ್ನು ಆಲಿಸದೆ ಅತಿ ವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು  ಮುಂದೆ ಸಾಗುವಾಗ ಅಪಘಾತವಾಗಬಹುದೆಂಬ ಕಾರಣಕ್ಕೆ ವಾಹನ ಜಪ್ತಿದಾರರು ವಾಪಸ್ ಹಿಂದಿರುಗುತ್ತೇವೆ.

ಮತ್ತು RTI ಕಾರ್ಯಕರ್ತ ಗಂಗರಾಜು ರವರು ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಹಿಂಬಾಲಿಸಿದ್ದಾರೆಂಬ ಆರೋಪವನ್ನು ಸಹ ಮಾಡಿರುತ್ತಾರೆ. ಹೌದು ಇದು ಸತ್ಯ ಆದರೆ ಇತ್ತೀಚಿಗೆ ಬಂದಿರುವ ಕಾನೂನಿನ ಅನ್ವಯ ಎಚ್ ಎಸ್ ಆರ್ ಪಿ ನಂಬರ್ ಪಾಲಕ ಬಿದ್ದು ಹೋಗಿರುವುದರಿಂದ ಆಗಸ್ಟ್ 17ನೇ ತಾರೀಕಿನಂದು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದೇವೆ ದೂರಿನ ಪ್ರತಿ ನಮ್ಮ ಬಳಿಯೇ ಇದೆ ಎಂದು ತಿಳಿಸಿ, ಪೋಲಿಸ್ ಅಧಿಕಾರಿಗಳು ಕರೆ ಮಾಡಿ ವಾಹನ ಜಪ್ತಿದಾರರಿಗೆ ತನಿಖೆ ನಡೆಸಲು ಸಹಕರಿಸಬೇಕಾಗಿ ಹೇಳಿರುತ್ತಾರೆ. ಆರೋಪ ಒತ್ತ ಯುವಕರು ಪೊಲೀಸ್ ಠಾಣೆಗೆ ಬ್ಯಾಂಕಿನ ಮ್ಯಾನೇಜರ್ ಜೊತೆ ಸೂಕ್ತ ದಾಖಲೆಗಳೊಂದಿಗೆ ತೆರಳಲು ತನಿಖೆಗೆ ಸಹಕರಿಸಲು ಸಿದ್ದರಾಗಿದ್ದೇವೆ ಎಂದು ತಿಳಿಸಿದ್ದರು.