ಮನೆ ರಾಜಕೀಯ ನ್ಯಾಯಾಲಯ ತೀರ್ಪು ಬರುವ ಮುನ್ನ ರಾಜೀನಾಮೆ ನೀಡಿ ಗೌರವಯುತವಾಗಿ ಸಿದ್ದರಾಮಯ್ಯ ನಿರ್ಗಮಿಸಲಿ: ಬಿಎಸ್ ವೈ

ನ್ಯಾಯಾಲಯ ತೀರ್ಪು ಬರುವ ಮುನ್ನ ರಾಜೀನಾಮೆ ನೀಡಿ ಗೌರವಯುತವಾಗಿ ಸಿದ್ದರಾಮಯ್ಯ ನಿರ್ಗಮಿಸಲಿ: ಬಿಎಸ್ ವೈ

0

ಶಿವಮೊಗ್ಗ: ‘ನ್ಯಾಯಾಲಯದ ತೀರ್ಪು ಬಂದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬರಲಿದೆ. ಅದಕ್ಕೂ ಮುನ್ನ ರಾಜೀನಾಮೆ ಕೊಟ್ಟು ಗೌರವಯುತವಾಗಿ ನಿರ್ಗಮಿಸಲಿ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದರು.

Join Our Whatsapp Group

ಸಿದ್ದರಾಮಯ್ಯ ಮಾಡಿರುವ ಎಲ್ಲ ಹಗರಣಗಳು ಸಾಬೀತಾಗುತ್ತಿವೆ. ಅವರು ಕಾನೂನಿನ ಹಿಡಿತದಿಂದ ತಪ್ಪಿಸಿ ಕೊಳ್ಳಲು ಸಾಧ್ಯವಿಲ್ಲ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ಕೋವಿಡ್ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸರ್ಕಾರ ಸ್ವತಂತ್ರವಾಗಿದೆ. ರಾಜ್ಯಪಾಲರು ಇನ್ನೂ ನಾಲ್ವರು ಸಚಿವರಿಗೆ ನೋಟಿಸ್ ಕೊಟ್ಟಿದ್ದಾರೆ. ಆ ವಿಚಾರದಲ್ಲೂ ಅವರು ಸರ್ವ ಸ್ವತಂತ್ರರು’ ಎಂದರು.