ಮನೆ ಮಕ್ಕಳ ಶಿಕ್ಷಣ ಸೈಕಿಯಾಟ್ರಿಸ್ಟ್

ಸೈಕಿಯಾಟ್ರಿಸ್ಟ್

0

ಚಿಕಿತ್ಸೆಗಳಿಗೆ ಸೈಕಾಯಾಟ್ರಿಸ್ಟ್, ಉಪಾಯಗಳಿಗೆ ಸೈಕಾಲಜಿಸ್ಟ್ ಸಹಾಯಕವಾಗಬಲ್ಲರು. ಸೈಕಿಯಾಟ್ರಿಸ್ಟ್ ಎಂದರೆ ಎಮ್. ಬಿ. ಬಿ. ಎಸ್. ಅನಂತರ ಸೈಕಿಯಾಟ್ರಿ ಓದಿದವರು. ಸೈಕಾಲಜಿಸ್ಟ್ ಎಂದರೆ ಎಂ. ಎ ಅಥವಾ ಎಮ್ಮೆಸ್ಸಿ ಸೈಕಾಲಜಿ ಓದಿ, ಪಿ.ಹೆಚ್.ಡಿ.ಅಥವಾ ಡಿಪ್ಲೋಮ ಮಾಡಿದವರು ಮೊದಲಿನವರು.

Join Our Whatsapp Group


ಔಷಧಿಗಳನ್ನು ಕೊಡುತ್ತಾರೆ. ಎರಡನೆಯವರು ಕೊಡುವುದಿಲ್ಲ ಕೊಡಲೂ ಬಾರದು. ಈ ಎರಡು ಸಮಸ್ಯೆಗಳ ನಡುವೆ ಒಂದು ಸೂಕ್ಷ್ಮರೇಖೆಯಂತಹ ವ್ಯತ್ಯಾಸವಿರುತ್ತದೆ ಅದನ್ನು ತಿಳಿದುಕೊಳ್ಳಬೇಕಾದ ಜವಾಬ್ದಾರಿ ಇಬ್ಬರ ಮೇಲೂ ಇದೆ. ಕೆಲವು ಸಮಸ್ಯೆಗಳಿಗೆ ಉಪಾಯಗಳೇ ಸಾಕು. ಕೆಲವೊಂದು ಸಮಸ್ಯೆಗಳಿಗೆ ಉಪಾಯಗಳ ಮೊದಲು ಔಷಧಿಗಳನ್ನು ಉಪಯೋಗಿಸಬೇಕು. ಆದರೆ ನಮ್ಮ ದೇಶದಲ್ಲಿ ಸೈಕಿಯಾಟ್ರಿಸ್ಟ್ ಎಂದರೆ ಕರೆಂಟ್ ಶಾಕ್ ನೀಡುತ್ತಾರೆಂದು, ಅವುಗಳನ್ನು ಒಂದು ಬಾರಿ ಉಪಯೋಗಿಸಿದರೆ ಜೀವನಪರ್ಯಂತ ಉಪಯೋಗಿಸುತ್ತಲೇ ಇರಬೇಕೆಂದು….

ಈ ರೀತಿ ಅರ್ಥ ರಹಿತ ಕಲ್ಪನೆಗಳಿವೆ.ಅವುಗಳಲ್ಲಿ ಎಲ್ಲಷ್ಟೂ ನಿಜವಿಲ್ಲ. ಸೈಕಿಯಾಟ್ರಿಯಲ್ಲೂ ಕೂಡಾ ಅದ್ಭುತವಾದ ಔಷಧಿಗಳು ಬಂದಿವೆ. ಅವುಗಳನ್ನು ನೀಡುವ ವೈದ್ಯರು ನಿಷ್ಣಾತರಾದ್ದರಿಂದ ಭಯ ಪಡಬೇಕಾದ ಅಗತ್ಯವಿಲ್ಲ.
ಇನ್ನೂ ಕೆಲವು ಮಂದಿ ಸೈಕಿಯಾಟ್ರಿಸ್ಟ್ ನೀಡಿದ ಔಷಧಿಗಳನ್ನು ಒಂದೆರಡು ದಿನಗಳ ಕಾಲ ಉಪಯೋಗಿಸಿ ದುಷ್ಟ ರಿಣಾಮವಾಯಿತೆಂದು ತಾವೇ ಡಿಸೈಡ್ ಮಾಡಿಕೊಂಡು ಅವುಗಳನ್ನು ಮೂಲೆಗೆಸೆಯುತ್ತಾರೆ. ಇದು ಸ್ವಯಂಕೃತ ಅಪರಾಧ.ಆ ಔಷಧಿ ನಿಮ್ಮ ಮೈಗೆ ಒಗ್ಗದಿದ್ದರೆ ಮತ್ತೆ ವೈದ್ಯರನ್ನು ಭೇಟಿ ಮಾಡಿ ವಿಷಯವನ್ನು ತಿಳಿಸಬೇಕು.ಆಗ ಸೂಕ್ತ ಔಷಧಿಗಳನ್ನು ನೀಡುತ್ತಾರೆ ಹಾಗಲ್ಲದೆ ಮತ್ತೊಂದು ವೈದ್ಯ ಪದತಿ, ಹಿಪ್ನಾಟಿಜಂ ಅಥವಾ ಇತರ ವೈದ್ಯಕ್ಕೆ ಹೋಗುವುದು ಒಳ್ಳೆಯದಲ್ಲ.
ಹಾಗೆಯೇ ಮತ್ತೊಂದು ಮುಖ್ಯ ವಿಷಯ ಸೈಕಿಯಾಟ್ರಿಸ್ಟ್ ಔಷಧಿಗಳನ್ನು ನೀಡಿರುವ ಸಮಯದಲ್ಲಿ ನಿಮ್ಮ ಜೀವನ ಶೈಲಿ ಅಭ್ಯಾಸ ಹವ್ಯಾಸಗಳನ್ನು ತಿಳಿದುಕೊಂಡು ಅದಕ್ಕೆ ತಕ್ಕ ಹಾಗೆ ಕೊಡುತ್ತಿರುತ್ತಾರೆ. ಅದ್ದರಿಂದ ಯಾವುದೇ ಕಾರಣಕ್ಕೂ ವೈದ್ಯರನ್ನು ಆಗಾಗ್ಗೆ ಬದಲಾಯಿಸಬೇಡಿ. ವೈದ್ಯ ವಿಧಾನವನ್ನಂತೂ ಬದಲಾಯಿಸಲೇ ಬಾರದು.ನಮ್ಮ ಕ್ಲಿನಿಕ್ ಗೆ ಪ್ರತಿ ದಿನ ಬರುವವರ ಪೈಕಿ ಶೇಕಡ 75 ರಷ್ಟು ಮಂದಿ ಈ ವರ್ಗಕ್ಕೆ ಸೇರಿದವರು. ಅಂತಹವರಿಗೆ ಸೂಕ್ತ ಸಲಹೆ ನೀಡಿ ಮತ್ತೆ ವೈದ್ಯರ ಬಳಿಗೆ ಹೋಗಲು ಹೇಳುವಲ್ಲಿ ಸಾಕುಸಾಕಾಗುತ್ತದೆ. ಕೆಲವರಿಗಂತೂ ಎಲ್ಲಿಲ್ಲದ ಕೋಪ. ರಾಜಕಾರಣಿಗಳು,. ಐ. ಎ.ಎಸ್. ಐ. ಪಿ.ಎಸ್. ಗಳಿಂದ ಶಿಫಾರಸ್ಸು ಒತ್ತಡಗಳನ್ನು ಕೂಡಾ ಮಾಡಿಸುವುದಿದೆ. ಅಂತಹವರನ್ನು ಸಮಾಧಾನಪಡಿಸುವುದು ಕೂಡಾ ಕಷ್ಟದ ಕೆಲಸ.
ಆದ್ದರಿಂದಲೇ ನಮ್ಮ ಕ್ಲಿನಿಕ್
ನಲ್ಲಿ ಪ್ರವೇಶದ್ವಾರದಲ್ಲೇ ಮಾನಸಿಕ ಚಿಕಿತ್ಸೆ ಪಡೆದುಕೊಳ್ಳುತ್ತಿರು,ವವರು ಆ ಯಾವ ವೈದ್ಯರಿಂದ ಒಂದು ಲೆಟರ್ ತರಬೇಕೆಂಬ ನೋಟಿಸ್ ಆಂಟಿಸಲಾಗಿದೆ ಈ ವಿಷಯ ಹೈದರಾಬಾದ್ನ ಸೈಕಿಯಾಟ್ರಿಸ್ಟ್ ಗಳಿಗೆಲ್ಲ ಗೊತ್ತು.ನನ್ನ ಉದ್ದೇಶವೇನೆಂದರೆ,ರೋಗಿಗೆ ತಕ್ಷಣ ನಿವಾರಣೆಯಾಗಬೇಕು. ಅವರವರು ಮಾಡುವ ಕೆಲಸ ಅವರೇ ಮಾಡಬೇಕು ಆದ್ದರಿಂದ ತಾಯಿ ತಂದೆಯವರು ನಿಮ್ಮ ಮಕ್ಕಳಿಗೆ ಬಂದಿರುವ ಸಮಸ್ಯೆಗಳನ್ನು ಎಂತವು, ಯಾರ ಬಳಿಗೆ ಹೋಗಬೇಕೆಂಬುದನ್ನು ಮುಂಚಿತವಾಗಿಯೇ ತಿಳಿದುಕೊಳ್ಳುವುದು ಒಳ್ಳೆಯದು.