ಮನೆ ಮನೆ ಮದ್ದು ಜೀವಸತ್ವ ಕೊರತೆ

ಜೀವಸತ್ವ ಕೊರತೆ

0

1. ಹಸಿಯ  ಕೊತ್ತಂಬರಿ ಸೊಪ್ಪನ್ನು ಪ್ರತಿದಿನ ಊಟಕ್ಕೆ ಮತ್ತು ತಿಂಡಿಗೆ ಬಳಸುವುದರಿಂದ ಕಬ್ಬಿಣಾಂಶ  ಜೀವಸತ್ವದ ತೊಂದರೆಯಿಂದ ಉಂಟಾಗುವ ವ್ಯಾಧಿಗಳ ನಿವಾರಣೆ ಆಗುವುದರೊಂದಿಗೆ ಮೂಳೆಗಳು ಬಲಿಯಲ್ಲೂ ಅನುಕೂಲ ಆಗುವುದು.

Join Our Whatsapp Group

2. ಎ ಬಿ ಸಿ ಅನ್ನಾಂಗಗಳು ಸೇಬುಹಣ್ಣಿನಲ್ಲಿ ಇರುವುದರಿಂದ ದಿನವೂ ಸೇವಿಸುತ್ತಿದ್ದರೆ ಜೀವಸತ್ವದ ಕೊರತೆ ಕಡಿಮೆ ಆಗುವುದು.

3. ಮಾವಿನಕಾಯಿಯನ್ನು ತಿಂಡಿಗಳೊಂದಿಗೆ,ಚಟ್ನಿಯ ರೂಪದಲ್ಲಿ ಉಪ್ಪಿನಕಾಯಿಯ ರೂಪದಲ್ಲಿ ಮಿತವಾಗಿ ಬಳಸುತ್ತಿರುವುದರಿಂದಲೂ ಜೀವಸತ್ವಗಳ ಕೊರತೆ ನಿವಾರಣೆ ಆಗುವುದಿಲ್ಲದೆ ಆರೋಗ್ಯ ಸುಧಾರಣೆ ಆಗುವುದು.

4. ಬಾಳೆಹಣ್ಣಿನಲ್ಲಿ ಕಬ್ಬಿಣ ಮತ್ತು ಗಂಧದ ಸತ್ವ ಇರುವುದರಿಂದ ದಿನವೂ ಊಟ ಆದನಂತರ ಇದನ್ನು ಸೇವಿಸುವುದರಿಂದ ಜೀವಸತ್ವದ ಕೊರತೆಯನ್ನು ನಿವಾರಿಸಿಕೊಳ್ಳಬಹುದು.

5. ನೆಲ್ಲಿಕಾಯಿಯ ರಸವನ್ನು ಅಷ್ಟೇ ಪ್ರಮಾಣದಲ್ಲಿ ಜೇನುತುಪ್ಪದೊಂದಿಗೆ ಬೆರೆಸಿ, ದಿನವೂ ಬೆಳಿಗ್ಗೆ ಬರಿಯ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ ಸಿ ಅನ್ನಾಂಗದ ಕೊರತೆ ನಿವಾರಣೆ ಆಗುವುದು.

6. ಕುಸುಬಲು ಅಕ್ಕಿಯಿಂದ ಇಡ್ಲಿ ಮಾಡಿ ತಿಂದರೆ ಜೀವಸತ್ವಗಳ ಕೊರತೆ ಕಡಿಮೆ ಆಗುವುದು.

7. ಅಗಸೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ,ಕಬ್ಬಿಣದ, ರಂಜಕದ ಅಂಶ ಇರುವುದರಿಂದ ಇದನ್ನು ಪಲ್ಯ ಹಾಗೂ ಬಸಿದ ಸಾರಿನ ರೂಪದಲ್ಲಿ ವಾರಕ್ಕೆ ಎರಡು ಮೂರು ದಿನಗಳು ಮಾಡಿ ಉಪಯೋಗಿಸುವುದರ ಮೂಲಕ ಜೀವ ಸತ್ವದ ಕೊರತೆಯನ್ನು ನಿವಾರಿಸಿಕೊಳ್ಳಬಹುದು.

8. ಹಸಿಯ ಬೀಟ್ರೋಟ್ ತಿನ್ನುವುದರಿಂದ ಸಿ ಜೀವಶತ್ವದ ಕೊರತೆ ನಿವಾರಣೆ ಆಗುವುದು.

9. ಹಾಲು ಅತ್ಯುತ್ತಮ ಆಹಾರ. ಅದರಲ್ಲಿ ಸಾಮಾನ್ಯವಾಗಿ ಎಲ್ಲಾ ಅನ್ನೋಂಗಗಳಕ ಇರುವುದರಿಂದ ದಿನವೂ ಒಂದೆರಡು ಬಾರಿ ನಿಯತ ಕಾಲದಲ್ಲಿ ನಿಯಮಿತ ರೂಪದಲ್ಲಿ ಕುಡಿಯುವುದರಿಂದ ಜೀವ ಸತ್ವದ ಕೊರತೆ ಕಡಿಮೆ ಆಗುವುದು.

10. ಹಾಲಿನೊಂದಿಗೆ ಅರಿಶಿನ ಪುಡಿ ಹಾಗೂ ಜೇನುತುಪ್ಪ ಸೇರಿಸಿ, ಕುಡಿಯುವುದರಿಂದ ಕಣ್ಣಿನ ಬೆಳಕಿಗೆ ಬೇಕಾದ ಜೀವಸತ್ವ ತೊಂದರೆ ಆಗುವುದು.

11. ಸಾಮಾನ್ಯವಾಗಿ ದಿನನಿತ್ಯದ ಊಟದ ಅಡಿಗೆಯಲ್ಲಿ ತರಕಾರಿಗಳನ್ನು ಅದರಲ್ಲೂ ಸೊಪ್ಪನ್ನು ಹೆಚ್ಚಾಗಿ ಬಳಸುವುದರಿಂದ ಜೀವ ಸತ್ವದ ಕೊರತೆ ದೂರ ಆಗುವುದು

12. ಸೌತೆಕಾಯಿ, ಮೂಲಂಗಿ, ಮೊದಲದ ತರಕಾರಿಗಳನ್ನು ಬೇಯಿಸದೆ ಹೆಚ್ಚಾಗಿ ತಿನ್ನುವುದರಿಂದ ಅವುಗಳಲ್ಲಿರುವ ಜೀವಸತ್ವ ಹಾಳಾಗುವುದಿಲ್ಲ ಬೇಯಿಸುವುದರಿಂದ ಜೀವಸತ್ವ ಕುಂಠಿತಗೊಳ್ಳುವುದು ಆದ್ದರಿಂದ ಹಲವು ತರಕಾರಿಗಳನ್ನು ತಿನ್ನುವುದರಿಂದ ಜೀವ ಸತ್ವಗಳನ್ನು ಜೀವಸತ್ವಗಳನ್ನು ನಮ್ಮ ಶರೀರ ಪೋಷಣೆಗೆ ಸುಲಭವಾಗಿ ಪಡೆಯಬಹುದು

13. ಸೂರ್ಯ ಎಳಬಿಸಿನಲ್ಲಿ ಕೆಲಕಾಲ ನಿಲ್ಲುವುದರಿಂದಲೂ ಜೀವಸತ್ವವನ್ನು ಪಡೆಯಬಹುದೆಂದು ಇತ್ತೀಚೆಗೆ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.