ಮನೆ ಜ್ಯೋತಿಷ್ಯ ವೀರ ಸಾಧನೆ ಮತ್ತು ಮಾಟ ಮಂತ್ರ ಕರ್ಮ

ವೀರ ಸಾಧನೆ ಮತ್ತು ಮಾಟ ಮಂತ್ರ ಕರ್ಮ

0

 ಮೂಲಾರ್ದ್ರಾಭರಣೀ ಪಿತ್ರ್ಯಮೃಗೇ ಸೌಮ್ಯೇಘಟೇ ತನೌ |

 ಸುಖೇ ಶುಕ್ರೇಷ್ಟಮೇ ಶುದ್ಧೇ ಸಿದ್ಧಿರ್ವಿರಾಭಿಚಾರಯೇ ||

Join Our Whatsapp Group

   ಮೂಲಾ, ಆರ್ದ್ಯ,ಭರಣಿ, ಮಾಘಾ,ಮೃಗಶಿರಾ,  ನಕ್ಷತ್ರಗಳಲ್ಲಿ ಕುಂಭ ಲಗ್ನ ಬುಧನೊಡನೆ ಯುದ್ಧವಾಗಿದ್ದರೆ ಚತುರ್ಥ ಭಾವದಲ್ಲಿ ಶುಕ್ರನಿದ್ದರೆ ಅಷ್ಟಮ ಭಾವ ಗ್ರಹಿಸಿತವಾಗಿದ್ದರೆ, ವೀರ ಕರ್ಮಸಾಧನೆ ಮತ್ತು ಮಾಟ ಮಂತ್ರ ಕರ್ಮ ಮಾರಣಾದಿ ಉಪಯೋಗ ಸಿದ್ಧಿವಾಗುತ್ತದೆ.

 ರೋಗ ಮುಕ್ತಸ್ಥಾನ :

 ವ್ಯಂತಾದಿತಿಧ್ರುವಮಘಾನಿಲಸಾರ್ಪದಿಷ್ಣ್ಯೇ

 ರಿಕ್ತೇ ತಥೌ ಚರತನೌ* ವಿಕವೀಂದುವಾರೇ |

 ಸ್ನಾನಂ ರುಜಾವಿರಹಿತಸ್ಯ ಜನಸ್ಯ ಶಸ್ತಂ |

 ಹೀನೇ ವಿಧೌ ಖಲಖಗೈರ್ಭವಕೇಂದ್ರಕೋಣೇ ||

 ರೇವತಿ, ಪುನರ್ವಸು, ಧ್ರುವಸಂಜ್ಞಕ  ಮತ್ತು ಮಘಾ ಸ್ವಾತಿ, ಆಶ್ಲೇಷಾ, ಇವುಗಳಿಂದ ಭಿನ್ನವಾದ ನಕ್ಷತ್ರಗಳಲ್ಲಿ, ರಿಕ್ತಾತಿಥಿಯಲ್ಲಿ ಚರಲಗ್ನದಲ್ಲಿ ಶುಕ್ರವಾರ,ಸೋಮವಾರವನ್ನು,ಹೊರತುಪಡಿಸಿ,ದುರ್ಬಲ  ಚಂದ್ರನಿದ್ದರೆ, ಪಾಪಗ್ರಹ, ಏಕಾದಶ, ಕೇಂದ್ರ ಮತ್ತು ತ್ರಿಕೋನದಲ್ಲಿದ್ದರೆ,ರೋಗದಿಂದ ಮುಕ್ತನಾದ ವ್ಯಕ್ತಿಯು ಸ್ಥಾನ ಮಾಡುವುದು ಶುಭವಾದುದು.