ಮನೆ ಪೌರಾಣಿಕ ಶ್ರೀಮನ್ನಾರಾಯಣನ ಸಾಕ್ಷಾತ್ಕಾರ

ಶ್ರೀಮನ್ನಾರಾಯಣನ ಸಾಕ್ಷಾತ್ಕಾರ

0

   ಈ ರೀತಿಯಾಗಿ ವಾಸದೇವನ ಕರುಣಾಪ್ರಸಾದದಿಂದ ಕಡಲಿನಿಂದ ಹೊರಬಂದ ಪ್ರಹಲಾದನ್ನು ಭಕ್ತಿ ಪೂರ್ವಾಕವಾಗಿ ಕಣ್ಣು ಮುಚ್ಚಿಕೊಂಡು ಆತ್ಮ ಸನ್ನಿಧಿಯಲ್ಲಿ ನೆಲೆಸಿದ ಶ್ರೀಹರಿಯನ್ನು ಧ್ಯಾನಿಸಿ,ಸಹಕಾರ ವಿಷ್ಣು ತೇಜವನ್ನು ಭಾವದಲ್ಲಿ ದರ್ಶನ ಮಾಡಿಕೊಂಡು ಮನಸಾರೆ ಸುತಿಸಿದ್ದನು. ಆಗ ಆತನ ಭಕ್ತಿ ಪರಿ  ಪಾಕಕ್ಕೆ ಮುಗ್ಧನಾಗಿ ಶತಕೋಟಿ ಸೂರ್ಯ ಪ್ರಭಾ ಸಮಾನ ನಯನಾಭಿರಾಮ  ತೇಜೋವಿ ಲಾಸನು ಪರಿಪೂರ್ಣ ಪಾಂಚಜನ್ಯನಾದ ರಾಮಾ ವಲ್ಲಭನ್ನು ಆದ ಶ್ರೀಮನ್ನಾರಾಯಣನು ಪ್ರಹ್ಲಾದನಿಗೆ  ಸಾಕ್ಷಾತ್ಕರಿಸಿದನು  ಕೋಟಿ ಮನ್ಮಥರ ಸೌಂದರ್ಯ ಸಮನಾದ ಪರಮಾನಂದ ಸ್ವರೂಪನು ಕಮಲದಂತಹ ಕಣ್ಣುಗಳನ್ನುಳ್ಳವನು ವೇದನಾದಗಳು ರವಳಿಸುವ ಚಿನ್ನದ ಗೆಜ್ಜೆಗಳು,ಜರಿ ಅಂಚ್ಚುಳ್ಳ ವಸ್ತ್ರಾಭರಣಗಳು,  ಕಟ್ಟಾಣಿ ಮುತ್ತುಗಳುಳ್ಳ ಕಠಾರಿಗಳನ್ನು ಕಟಿಯ ಮೇಲೆ ವಿಚಿತ್ರ ಭಂಗಿಯಲ್ಲಿ ಶೃಂಗಾರ ತರಂಗವಾಗಿರುವ ಅಭಯ ಮುದ್ರೆಗಳೊಂದಿಗೆ ಶೋಭಿಸುತ್ತಾ ಹೂ ಮಾಲೆ ಕೌಸ್ತುಭ ರತ್ನ ಹಾರ ಗಂಧ ಸುಗಂಧ ದೃವ್ಯಗಳ ಬಲಗಡೆಯ ಎದೆಯ ಮೇಲೆ ಮಚ್ಚೆ, ಭುಜ ಕೀರ್ತನೆಗಳು, ಬಾಹುಗಳು, ತಯಾತ್ತುಗಳು, ಮಕರ ಕುಂಡಲಗಳು ಮಣಿ ಕಿರೀಟ, ಮುತ್ತಿನನಾಮ ಸೊಂಟದ ಉಡುದಾರ,ಭುಜಂಗ ಭೂಷಣಗಳು, ಚಿನ್ನದ ಜನಿವಾರಗಳೊಂದಗೆ ಶೋಭಾಯಮೂನ  ಮೂರ್ತಿಯಾಗಿ ಶ್ರೀಹರಿಯ ಪ್ರಹ್ಲಾದನಿಗೆ ಸಾಕ್ಷಿತ್ಕರಿಸಿದನು.

Join Our Whatsapp Group

      ಆ ರೀತಿಯಾಗಿ ಪ್ರತ್ಯಕ್ಷನಾದ ದೈವವನ್ನು ಕಣ್ಣಾರೆ ಕಂಡು ಪ್ರಹಲಾದನ್ನು ಆನಂದ ಬಾಷ್ಟಗಳನ್ನು ಸುರಿಸಿ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸಿದನು. ಶ್ರೀಹರಿಯು ಪ್ರಹ್ಲಾದನನ್ನು ಹತ್ತಿರಕ್ಕೆ ತೆಗೆದುಕೊಂಡು ಲಾಲನೆ ಮಾಡಿ,ಆತನ ಕೆನ್ನೆಯನ್ನು ಸವರುತ್ತಾ ಪ್ರೀತಿಯಿಂದ ಹೀಗೆಂದನು “ಪ್ರಹ್ಲಾದಾ ! ನೀನು ನಿನ್ನ ತಂದೆ ಕಲ್ಪಿಸಿದ ಮಹಾಆಪತ್ತುಗಳಿಗೆ ಸ್ಪಂದಿಸಿದೇ ಹೆದರದೇ ಭಕ್ತಿ ಶಿಖರವನ್ನು ಅಧಿರೊಹಿಸಿದೆ.ಎಷ್ಟೇ ಕಷ್ಟಗಳು ಬಂದರೂ ನನ್ನನ್ನೇ ನಂಬಿಕೊಂಡು ಅಪೂರ್ವಾದ ನಿನ್ನ ಪುಣ್ಯ ಸಂಪತ್ತಿನಿಂದ ನನಗೆ ಪ್ರೀತಿಯನ್ನು ಉಂಟುಮಾಡಿದೆ. ವಯಸ್ಸಿನಲ್ಲಿ ಕಿರಿಯನಾದರೂ ನೀನು ತೋರಿಸಿದ ಅಚಂಚಲ ಭಕ್ತಿ ವಿಶ್ವಾಸವನ್ನು ಕಂಡು ನಾನು ಮುಗ್ಧನಾದೆನು ನೀನು ಅಪಿಷ್ಟ ವರವನ್ನು ಬೇಡಿಕೋ. ಪ್ರಾರ್ಥಿಸುತ್ತೇನೆ “ಎಂದುನು ದೇವದೇವನು ಹೇಳಿದ ಮಾತುಗಳನ್ನು ಕೇಳಿದ ಪ್ರಹ್ಲಾದನು “ಪ್ರಭೂ! ಹುಟ್ಟಿದಾಗಿನಿಂದ ಇಲ್ಲಿಯವರೆಗೂ ನಿನ್ನ ದರ್ಶನಕ್ಕಾಗಿ ಪರಿತಪಿಸಿದ ನನಗೆ ನಿನ್ನ ದರ್ಶನದ  ಭಾಗ್ಯವನ್ನು ಪ್ರಾರ್ಥಿಸಿದೆ. ಅದಕ್ಕಿಂತಲೂ  ನನಗೆ ಇಷ್ಟವಾದ ವರವು ಮತ್ತೊಂದಿಲ್ಲ ಮುಂದಿನ ಕಾಲದಲ್ಲಿ ನಾನು ಯಾವ ಯಾವ ಜನ್ಮಗಳಲ್ಲಿ ಜನಿಸುತ್ತೇನೋ ಆಗಿನ ಕಾಲಗತಿಗಳು ಹೇಗಿರುತ್ತವೆಯೋ ಗೊತ್ತಿಲ್ಲ. ಸ್ವಾಮಿ ! ಮುಂದಿನ ಜನ್ಮಗಳೆಲ್ಲವೂ ನನಗೆ ನಿನ್ನ ಮೇಲೆ ನಿಶ್ಚಲವಾದ ಭಕ್ತಿ ಭಾವನೆಯನ್ನು ನಿನ್ನ ಪಾದ ಪದ್ಮಗಳನ್ನು ಸೇವಿಸುವ ಮಹಾ ಮಹಾವಕಾಶವನ್ನು ಅನುಗ್ರಹಿಸು” ಎಂದು ಪ್ರಾರ್ಥಿಸಿದನು. 

     ಪ್ರಹ್ಲಾದನ್ನು ಬಯಕೆಗೆ ಪರಿತೃಷ್ಠನಾಗಿ ಶ್ರೀ ಹರಿಯು “ಮಗೂ ! ನೀನು ಸಾಮಾನ್ಯನಲ್ಲ.ನನ್ನೊಂದಿಗೆ ಸಸ್ವರೂಪ ಅನುಸಂದಾನವನ್ನು ಮಾಡಿಕೊಂಡ ಮಹಾಭಕ್ತನು. ಪಾಪನಿಲಯವಾದ ರಾಕ್ಷಸ ವಂಶದಲ್ಲಿ ಹುಟ್ಟಿಯೂ ಸಹ ವೈಷ್ಣವೋತ್ತಮವಾಗಿ ಪ್ರಕಾಶಿಸಿದ ನಿನ್ನ ಪುಣ್ಯ ಕಥೆಯು ಮುಮುಕ್ಷುಕರಿಗೆ ಮಾರ್ಗದರ್ಶನವಾಗಿ ನಿಲ್ಲುವುದು. ನಿನ್ನ ಜನ್ಮ ದೋಷಗಳೆಲ್ಲವೂ ಪರಿ ಭುಕ್ತಗಳಾಗಿವೆ.ನಿನಗೆ ಮೋಕ್ಷವೇ ಹೊರೆತು ಪುನರ್ಶನ್ಮವಿಲ್ಲ. ಆದ್ದರಿಂದ ನಿನ್ನ ಅಭೀಷ್ಟ ವರವನ್ನು ಕೇಳು” ಎಂದು ದಯಾಸಾಗರ ಕರುಣಾ ಮೂರ್ತಿಯಾದ ಶ್ರೀಹರಿಯು ಕೇಳಿದನು.

      ಆಗ ಪ್ರಹ್ಲಾದನು ಶ್ರೀಹರಿಯ ಪ್ರತಿಭಾವನೆಗೆ ಸಂತೋಷಿಸಿ, “ದೇವಾ! ನನ್ನ ತಂದೆಯ ಜನ್ಮ ದೋಷದಿಂದ ಸಂಪ್ರಾಪ್ತಿಸಿದ ದುರ್ಮತಿಯಿಂದ ನಿನ್ನೊಂದಿಗೆ ವೈರವನ್ನು ಏರ್ಪಡಿಸಿಕೊಂಡು ಅನೇಕ ಪಾಪ ಕೃತ್ಯಗಳನ್ನು ಮಾಡಿದ್ದಾನೆ. ಲೋಕಗಳಿಗೂ ಸಹ ಆತನ ಪಾಪಕರ್ಮಗಳಿಂದ ತೊಂದರೆಯುಂಟಾಗಿದೆ. ಹಿಮಾಲಯ ಶಿಖರಗಳಲ್ಲಿ ಜನನಿ ಧರೆಗಿಳಿದ ಸ್ವಚ್ಛ ಶೀತ ಚಂಚಲ ಪ್ರವಾಹವು,ಚಂಡಾಲ ಕುಲದಲ್ಲಿ ಜನಿಸಿದ ಭಾಗ್ಯ  ಹೀನನ ಮನೆಯ ಮುಂದೆ ಹರಿಯುವ ಮಳೆಯ ನೀರಿನ ಕೊಳಚೆ ಕಾಲುವೆಯು ಪರಮ ಪವಿತ್ರವಾದ ಭಗೀರಥೀ ಪ್ರವಾಹದಲ್ಲಿ ಪ್ರವೇಶಿಸಿ ಪುಣ್ಯ ಜಲವಾಗುವಂತೆ ನಿನ್ನ ಸನ್ನಿಧಾನದಲ್ಲಿ ಆತ್ಮ ಜ್ಞಾನಿಗೂ ಪಾಪಾತ್ಮ ನಿಗೂ ಸಹ ಮೋಕ್ಷವು ಲಭಿಸುತ್ತದೆ.ಭಕ್ತರಕ್ಷಣ ಪಾರಾಯಣನಾದ ನಿನಗೆ ಆತನ ಮನಸ್ಸುನ್ನು ಬದಲಾಯಿಸಿ.  ಮೋಕ್ಷ ಪಾದವನ್ನು ತಪ್ಪದೇ ಪ್ರಾರ್ಥಿಸುತ್ತೇನೆಂದು ಮಾತು ಕೊಟ್ಟನು ಮತ್ತೆ ಮಹಾವಿಷ್ಣು ನಿನ್ನು ನಿನ್ನ ತಂದೆಗಾಗಿ ವರವನ್ನು ಬೇಡಿದೆ. ನಿನಗೋಸ್ಕರ ಏನಾದರೂ ವರವನ್ನು ಬೇಡಿಕೋ” ಎಂದು ಆದೇಶಿಸಿದನು. ಅದಕ್ಕೆ ಪ್ರಹ್ಲಾದನು “ನನಗೆ ನಿನ್ನ ಮೇಲೆ ಭಕ್ತಿ ಸಂಪತ್ತನ್ನು ಹೊರತುಪಡಿಸಿ  ಅನ್ನ ಭೋಗಭಾಗ್ಯಗಳು ಬೇಕಾಗಿಲ್ಲ ಧರ್ಮಾರ್ಥ, ಕಾಮ, ಮೋಕ್ಷಗಳನ್ನು ಕೊಡುವ ಸರ್ವ-ಕರ್ಮಗಳಲ್ಲಿಯೂ, ಸರ್ವ ಕಾಲಗಳಲ್ಲಿಯೂ ನಿನ್ನ ಮೇಲಿನ ಭಕ್ತಿಯನ್ನು ಅನುಗ್ರಹಿಸು” ಎಂದನು ಆಗ ಶ್ರೀ ಮಹಾವಿಷ್ಣು ಪ್ರಹ್ಲಾದನಿಗೆ ಕೈವಲ್ಯ ಪಾಥವನ್ನು ಅನುಗ್ರಹಿಸಿ ಇಷ್ಟ ಭೋಗಗಳನ್ನು ಪರಿಪೂರ್ಣ ವನ್ನಾಗಿಸಿ ಅಂತ ರ್ಧಾನನಾದನು. ನಂತರ ಪ್ರಹ್ಲಾದನು ಮನೆಗೆ ವಾಪಸ್ಸು ಹೋಗಿ ತಂದೆಗೆ ನಮಸ್ಕರಿಸಿ ನಿಂತನು.ಆಗ ಹಿರಣ್ಯಕಶ್ಯಪನು ಸತ್ತ್ದೋದಯವನ್ನು

 ಹೊಂದಿ ಪ್ರೋತ್ಸಾಹದಿಂದ ಅಪ್ಪಿಕೊಂಡನು. “ಮಗೂ! ನನ್ನಿಂದ ನೀನು ಅನೇಕ ಕಷ್ಟಗಳು ಅನುಭವಿಸಿದೆ ಶ್ರೀ ಪತಿಯ ಮಹಿಮೆಯನ್ನು ಗುರುತಿಸಲಾರದ ಅಜ್ಞಾನಿಯಾಗಿ ನಿನ್ನನ್ನು ಚಿತ್ರ ಹಿಂಸೆಗೊಳಿಮಪಡಿಸಿದೆ. ಶ್ರೀಹರಿಯ ದಯೆಯಿಂದ ನೀನು ಅವುಗಳನ್ನು ಲಕ್ಷಿಸದೇ ಗೆಲುವನ್ನು ಸಾಧಿಸಿದೆ.ನನಗದೇ ಮಹಾಭಾಗ್ಯ ಎಂದು ಸಂತೋಷಪಟ್ಟನು. ಹಿರಣ್ಯಕಶ್ಯಪನು ಈ ರೀತಿಯಾಗಿ ಅನೇಕ ಸಾವಿರ ವರ್ಷಗಳು ರಾಜ್ಯಾಡಳಿತವನ್ನು ನಡೆಸಿ ಜನ ಮನ್ನಣೆಯನ್ನು ಗಳಿಸಿದನು. ಮುನಿಗಳ ಶಾಪವಿರುವ  ತನಗೆ ಈ ಜನ್ಮದಲ್ಲಿ ವಿಷ್ಣು ಸಾಯುಜ್ಯವನ್ನು ಸಂಪ್ರಾಪ್ತಿಸುವ ಭಾಗ್ಯವಿಲ್ಲವೆಂದು,ಅದರಿಂದ ತನಗೆ ಜನ್ಮಾವಸಾನವು ಲಭಿಸಿದರೆ ಚೆನ್ನಾಗಿರುತ್ತದೆಂದು ಭಾವಿಸಿ ಕಾದು ನೋಡಿದನು. ಕೊನೆಗೆ ಮರಣವನ್ನು ಆಕಾಂಕ್ಷಿಸಿ ತನ್ನ ಸತ್ತ್ವ ಗುಣವನ್ನು ಅಡಗಿಸಿಕೊಂಡು. ರಾಜೋಗುಣವನ್ನು ಉದ್ಗೇಕಿಸುವಂತೆ ಮಾಡಿ ಶ್ರೀಹರಿಯೊಂದಿಗೆ ಮತ್ತೆ ಕಲಹವನ್ನು ಬೆಳೆಸಿಕೊಂಡನು. ಕೊನೆಗೆ ಹಿರಣ್ಣಕಶ್ಯಪನ ಸಂಭಾಮಂಟಪದಿಂದ ಶ್ರೀ ಮಹಾ ವಿಷ್ಣು ಮಹಾನ್ ದಿವ್ಯ ತೇಜದೊಂದಿಗೆ ಉಗ್ರನರಸಿಂಹನಾಗಿ ಅವತರಿಸಿದನು. ಸಚರಾಚರ ಭೂತ ಜಾತಿಗೂ ಭಯವನ್ನುಂಟು ಮಾಡುವ ಭಯಂಕರಾ ಕೃತಿಯೊಂದಿಗೆ  ಹಿರಣ್ಯಕಶ್ಮಪನಿಗೆ ಸಾಕ್ಷಾತ್ಕರಿಸಿ  ಅವನನ್ನು ಸಂಹರಿಸಿ ಮೋಕ್ಷ ಪದವನ್ನು ಅನುಗ್ರಹಿಸಿದನು. ದಾನವ ಸಾಮ್ರಾಜ್ಯಕ್ಕೆ ಪ್ರಹ್ಲಾದನು ಮಹಾರಾಜನನ್ನಾಗಿಸಿ ಅಪಾರ ಶಕ್ತಿ ಸಂಪತ್ತುಗಳನ್ನು ಪ್ರಸಾದಿಸಿ ಕರ್ಮ ಶೇಷವು ಹರಿದ ನಂತರ ಮೋಕ್ಷವನ್ನು ಅನುಗ್ರಹಿಸಿದನು. ಭಗವ್ಭ ಕ್ತಿ ಪಾರಾಯಣನಾದ ಪ್ರಹ್ಲಾದನು  ದೈತ್ಯ ಲೋಕವನ್ನು ಧರ್ಮ ಮಾರ್ಗದಡೆಗೆ ನಡೆಸಿದನು.ಸರ್ವರೂ ಅನುಮೋದಿಸುವ ರೀತಿಯಲ್ಲಿ ರಾಜ್ಯವನ್ನು ಪರಿಪಾಲಿಸಿ ಪ್ರಪಂಚದಲ್ಲಿ ವೈಷ್ಣವ ಭಕ್ತಿಯನ್ನು ಶಾಶ್ವತಗೊಳಿಸಿದನು.ಭಾಗವತಾಗ್ರೇಸರನಾದ ಪ್ರಹ್ಲಾದನ ದಿವ್ಯ ಚರಿತ್ರೆಯು ಭಕ್ತಿ ಮುಕ್ತಿದಾಯಕವಾದುದು. ಈ ಭವ್ಯ ಕಥೆಯನ್ನು ಅಷ್ಟೇಮೀ, ದ್ವಾದಶೀ, ಅಮಾವಾಸ್ಯೆಯ,ಹುಣ್ಣಿಮೆಯ,ದಿನಗಳಲ್ಲಿ ಭಕ್ತಿ ನೈವೇದ್ಯ ಪೂರ್ವಕವಾಗಿ ಪಠಿಸಿದ ಪುಣ್ಯಾತ್ಮರಿಗೆ ಅಬೀಷ್ಟ ಸಿದ್ದಿಗಳುಂಟಾಗುತ್ತವೆ. ಭೂದಾನ,ಗೋದಾನ,ಮಾಡಿದ  ಮಹಾಫಲಗಳು ಲಭಿಸುತ್ತದೆ ಎಂದು ಪ್ರಹ್ಲಾದ ಚರಿತ್ರೆಯನ್ನು ಮೈತ್ರಿಯರಿಗೆ ವಿವರವಾಗಿ ಉಪದೇಶಿಸಿದ ಪರಾಶರರು ಮತ್ತೆ ಈ ರೀತಿ ವಿವರಿಸಿದನು. ಕಾಲಕ್ರಮೇಣ ಪ್ರಹ್ಲಾದನಿಗೆ ವಿರೋಚನ, ಆಯುಷ್ಮಂತ, ಶಿಬಿ, ಭಾಷ್ಕಲರೆಂಬ ನಾಲ್ವರು ಪುತ್ರರು ಜನಿಸಿದರು.ಅವರಲ್ಲಿನ ವಿರೋಚನ ಮಹಾರಾಜನಿಗೆ ಬರ್ಲಿ ಹುಟ್ಟಿದನು .