ಮನೆ ಜ್ಯೋತಿಷ್ಯ ಶಿಲ್ಪ ಶಿಕ್ಷಣ

ಶಿಲ್ಪ ಶಿಕ್ಷಣ

0

 ಮೃದುಧ್ರುವಕ್ಷಿಪ್ರಚರೇ ಜ್ಞೇ ಗುರೌ ವಾ ಖಲಗ್ನಗ್ನೇ|

 ವಿಧೌ ಜ್ಞಜೀವವರ್ಗಸ್ಥೇ ಶಿಲ್ಪವಿದ್ಯಾ ಪ್ರಶಸ್ಯತೇ||

Join Our Whatsapp Group

 ಮೃದುಸಂಜ್ಞಕ, ಧ್ರುವಸಂಜ್ಞಕ, ಕ್ಷಿಪ್ರಸಂಜ್ಞಕ ನಕ್ಷತ್ರಗಳಲ್ಲಿ, ಬುಧ ಮತ್ತು ಗುರು ಲಗ್ನ ಅಥವಾ ದಶಮಿ ಭಾವದಲ್ಲಿದ್ದರೆ,ಬುಧ ಮತ್ತು ಗುರುವಿನ ಷಡ್ ವರ್ಗದಲ್ಲಿ ಚಂದ್ರನಿದ್ದರೆ ಶಿಲ್ಪ ಚಿತ್ರಕಲೆ ಸೇರಿದಂತೆ ಅನ್ಯ ಕಲಾವಿದ್ಯೆಗಳುವನ್ನು  ಕಲಿಯುವುದು ಶುಭವಾದುದು.

 ಸ್ನೇಹ ಅಥವಾ ಮಿತ್ರತ್ವ :

 ಸುರೇಜ್ಯಮಿತ್ರಭಾಗೇೖಶು ಚಾಷ್ಟಮ್ಯಾ ತೆತಿಲೇ ಹರೌ |

 ಶುಕ್ರದೃಷ್ಟೇ ತನೌ ಸೌಮ್ಯವಾರೇ ಸಂಧಾನಮಿಷ್ಯ ತೇ ||

 ಪುಷ್ಯ,ಅನುರಾಧಾ,ಪೂರ್ವ ಪಾಲ್ಗುಣಿ ನಕ್ಷತ್ರಗಳಲ್ಲಿ ಅಷ್ಟಮಿ, ದ್ವಾದಶಿ ತೈತಿಲ ಕರಣದಲ್ಲಿ, ಶುಕ್ರನು ಲಗ್ನವನ್ನು ದೃಷ್ಟಿಸುತ್ತಿದ್ದರೆ ಮತ್ತು ಬುಧವಾರವಿದ್ದರೆ, ಸ್ನೇಹ ಅಥವಾ ಮಿತ್ರತ್ವ ಮಾಡುವುದು ಒಪ್ಪಂದ ಶುಭವಾದುದು.

 ಸತ್ಯಾಸತ್ಯದ ಪರೀಕ್ಷೆ :

 ತ್ಯಕ್ತ್ವಾಷ್ಟಭೂತಶನಿವಿಷ್ಟಿಕುಜೌನ್ ಜನುರ್ಭ

 ಮಾಸೌ ಮೃತೌ ರವಿವಿಧೂ ಅಪಿ ಭಾನಿ ನಾಡ್ಯ್ಃ |

 ದ್ವ್ಯಂಗೇ ಚರೇ ತನುಲವೇ ಶಶಿಜೀವತಾರಾ

 ಶಧದ್ಧೌಕರಾದಿತಿಹರಿಂದ್ರಕಪೇ ಪರೀಕ್ಷಾ ||

     ಅಷ್ಟಮಿ ಮತ್ತು ಚತುರ್ದಶಿ ತಿಥಿ,ಶನಿ ಮತ್ತು ಮಂಗಳವಾರ,ಭಾದ್ರ, ಜನ್ಮ ನಕ್ಷತ್ರ, ಜನ್ಮಮಾಸ,ಸ್ವಯಂ ಜನ್ಮ ರಾಶಿಯಿಂದ ಅಷ್ಟಮ ಸೂರ್ಯ ಮತ್ತು ಚಂದ್ರ ನಾಡಿಯ ನಕ್ಷತ್ರ 1,10,11, 16, 25, 18, 23,— ಇವುಗಳನ್ನು ಹೊರತುಪಡಿಸಿ ದ್ವಿಸ್ವಭಾವ ಲಗ್ನ, ಚರ ಲಗ್ನ ಮತ್ತು ಇವುಗಳ ನಾವಂಶದಲ್ಲೇ, ಚಂದ್ರ,ಗುರು, ಮತ್ತು ತಾರ ಶುದ್ಧವಾಗಿದ್ದರೆ ಹಾಗೂ ಹಸ್ತ ಪುನರ್ವಸು , ಶ್ರಾವಣ ,ಜೇಷ್ಠಾ ಶತಭಿಷಾ ಈ ನಕ್ಷತ್ರಗಳಲ್ಲಿ ಸತ್ಯ ಅಸತ್ಯದ ಪರೀಕ್ಷೆ ಮಾಡುವುದು ಶುಭವಾದುದು.