ಮನೆ ಜ್ಯೋತಿಷ್ಯ ರವಿಯ ಸಂಕ್ರಾಂತಿಯಿಂದ ತೇಜಿ ಮಂದಿ ನಿರ್ಣಯಿಸುವುದು

ರವಿಯ ಸಂಕ್ರಾಂತಿಯಿಂದ ತೇಜಿ ಮಂದಿ ನಿರ್ಣಯಿಸುವುದು

0

     ರವಿಯ ಸಂಕ್ರಾಂತಿಯೆಂದರೆ ಒಂದು ವರ್ಷಕ್ಕೆ 12 ಸಂಕ್ರಾಂತಿಗಳು, 12 ಸಂಕ್ರಾಂತಿಗಳು ಕೂಡಿದರೆ ಒಂದು ವರ್ಷವಾಗುತ್ತದೆ.ಒಂದು ವರ್ಷಕ್ಕೆ 12 ಮಾಸಗಳು. ಸಂಕ್ರಾಂತಿ ಎಂದರೆ ರವಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಾಂತಿ ಎಂದು ಹೆಸರು ಎಪ್ರಿಲ್ 13ಕ್ಕೆ ಮೇಷ ರಾಶಿಗೆ ರವಿಯು ಯಾವಾಗಲೂ ಪ್ರವೇಶಿಸುವನು. ಇದಕ್ಕೆ ಮೇಘ ಸಂಕ್ರಮಣ ಮೇಷಮಾಸವೆಂದೂ ಹೆಸರು. ಇದರಂತೆ ಮೇ 14ಕ್ಕೆ ವೃಷಭ ರಾಶಿ, ಜೂನ್ 15ಕ್ಕೆ ಮಿಥುನರಾಶಿ ಜುಲೈ 16 ಕ್ಕೆ ಕರ್ಕ ರಾಶಿ ಆಗಸ್ಟ್ 16ಕ್ಕೆ ಸಿಂಹ ರಾಶಿ, ಸೆಪ್ಟೆಂಬರ್ 16ಕ್ಕೆ ತುಲಾ ರಾಶಿ, ಅಕ್ಟೋಬರ್ 17ಕ್ಕೆ ತುಲಾ ರಾಶಿ, ನವೆಂಬರ್ 16ಕ್ಕೆ ವೃಶ್ಚಿಕ ರಾಶಿ ಡಿಸೆಂಬರ್ 15ಕ್ಕೆ ಧನು ರಾಶಿ, ಡಿಸೆಂಬರ 15ಕ್ಕೆ ಧನುಸ್ಸು ರಾಶಿ, ಜನವರಿ 14 ಕ್ಕೆ ಮಕರ ರಾಶಿ ಫೆಬ್ರವರಿ 12ಕ್ಕೆ ಕುಂಭ ರಾಶಿ, ಮಾರ್ಚ್ 14 ಕ್ಕೆ ಮೀನರಾಶಿ, ಪುನಃ ಏಪ್ರಿಲ್ 13ಕ್ಕೆ ಮೇಷರಾಶಿಗೆ ರವಿಯು ಪ್ರವೇಶ ಮಾಡುತ್ತಾನೆ. ಈ ರೀತಿಯ ರಾಶಿ ಪ್ರವೇಶಗಳಿಗೆ ಸಂಕ್ರಮಣವೆಂದೂ ಸಂಕ್ರಾಂತಿ ಎಂದು ಹೆಸರು. ಇದನ್ನು ವ್ಯವಸ್ಥಾಪಕರು ಚೆನ್ನಾಗಿ ತಿಳಿದುಕೊಂಡಿರಬೇಕು. ಇದು ಮುಖ್ಯ.

Join Our Whatsapp Group

 ಪಂಚಾಂಗದಲ್ಲಿ ಸಂಕ್ರಾಂತಿಗಳು ಪ್ರಾರಂಭವಾಗುವ ನಕ್ಷಾತ್ರಾದೀ  ಪ್ರವೇಶವನ್ನು ತಿಳಿದುಕೊಳ್ಳುವುದು :

      ಅಶ್ವಿನಿ 1 ಮೇಷೇ ರವಿ,ಕೃತಿಕಾ  2 ವೃಷಭೇ, ರವಿ, ಮೃಗಶಿರ 3 ಮಿಥುನೇ ರವಿ,ಪುನರ್ವಸು 4 ಕರ್ಕೇ ರವಿ,ಮೂಲ 1 ಸಿಂಹೇ ರವಿ, ಉತ್ತ 2 ಕನ್ನೇ ರವಿ, ಚಿತ್ರ 3 ತಲೇ ರವಿ, ವಿಶಾಖಾ 4 ವೃಶ್ಚಿಕೇ ರವಿ ಮೂಲಾ 1 ಧನುಷೇ ರವಿ, ಉತ್ತರಾಷಾಡ 2 ಮಕರೇ ರವಿ, ಧನಿಷ್ಠ 3  ಕುಂಭೇ ರವಿ, ಪೂರ್ವ ಭಾದ್ರ 4 ಮೀನೇರವಿ. ಈ ರೀತಿಯ ರವಿಯ ಸಂಕ್ರಾಂತಿ ಪ್ರವೇಶವನ್ನು ಪ್ರತಿಯೊಂದು ಪಂಚಾಂಗಗಳಲ್ಲಿ ತಿಥಿವಾರಧಿ ಸಾಲುಗಳಲ್ಲಿ ಬರೆದಿರುತ್ತದೆ.ಯಾವ ದಿವಸ ರವಿ ಸಂಕ್ರಾಂತಿ ಇರುತ್ತದೋ  ಆ ದಿವಸಕ್ಕೆ 30 ದಿನಗಳಲ್ಲಿ ಮತ್ತೊಂದು ಸಂಕ್ರಾಂತಿಯುಂಟಾಗುತ್ತದೆ. ಒಂದೊಂದು ದಿನ ಹಿಂದೆ ಮುಂದೆ ಆಗಬಹುದು. ಇದನ್ನು ಪ್ರತಿಯೊಬ್ಬರೂ ಮುಖ್ಯವಾಗಿ ಗಮನದಲ್ಲಿಟ್ಟಿರಬೇಕು.