ಮನೆ ಆರೋಗ್ಯ ಜ್ಞಾಪಕ ಶಕ್ತಿ ಹೆಚ್ಚಲು

ಜ್ಞಾಪಕ ಶಕ್ತಿ ಹೆಚ್ಚಲು

0

1. ಒಂದು ಬಟ್ಟಲು ಮಾವಿನ ಹಣ್ಣಿನ ರಸಕ್ಕೆ ಅಷ್ಟೇ ಪ್ರಮಾಣದ ಹಾಲು ಬೆರೆಸಿ ಜೇನುತುಪ್ಪದೊಂದಿಗೆ ದಿನವೂ ಒಂದು ಊಟದ ಸ್ಪೂನಿನಷ್ಟು ಸೇವಿಸುತ್ತಿದ್ದರೆ ಜ್ಞಾಪಕ ಶಕ್ತಿ ಹೆಚ್ಚುವುದು.

Join Our Whatsapp Group

2. ಮೆಂತ್ಯದ ಸೊಪ್ಪು ಮೂಲಂಗಿಯನ್ನು ಸಣ್ಣಗೆ ಹಚ್ಚಿ,ಮಿಶ್ರಮಾಡಿ ಸಾಕಷ್ಟು ಉಪ್ಪು ಬೆರೆಸಿ ಮೆಣಸು, ಜೀರಿಗೆಯ ಒಗ್ಗರಣೆ ಹಾಕಿ ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುವುದು.

3. ಒಂದು ಟೀ ಚೀಮ್ ಚಮಚದಷ್ಟು ಕೊತ್ತಂಬರಿ ಸೊಪ್ಪಿನ ರಸಕ್ಕೆ ಇನ್ನೊಂದು ಚಮಚ ಜೇನುತುಪ್ಪವನ್ನು ಬೆರೆಸಿಕೊಂಡು ಪ್ರತಿ ರಾತ್ರಿ ಊಟವಾದ ನಂತರ ಸೇವಿಸುತ್ತಿದ್ದರೆ ಜ್ಞಾಪಕ ಶಕ್ತಿ ಹೆಚ್ಚಿಸುವುದು.

4. ಒಂದು ಚೂರು ಹಸಿ ಶುಂಠಿ ಹಾಗೂ ಸ್ವಲ್ಪ ಜೀರಿಗೆ ಮತ್ತು ಕಲ್ಲು ಸಕ್ಕರೆಯನ್ನು ಚೆನ್ನಾಗಿ ಅಗಿದು ತಿನ್ನುತ್ತಿದ್ದರೆ ನಾಲಿಗೆಯ ರುಚಿ ಹೆಚ್ಚುವುದರ ಜೊತೆಗೆ ಜ್ಞಾಪಕ ಶಕ್ತಿ ಹೆಚ್ಚುವುದು.

5. ಸೇಬುಹಣ್ಣನ್ನು ಊಟ ಆದನಂತರ ಸೇವಿಸುವುದರಿಂದಲೂ ಜ್ಞಾಪಕಶಕ್ತಿ ಹೆಚ್ಚುವುದು.

6. ಮೂರು ಚಮಚ ನೆಲ್ಲಿಕಾಯಿ ರಸದೊಂದಿಗೆ ಜೇನುತುಪ್ಪ ಬೆರೆಸಿ ದಿನವೂ ಸೇವಿಸುತ್ತಿದ್ದರೆ ಮೆದುಳಿನ ಕಾಯಿಲೆ ದೂರ ಆಗಿ ಜ್ಞಾಪಕ ಶಕ್ತಿ ಹೆಚ್ಚುವುದು.

7. ನೆಲ್ಲಿಕಾಯಿ ಮೊರಬ್ಬ ಸೇವಿಸುವುದರಿಂದ ದಿನವೂ ಒಂದೊಂದು ಟೀ ಸ್ಪೂನಿನಷ್ಟು ಜ್ಞಾಪಕಶಕ್ತಿ ಹೆಚ್ಚುವುದಲ್ಲದೆ ಶರೀರದಲ್ಲಿ ಶಕ್ತಿ ಬರುವುದು.

8. ನೆನೆಸಿದ ಉದ್ದಿನಬೇಳೆಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಂಡು, ಅದನ್ನು ರಾಗಿ ರೊಟ್ಟಿ ಚಪಾತಿಯೊಂದಿಗೆ ಸೇವಿಸುತ್ತಿದ್ದರೆ ಆರೋಗ್ಯ ಸುಧಾರಿಸುವುದು ಜೊತೆಗೆ ಜ್ಞಾಪಕ ಶಕ್ತಿಯೂ ಹೆಚ್ಚಿಸುವುದು.

9. ಹಾಲಿಗೆ ಯಾಲಕ್ಕಿ ಪುಡಿ ಸೇರಿಸಿ, ಕುದಿಸಿ,ಅದಕ್ಕೆ ಎರಡು ಮೂರು ಸ್ಪೂನಿನಷ್ಟು ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತಿರುತ್ತದೆ.

10. ದಾಲ್ಮಿನಿ ಪುಡಿಯನ್ನು ಜೇನುತುಪ್ಪದಲ್ಲಿ ಮಿಶ್ರ ಮಾಡಿ, ಸೇವಿಸುತ್ತಿದ್ದರೆ ಆರೋಗ್ಯವೂ ವೃದ್ಧಿಸುವುದು. ಜ್ಞಾಪಕ ಶಕ್ತಿಯೂ ಹೆಚ್ಚುವುದು.