ಮನೆ ಜ್ಯೋತಿಷ್ಯ ಜೀವಕೋಶ ರಚನೆ

ಜೀವಕೋಶ ರಚನೆ

0

 ಈ ಜೀವಕೋಶದ ಒಳ ರಚನೆಯಲ್ಲಿ ಬಹಳ ಅವಶ್ಯಕವಾದ ಮೂರು ವಿಧದ ಬಗೆಗಳಿವೆ.

Join Our Whatsapp Group

1. ಜೀವಕೋಶದ ಹೊರ ಕವಚ :

       ಇದು ವೃತ್ತಾಕಾರವಾಗಿ ಜೀವಕೋಶವನ್ನು ಸುತ್ತುವರೆದಿರುತ್ತದೆ.ಇದು ಅನೇಕ ಸಣ್ಣ ರಂಧ್ರಗಳಿಂದ ಕೂಡಿದೆ. ಇದರಲ್ಲಿ ವಿಭಿನ್ನವಾದ ಒಳ ಹೋಗುವ ಮಾರ್ಗಗಳಿರುತ್ತವೆ. ಅಂದರೆ ಕೆಲವು ಪದಾರ್ಥಗಳನ್ನು ಮಾತ್ರ ಒಳಗೆ ಹಾದು ಹೋಗುವಂತೆ ಮತ್ತೆ ಇತರ ಪದಾರ್ಥಗಳನ್ನು ಒಳಹೋಗದಂತೆ ತಡೆಯುವ ಗುಣ ಹೊಂದಿರುತ್ತದೆ. ಇದರ ಗೋಡೆಯು ಚೆನ್ನಾಗಿ ಕೋಶಗಳಿಂದ ರಚಿಸಲ್ಪಟ್ಟಿದೆ. ಇದು ಈ ಜೀವಕೋಶಕ್ಕೆ ಒಂದು ಆಕಾರವನ್ನು ನೀಡುತ್ತದೆ. ಇದು ಕೆಲವು ದ್ರಾವಣಗಳನ್ನು ತಡೆಯಿಲ್ಲದೆ ಸುಲಭವಾಗಿ ಜೀವಕೋಶದೊಳಗೆ ಹೋಗುವಂತೆ ಮತ್ತು ಹೊರಗೆ ಬರುವಂತೆ ಮಾಡುತ್ತದೆ.

      ಅಂದರೆ ರಕ್ತದಲ್ಲಿರುವ ಆಹಾರ ಗ್ಲೂಕೋಸ್ ಪೋಷಕಾಂಶವಲ್ಲದೆ ಆಮ್ಲಜನಕವನ್ನು ಸುಲಭವಾಗಿ ಒಳಹೋಗುವಂತೆ ಅದೇ ರೀತಿ ಈ ಜೀವಕೋಶ ಇದನ್ನು ಉಪಯೋಗಿಸಿಕೊಂಡು ಅದು ಹೊರಸೂಸುವ ತ್ಯಾಜ್ಯ ಮಲವನ್ನು ಮತ್ತು ಇಂಗಾಲ ಡೈಆಕ್ಸೈಡ್  ಹೊರ ಹೋಗುವಂತೆ ಮಾಡುತ್ತದೆ.

2. ಕೋಶದ್ರವ್ಯ/ ಕೋಶರಸ :-

      ಇದು ಜೀವಕೋಶದ ಒಳಗೆ ಮತ್ತು ಜೀವಕೋಶದ ಹೊರಗೆ ಅಡಕವಾಗಿರುತ್ತದೆ.ಇದು ಅರ್ಥ ದ್ರವ್ಯರೂಪದಲ್ಲಿರುತ್ತದೆ ಇದರಲ್ಲಿರುವ ಕಿಣ್ವಗಳಿಂದ ಅನೇಕ ರಾಸಾಯನಿಕ ಕ್ರಿಯೆಗಳು ಉತ್ಪತ್ತಿಯಾಗುತ್ತದೆ.

     ಇದು ಅನೇಕ ಕಣ ದಂಗಗಳಿಂದ ಕಾಳುಕಾಳಾ ಕಗಿರುವ ಕಣಗಳು ಕೂಡಿದೆ ಇದರಲ್ಲಿ ಪ್ರತಿಯೊಂದು ಸಹ ಕೆಲವು ನಿರ್ದಿಷ್ಟವಾದ ಕಾರ್ಯಗಳನ್ನು ನಿರ್ವಹಿಸುತ್ತದೆ ಈ ದ್ರವ್ಯವು ಆಹಾರವನ್ನು  ಜೈವಿಕ ಕ್ರಿಯೆಯಲ್ಲಿ ಉಪಯೋಗಿಸಿಕೊಂಡು ಜೀವಕಣಗಳಾಗಿ ಮಾರ್ಪಡಿಸುತ್ತದೆ. ಇದು ಉಸಿರಾಟದ ಕ್ರಿಯೆ ಹೊಂದಿದೆ. ಆಮ್ಲಜನಕವನ್ನು  ತೆಗೆದುಕೊಂಡು ಇಂಗಾಲದ  ಡೈಆಕ್ಸೈಡ್ ಅನ್ನು ಬಿಡುಗಡೆಗೊಳಿಸುತ್ತದೆ. ಈ ಕಣ ದಂಗಗಳು ಸಕ್ಕರಾಂಶ ಕೊಬ್ಬಿನ  ಮತ್ತು ಪೌಷ್ಟಿಕಾಂಶಗಳನ್ನು ಸ್ವೀಕರಿಸಿಕೊಂಡು ಬೇಕಾದಾಗ ಜೀವಕೋಶಗಳಿಗೆ ನೀಡುತ್ತದೆ.

    ಈ ದ್ರವ್ಯದಲ್ಲಿ ಎರಡು ಗೋಡೆಗಳಿಂದ ಆವರಿಸಲ್ಪಟ್ಟ ಸ್ವಲ್ಪ ಉದ್ದವಾದ ಕಣದಂಗವಿರುತ್ತದೆ. ಇದರಲ್ಲಿ ಮಡಿಚಿದಂತೆ ಇರುವ ಅನೇಕ ವಂಶವಾಹಿನಿಗಳು ಇರುತ್ತದೆ. ಇದು ತಮ್ಮದೇ ಆದ ಟಿ.ಎನ್.ಎ.ಹೊಂದಿರುತ್ತದೆ. ಇದು ಶ್ವಾಚ್ಛೋಶ್ವ ಹೊಂದಿದ್ದು, ಶಕ್ತಿಯನ್ನು ಸಂಗ್ರಹಿಸಿರುತ್ತದೆ 

     ಬರಿದಾದ ರಂದ್ರ ಇದರಲ್ಲಿರುತ್ತದೆ.ಈ ಬರಿದಾದ ರಂಧ್ರಗಳು ಪೊರೆಯಂತೆ ಕವಚದೊಳಗಿರುತ್ತದೆ.ಇದರಲ್ಲಿ ನೀರು, ಆಹಾರ, ಇತರ ವಸ್ತುಗಳು ಅಲ್ಲದೆ ಬಣ್ಣದ್ರವ್ಯ ಮತ್ತು ತಾಜ್ಯ ಸಂಗ್ರಹವಾಗಿರುತ್ತದೆ.

3. ಬಿಜಾಣು/ ಜೀವಕಣ (ತಿರುಳು ):

     ಇದು ದೊಡ್ಡ ಗಾತ್ರದ ವೃತ್ತಾಕಾರ ರೂಪದಲ್ಲಿ ಜೀವಕೋಶ ದೃವ್ಯದ ಮಧ್ಯೆ ಅಡಕವಾಗಿರುತ್ತದೆ. ಇದು ಎರಡು ಕವಚಗಳಿಂದ ಸುತ್ತುವರೆಯಲ್ಪಟ್ಟು ಈ ಕವಚ ಅಣು ಸಾಮೂಹದಿಂದ ಕೂಡಿ, ಅಣು ರಂದ್ರದಿಂದ ರಚಿಸಲ್ಪಟ್ಟಿದೆ. ಈ ಕವಚದೊಳಗೆ ಅರ್ಧ ಗಟ್ಟಿಯಾದ ಪದಾರ್ಥ ದ್ರವ್ಯ ದಿಂದ ಕಡಿದೆ. ಇದು ಜೀವಕೋಶದ ಕಾರ್ಯವನ್ನು ವ್ಯವಸ್ಥಿಕವಾಗಿ ನೋಡಿಕೊಳ್ಳುತ್ತದೆ.ಈ ಬೀಜಾಣುವನ್ನು ತೆಗೆದುಹಾಕಿದರೆ, ಜೀವಕೋಶ ಮರಣಿಸುತ್ತದೆ.

    ಈ ಕವಚ ಮತ್ತು ಬೀಜಾನುಗಳ ಮಧ್ಯೆಯಿರುವ ಅರ್ಧಗಟ್ಟಿ ಪದಾರ್ಥದಲ್ಲಿ ಗಾಢವಾದ ಬಣ್ಣದಿಂದ ಕೂಡಿದ ನಾರು ರೂಪದ ವಸ್ತುವಿರುತ್ತದೆ.ಇದರಲ್ಲಿ ವಿದ್ಯುತ್ಮಾನದಾರಿತ ಜಾಲ ಹೆಣೆದು ಕೊಂಡಿದೆ ಇದನ್ನು ಕ್ರೋಮೋಸೋಮ್ಸ್ ಎಂದು ಕರೆಯುತ್ತೇವೆ. ಜೀವಶಾಸ್ತ್ರದ ಪ್ರಕಾರ ವಂಶವಾಹಿನಿಯಲ್ಲಿ 24 ವರ್ಣತಂತುಗಳು ಇರುತ್ತದೆ. ಇದು  ಜೀವಕೋಶದ ಒಳಗೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಕಾಣುತ್ತದೆ. ಇದು ಜೀವಕೋಶದ ಒಳಗೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಕಾಣುತ್ತದೆ ಇದು ವಂಶ ಪಾರಂಪರ್ಯ ಗುಣಗಳು ಹೊಂದಿರುತ್ತದೆ.

    ಇದರ ಮಧ್ಯೆ ಒಂದು ಅಥವಾ ಹೆಚ್ಚು ವೃತ್ತಾಕಾರದಿಂದ ಕೂಡಿದ ಪರಮಾಣು ಬೀಜದ ಸಮೂಹವಿದೆ ಇದು ರಿಬೋಸಂನ್ನು ಪೋಷಕಾಂಶದ ಸಂಯೋಜಿಸುವಂತೆ ಮಾಡುತ್ತದೆ.

    ವರ್ಣತಂತು ಇದು ನ್ಯೂಕ್ಲಿಸ್ ಕಣದೊಳಗೆ ಇರುತ್ತದೆ. ಇದು ಅಂಶ, ವಾಹಿನಿಯನ್ನು ಗುರುತಿಸುವ ಅಂಶ  ಇದು ಡಿ.ಎನ್.ಎ.ಯಿಂದ ಮಾಡಲ್ಪಟ್ಟಿರುತ್ತದೆ.ಎಲ್ಲರಲ್ಲೂ ಒಂದು ರೀತಿಯ ಡಿ. ಎನ್. ಎ.ಇರುವುದಿಲ್ಲ ಪ್ರತಿ ಡಿ.ಎನ್.ಎ. ಅಂಶದಲ್ಲಿ ಅನೇಕ ವಂಶವಾಹಿನಿಗಳಿರುತ್ತವೆ. ಈ ವಂಶವಾಹಿನಿಗಳನ್ನು ಜೆನ್ ಎಂದು ಕರೆಯುತ್ತಾರೆ.ಈ ವಂಶ ವಾಹಿನಿಗಳು ವ್ಯಕ್ತಿಯ ಗುಣ, ಸ್ವಭಾವ ನಡತೆಯನ್ನು ನಿರ್ಧರಿಸುತ್ತದೆ. ಪ್ರತಿ ವಂಶವಾಹಿನಿಯು ನಾಲ್ಕು ರಾಸಾಯನಿಕಗಳಿಂದ ಮಾಡಲ್ಪಟ್ಟಿದೆ. ಅವು ಅಡಿನೈನ್ ಸಿಟೋಸೈನ್. ಗೊನೈನ್ ಮತ್ತು ಥೈಮಿನ್ ಈ ರಾಸಾಯನಿಕ ವಸ್ತುಗಳೇ ವಂಶವಾಹಿನಿಗಳಿಗೆ   ಅಡಿಪಾಯವಾಗಿದೆ.

    ಒಂದೊಂದು ವಂಶವಾಹಿನಿಯು ವಿಭಿನ್ನ ರೀತಿಯಲ್ಲಿ ಸಮ್ಮಿಶ್ರಣವನ್ನು ಹೊಂದಿರುತ್ತದೆ. ಅಲ್ಲದೆ ಅವುಗಳ ಉದ್ದವೂ ಸಹ ಬದಲಾಗುತ್ತದೆ.ಇವುಗಳ ಉದ್ದವು ಎಷ್ಟು ಅಡಿಪಾಯಗಳಿಂದ ಮಾಡಲ್ಪಟ್ಟಿದೆ.ಎಂಬುದರ ಮೇಲೆ ಅವಲಂಬಿಸತ್ತವಾಗಿದೆ. ಒಂದೊಂದು ಅಡಿಪಾಯವು ಸಾವಿರಾರು ಅಡಿಪಾಯಗಳಿಂದ ಮಾಡಲ್ಪಟ್ಟಿದೆ.ಒಂದು ವಂಶವಾಹಿ ನಿಯು ಎಷ್ಟು ಅಡಿಪಾಯಗಳಿಂದ ರಚಿಸಲ್ಪಟ್ಟಿದೆಯೆಂದುದು ನಿಖರವಾಗಿ ಅಳೆಯಬಹುದು. ಆದ್ದರಿಂದಲೇ ಒಬ್ಬರ ವಂಶವಾಹಿನಿಗೆ ಮತ್ತೊಬ್ಬರ ವಂಶವಾಹಿನಿಯನ್ನುಹೋಲಿಸಿ ನೋಡಬಹುದು. ಒಬ್ಬ ಮನುಷ್ಯನ ದೇಹದಲ್ಲಿ ಸರಿಸುಮಾರಿಗೆ 30 ರಿಂದ 40,000 ವಂಶ ವಾಹಿನಿಗಳು ಇರುತ್ತವೆ.

  ಈ   ಡಿ.ಎನ್. ಎ. ಪರೀಕ್ಷೆಯಿಂದ ಒಂದು ಮಗುವಿನ ತಂದೆ ತಾಯಿ ಯಾರೆಂದು ಕಂಡುಹಿಡಿಯಬಹುದು. ಇದರಿಂದ ಅಪರಾಧಿಗಳನ್ನು ಅಥವಾ ಅತ್ಯಾಚಾರಿಗಳನ್ನು ತಿಳಿಯಬಹುದು.

       ಡಿ.ಎನ್.ಎ. ಪರೀಕ್ಷೆ ಮಾಡಲು ಮೂಗು, ತಾಯಿ ಮತ್ತು ಸಂಶಯಾಸ್ಟದಗೊಂಡ ಪುರುಷನ ರಕ್ತ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ಮಗು ಹುಟ್ಟುವುದಕ್ಕೆ ಮೊದಲೇ ಗರ್ಭಾವಸ್ಥೆಯಲ್ಲಿರುವಾಗಲೇ  ಅದರ ಕಣಗಳನ್ನು ತೆಗೆದುಕೊಂಡು ಪರೀಕ್ಷೆ ಮಾಡಲಾಗುತ್ತದೆ.ಕೆಲವು ಸಲ ಅತ್ಯಾಚಾರಗೊಳಗಾದ ಮಹಿಳೆಯರ ರಕ್ತವನ್ನು ಅಥವಾ ಅವಳು ಮರಣ ಹೊಂದಿದ್ದರೆ ಅವಳ ಅವಯನಗಳನ್ನು ಅಥವಾ ಅವಯವನಗಳಿಂದ ಕೂಡಿದ ವಸ್ತುಗಳಿಂದ ಪರೀಕ್ಷೆ ಮಾಡಿ, ತಪ್ಪಿತಸ್ಥರು ಯಾರೆಂದು  ತಿಳಿಯಬಹುದು.