ಮನೆ ಅಪರಾಧ 3 ಕೋಟಿ ರೂ. ಡ್ರಗ್ಸ್‌ ಜಪ್ತಿ: 7 ಮಂದಿ ಬಂಧನ

3 ಕೋಟಿ ರೂ. ಡ್ರಗ್ಸ್‌ ಜಪ್ತಿ: 7 ಮಂದಿ ಬಂಧನ

0

ಬೆಂಗಳೂರು: ಡ್ರಗ್ಸ್‌ ವಿರುದ್ಧ ವಿಶೇಷ ಕಾರ್ಯಾ ಚರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ವಿದೇಶಿ ಮಹಿಳೆ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿದ್ದು, 2.99 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Join Our Whatsapp Group

ಇದೇ ವೇಳೆ ತನಿಖೆಯಲ್ಲಿ ಕೆಲ ಆರೋಪಿಗಳು ಭಾರತೀಯ ಅಂಚೆ ಮೂಲಕ ಡ್ರಗ್ಸ್‌ ತರಿಸಿಕೊಳ್ಳುತ್ತಿರುವುದು ಗೊತ್ತಾಗಿದೆ ಎಂದು ಕಮಿಷನರ್‌ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ವ್ಯಾಪ್ತಿಯ ಭಾರತೀಯ ಅಂಚೆ ಮೂಲಕ ಬೆಲ್ಜಿಯಂನಿಂದ ಡ್ರಗ್ಸ್‌ ತರಿಸಿಕೊಂಡು ನಗರದಲ್ಲಿ ಮಾರುತ್ತಿದ್ದ ನೆಲಮಂಗಲ ನಿವಾಸಿ ಅಭಿಷೇಕ್‌ಗೌಡ ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ 1.50 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಕ್ಕೆ ಪಡೆಯಲಾಗಿದೆ.

ಕೇರಳ ಮೂಲದ ವ್ಯಕ್ತಿ ಬಂಧನ: ಮತ್ತೂಂದು ಪ್ರಕರಣದಲ್ಲಿ ಕೇರಳ ಮೂಲದ ಶೀಜಿನ್‌ ಎಂಬಾತನನ್ನು ಬಂಧಿಸಲಾಗಿದೆ. ಈತ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದು, ಈತ ತನ್ನ ಸ್ನೇಹಿತನ ಜತೆ ಸೇರಿ ಥೈಯ್ಲೆಂಡ್‌ನಿಂದ ಹೈಡ್ರೊ àಗಾಂಜಾವನ್ನು ಅಂಚೆ ಮೂಲಕ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಈತನಿಂದ 50 ಲಕ್ಷ ರೂ. ಮೌಲ್ಯದ ಮಾದಕವಸ್ತು ವಶಕ್ಕೆ ಪಡೆಯಲಾಗಿದೆ.

ಮೇಘಾಲಯ ಮೂಲದ ವ್ಯಕ್ತಿ ಸೆರೆ: ಇನ್ನೊಂದು ಪ್ರಕರಣದಲ್ಲೂ ಭಾರತೀಯ ಅಂಚೆ ಮೂಲಕ ಮೇಘಾಲಯದಿಂದ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಮೇಘಾಲಯ ಮೂಲದ ರೌವನಕ್‌ ಗುಪ್ತಾ ಎಂಬಾತ ನನ್ನು ಬಂಧಿಸಲಾಗಿದೆ. ಈತನಿಂದ 40 ಲಕ್ಷ ರೂ. ಮೌಲ್ಯದ 5 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಹೊಂಗಸಂದ್ರದಲ್ಲಿರುವ ತನ್ನ ಫ್ಲ್ಯಾಟ್‌ನಲ್ಲಿ ಡ್ರಗ್ಸ್‌ ಸಂಗ್ರಹಿಸಿದ್ದನು.

ಗಾಂಜಾ ವಶಕ್ಕೆ: ವಿವೇಕನಗರ ಠಾಣೆ ವ್ಯಾಪ್ತಿಯ ರೋಸ್‌ ಗಾರ್ಡನ್‌ ಬಳಿ ಗಾಂಜಾ ಮಾರುತ್ತಿದ್ದ ಕರೀಂಬೇಗ್‌ ಎಂಬಾತನನ್ನು ಬಂಧಿಸಿ, 10 ಲಕ್ಷ ರೂ. ಮೌಲ್ಯದ 10 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ.

ಮಣಿಪುರ ಮೂಲದ ಇಬ್ಬರ ಬಂಧನ: ನೆರೆ ರಾಜ್ಯಗಳಿಂದ ಮಾದಕ ವಸ್ತು ಹೆರಾಯಿನ್‌ ತಂದು, ನಗರದಲ್ಲಿ ಮಾರಾಟ ಮಾಡುತ್ತಿದ್ದ ಮಣಿಪುರ ಮೂಲದ ಇಬ್ಬರು ಡ್ರಗ್ಸ್‌ ಪೆಡ್ಲರ್‌ನನ್ನು ಬಂಧಿಸಲಾಗಿದೆ. ತಾರೀಕ್‌ ಅಜೀಜ್‌, ಇಕ್ರಂ ಬಂಧಿತರು. ಯಶವಂತಪುರ ಬಳಿ ಡ್ರಗ್ಸ್‌ ಮಾರುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿ ತಾರೀಕ್‌ ಅಜೀಜ್‌ ಎಂಬಾತನನ್ನು ಬಂಧಿಸಲಾಗಿತ್ತು. ಈತನಿಂದ 75 ಲಕ್ಷ ರೂ. ಡ್ರಗ್ಸ್‌ ವಶಕ್ಕೆ ಪಡೆಯಲಾಗಿದೆ. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ಸತೀಶ್‌ಕುಮಾರ್‌, ರಮಣ್‌ಗುಪ್ತಾ, ಸಿಸಿಬಿ ಮುಖ್ಯಸ್ಥ ಚಂದ್ರಗುಪ್ತಾ ಇದ್ದರು.

ವಿದೇಶಿ ಮಹಿಳೆ ಜೈಲಿನಿಂದ ಬಂದ ಬಳಿಕ ಮತ್ತೆ ದಂಧೆ!

ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯ 8ನೇ ಇ ಮುಖ್ಯ ರಸ್ತೆಯಲ್ಲಿರುವ ಮನೆಯೊಂದರಲ್ಲಿ ವಾಸವಾಗಿರುವ ರೋಜ್‌ ಎಂಬ ವಿದೇಶಿ ಮಹಿಳೆಯ ಮನೆ ಮೇಲೆ ದಾಳಿ ನಡೆಸಿ, 10 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. 2023ಲ್ಲಿ ಈಕೆಯ ವಿರುದ್ಧ ಕೆ.ಜಿ.ನಗರ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣದ ದಾಖಲಾಗಿ

ನ್ಯಾಯಾಂಗ ಬಂಧನದಲ್ಲಿದ್ದಳು. ಜಾಮೀನು ಪಡೆದು ಹೊರಬಂದು ಮತ್ತೆ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದಾಳೆ ಎಂದು ಪೊಲೀಸ್‌ ಆಯುಕ್ತರು ಆರೋಪಿಗಳಿಂದ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದು. ಮಾಹಿತಿ ನೀಡಿದರು.