ಮನೆ ಮನೆ ಮದ್ದು ಜ್ವರ ಬಂದಾಗ

ಜ್ವರ ಬಂದಾಗ

0
  1. ದಂಟಿನ ಸೊಪ್ಪಿನ ಸಾರನ್ನು ಜ್ವರ ಬಂದವರು ಸೇವಿಸಿದರೆ ಬೇಗ ಗುಣವಾಗುವರು.
  2. ತುಳಸಿರಸದಲ್ಲಿ ಕಾಲು ಮೆಣಸಿನ ಚೂರ್ಣವನ್ನು ಬೆರೆಸಿ, ಸೇವಿಸುವುದರಿಂದ ಜ್ವರ ನಿಲ್ಲುವುದು.
  3. ತುಳಸಿ ರಸವನ್ನು ಕರಿಮೆಣಸಿನ ಪುಡಿ ಹಾಗೂ ಜೇನುತುಪ್ಪ ಬೆರೆಸಿ, ದಿನವೂ ಮೂರು ಬಾರಿ ಸೇವಿಸುವುದರಿಂದಲೂ ಜ್ವರ ನಿಲ್ಲುವುದು.
  4. ಅಳಲೆಕಾಯಿಯನ್ನು ಶುಂಠಿ ರಸದಲ್ಲಿ ತೇಯ್ದು ತಯಾರಿಸಿದ ಗಂಧವನ್ನು ಜೇನುತುಪ್ಪದಲ್ಲಿ ಬೆರೆಸಿ,ಜ್ವರ ಬಂದಿರುವವರು ನಾಲಿಗೆಯ ಮೇಲೆ ಲೇಪಿಸಿಕೊಳ್ಳುತ್ತಿದ್ದರೆ ಜ್ವರದ ತಾಪ ಇಳಿಯುವುದು.
  5. ಮೆಣಸಿನ ಕಾಷಾಯನ್ನು ಕನಿಷ್ಠ ಪ್ರಮಾಣದಲ್ಲಿ ಜೇನುತುಪ್ಪ ಬೆರೆಸಿ ಉಪಯೋಗಿಸುತ್ತಿದ್ದರೆ ಜ್ವರ ನಿಲ್ಲುವುದು.
  6. ಬೇವಿನ ಮರದ ಒಣ ತೊಗಟೆಯನ್ನು ನೀರಿನಲ್ಲಿ ಕುದಿಸಿ, ಕಾಷಾಸ ಮಾಡಿ, ಪ್ರತಿದಿನವೂ ಸೇವಿಸುತ್ತಿದ್ದರೆ ಜ್ವರ ಕಡಿಮೆ ಆಗುವುದು.
  7. ಬದನೆಕಾಯಿ ಸಾರು ಉಪಯೋಗಿಸುತ್ತಿದ್ದರೆ ಜ್ವರ ಹೆಚ್ಚುವುದಿಲ್ಲ.
  8. ಜಠರರೋಗ :-
  9. ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಬರಿ ಮಹೊಟ್ಟೆಯಲ್ಲಿ ನೀರು ಕುಡಿಯುತ್ತಿದ್ದರೆ ಜಠರ ದೋಷ ನಿವಾರಣೆ ಆಗುವುದು.
  10. ಆರೋರೂಟ್ ಗಂಜಿ ಮಾಡಿ ಸೇವಿಸುತ್ತಿದ್ದರೆ ಜಠರ ನಿವಾರಣೆ ಆಗುವುದು.
  11. ಟೈಫಾಯಿಡ್:-
    1.ಬಾಳೆಹಣ್ಣನ್ನು ಮಜ್ಜಿಗೆಯೊಂದಿಗೆ ಬೆರೆಸಿ ಕೊಟ್ಟಾಗ ಟೈಮ್ ಅಥವಾ ವಿಷಮ ಶೀತ ಜ್ವರ ಕಡಿಮೆ ಆಗುವುದು
  12. ಮೂಸಂಬಿ ರಸವನ್ನು ಹೆಚ್ಚಾಗಿ ಸೇವಿಸುವುದರಿಂದಲೂ ಟೈಫಾಯಿಡ್ ಕಾಯಿಲೆ ನಿವಾರಣೆ ಆಗುವುದು.