ಮನೆ ಅಪರಾಧ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

0

ಬೆಂಗಳೂರು: ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಡ್ಯಾನ್ಸ್‌ ಮಾಡುವ ವಿಚಾರಕ್ಕೆ ಯುವಕನೊಬ್ಬನಿಗೆ ನಾಲ್ಕೈದು ಮಂದಿ ಯುವಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮುರುಗೇಶ್‌ ಪಾಳ್ಯದ ಜೀವನ್‌ ಭೀಮಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Join Our Whatsapp Group

ಸೆ.9ರಂದು  ಘಟನೆ ನಡೆದಿದ್ದು, ಈ ಸಂಬಂಧ ಇದುವರೆಗೂ ಯಾರು ನೀಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಮುರುಗೇಶ್‌ ಪಾಳ್ಯದ ಯು.ಆರ್‌.ರಾವ್‌ ಸೆಟಲೈಟ್‌ ಸೆಂಟರ್‌ ರಸ್ತೆ ಮಾರ್ಗದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ನೆಡಯುತ್ತಿತ್ತು. ಈ ವೇಳೆ ಸ್ಥಳೀಯ ಯುವಕರ ನಡುವೆ ಡ್ಯಾನ್ಸ್‌ ಮಾಡುವ ವಿಚಾರಕ್ಕೆ ಗಲಾಟೆಯಾಗಿದೆ. ಬಳಿಕ ಸ್ಥಳೀಯರು ಮಧ್ಯ ಪ್ರವೇಶಿಸಿ ಗಲಾಟೆ ಬಿಡಿಸಿದ್ದಾರೆ. ಆದರೆ, ಗಣೇಶ ವಿಸರ್ಜನೆ ಮಾಡಿದ ಬಳಿಕ ತಡರಾತ್ರಿ 12 ಗಂಟೆ ಸುಮಾರಿಗೆ ಮತ್ತೂಮ್ಮೆ ಅದೇ ಯುವಕರ ಗುಂಪು ಗಲಾಟೆ ಮಾಡಿಕೊಂಡಿದ್ದು, ಈ ವೇಳೆ ಯುವಕನೊಬ್ಬನಿಗೆ ನಾಲ್ಕೈದು ಮಂದಿ ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಯುವಕನ ಕಾಲು ಹಿಡಿದು ಎಳೆದಾಡಿದ್ದು, ನೆಲಕ್ಕೆ ಬೀಳಿಸಿ ಕಾಲು ಮತ್ತು ಕೈಯಿಂದ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋವನ್ನು ಸ್ಥಳೀಯ ನಿವಾಸಿ ಸೌರಭ ಕುಮಾರ್‌ ಎಂಬುವರು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿ ನಗರ ಪೊಲೀಸರು, ಡಿಜಿಪಿ, ಸಿಎಂಗೆಗೆ ಟ್ಯಾಗ್‌ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು, ದೂರು ನೀಡುವಂತೆ ಪೋಸ್ಟ್‌ ಮಾಡಿದ ವ್ಯಕ್ತಿಗೆ ಕೋರಿದ್ದಾರೆ.

ಮತ್ತೂಂದೆಡೆ ಹಲ್ಲೆಗೊಳಗಾದ ಯುವಕನ ಸಂಪರ್ಕಿಸಲಾಗಿದೆ. ಆದರೆ, ಇದುವರೆಗೂ ದೂರು ನೀಡಿಲ್ಲ. ಚಿಕಿತ್ಸೆ ಪಡೆದುಕೊಂಡ ಬಳಿಕ ನೋಡೋಣ ಎಂದಿದ್ದಾನೆ ಎಂದು ತಿಳಿದು ಬಂದಿದೆ.