ಮನೆ ಜ್ಯೋತಿಷ್ಯ ದ್ವಾದಶ ರಾಶಿಗಳಲ್ಲಿ ನವಗ್ರಹಗಳ ಸಂಚಾರದಿಂದ ತೇಜಿ ಮಂದಿ ನಿರ್ಣಯಿಸುವ ರೀತಿ

ದ್ವಾದಶ ರಾಶಿಗಳಲ್ಲಿ ನವಗ್ರಹಗಳ ಸಂಚಾರದಿಂದ ತೇಜಿ ಮಂದಿ ನಿರ್ಣಯಿಸುವ ರೀತಿ

0

 ರವಿಯ ಪಲವು :

 ಮೇಷ ರಾಶಿಯಲ್ಲಿ ರವಿ ಇದ್ದರೆ ಹಣ್ಣು ಹಂಪಲುಗಳು,ತೆಂಗಿನಕಾಯಿ, ಕೊಬ್ಬರಿ,ಬೆಲ್ಲ,ಎಳ್ಳು, ಎಣ್ಣೆ, ಬೆಣ್ಣೆ,ನೂಲು, ಜವಳಿ ತೇಜಿಯು.

Join Our Whatsapp Group

 ವೃಷಭ ರಾಶಿಯಲ್ಲಿ ರವಿ ಇದ್ದರೆ ದ್ವಿದಳ ಧಾನ್ಯಗಳು, ರಾಗಿ,ಜೋಳ, ನವಣೆ,ತೊಗರಿ,ಇತ್ಯಾದಿಗಳು ತೇಜಿ.

 ಮಿಥುನ ರಾಶಿಯಲ್ಲಿ  ರವಿ ಇದ್ದರೆ ಹತ್ತಿ,ಅರಳೆ, ಗಡ್ಡೆ, ಗೆಣಸು, ಎಳ್ಳು, ಅರಣ್ಯ ಜನ್ಯ ವಸ್ತುಗಳು, ಸೀಸ,ಮತ್ತಿ, ಸಾಗವಾನಿ ಕಟ್ಟಿಗೆ ತೇಜಯು.

 *ಕರ್ಕ ರಾಶಿಯಲ್ಲಿ ರವಿ ಇದ್ದರೆ ದ್ವಿದಳ ಧಾನ್ಯ,ತೆಂಗು, ಹಣ್ಣು ಹಂಪಲು,ಮಸಾಲೆ ವಸ್ತುಗಳು ಇವು ಅಲ್ಪಸ್ವಲ್ಪ ತೇಜಯು.

 ಸಿಂಹ ರಾಶಿಯಲ್ಲಿ ರವಿ ಇದ್ದರೆ ಕಬ್ಬು, ಬೆಲ್ಲ,ಸಕ್ಕರೆ, ತೊಗರಿ, ನವಣೆ ಎಳ್ಳು, ಕುಸುಬಿ ಸೇಂಗಾ ಅರಣ್ಯ ಜನ್ಯ ವಸ್ತುಗಳು ತೇಜಿ.

 ಕನ್ಯಾ ರಾಶಿಯಲಿ ರವಿ ಇದ್ದರೆ ತೆಂಗಿನಕಾಯಿ, ಎಳ್ಳು, ಎಣ್ಣೆ,ಬೆಣ್ಣೆ, ಸುಗಂಧ, ದ್ರವ್ಯಗಳು,ಔಷಧಿ ವಸ್ತುಗಳು ತೇಜಯು.

 ತುಲಾ ರಾಶಿಯಲ್ಲಿ ರವಿ ಇದ್ದರೆ ಬಂಗಾರ, ಬೆಳ್ಳಿ, ಲೋಹ, ವಸ್ತುಗಳು ಮತ್ತು ಸರ್ವಧಾನ್ಯಗಳು ತೇಜ, ಆನೆ, ಆಡು, ಕುದುರೆ, ಆಕಳು, ಮುಂತಾದ ಸಾಕು ಪ್ರಾಣಿಗಳಿಗೆ ಅನಿಷ್ಟ.

 ವೃಶ್ಚಿಕ ರಾಶಿಯಲ್ಲಿ  ರವಿ ಇದ್ದರೆ ಸರ್ವ ಧಾನ್ಯಗಳ ಧಾರಣೆಯಲ್ಲಿ ಸಮತ್ವ ಉಳಿಯುವುದು.ಉಣ್ಣೆ, ವಸ್ತ್ರ, ಬೆಳ್ಳಿ, ಬಂಗಾರ, ಸ್ಟೇನ್ ಲೆಸ್, ಸ್ಟೀಲ ಪಾತ್ರೆಗಳು ಸಾಧಾರಣ ಟಿವಿಯಲ್ಲಿ ಉಳಿಯುವು.

 ಧನುಷ್ ರಾಶಿಯಲ್ಲಿ ರವಿ ಇದ್ದರೆ ಸರ್ವಧಾನ್ಯಗಳು ಸಮತ್ವದಲ್ಲಿದ್ದು ಎಳ್ಳು,ಎಣ್ಣೆ,ಅಗಸಿ, ಕುಸುಬಿ, ಔಡಾಲ,ನೂಲು, ಹತ್ತಿ, ಖಾಲಿ ಚೀಲ,ಭಾರದಾನ ಇತ್ಯಾದಿಗಳು ತೇಜಿ.

 ಮಕರ ರಾಶಿಯಲ್ಲಿ  ರವಿ ಇದ್ದರೆ ತುಪ್ಪ,ಎಣ್ಣೆ,ಔಡಲ, ಸೇಂಗಾ, ಎಣ್ಣೆ ಮುಂತಾದ ಸ್ನಿಗ್ಧ ಪದಾರ್ಥಗಳು ತೇಜಿಯಲ್ಲಿ ಮಾರುವವು. ಸರ್ವ ಜೀವನಾವಶ್ಯಕ ಆಹಾರ ಧಾನ್ಯಗಳು ಮಾತ್ರ ಮಂದಿಯಾಗುವವು.

 ಕುಂಭ ರಾಶಿಯಲ್ಲಿ  ರವಿ ಇದ್ದರೆ ಎಲ್ಲ ಆಹಾರ ಧಾನ್ಯದಿಗಳ ಧಾರಣಿಯಲ್ಲಿ ಸಮತ್ವ ಉಳಿದು ಉಪ್ಪು ಹುಳಿ,ಸೈಂಧ, ಲವಣ, ಎಣ್ಣೆ, ಗೆಡ್ಡೆ,ಗೆಣಸುಗಳು ತೇಜಿ.

 ಮೀನ ರಾಶಿಯಲ್ಲಿ  ರವಿ ಪ್ರವೇಶವಿದ್ದರೆ ಎಲ್ಲ ಧಾನ್ಯಗಳು ತೇಜಿಯಾಗಿ ಉಪ್ಪು, ಎಳ್ಳು ಔಡಲ, ಕುಸುಬೆ,ಎಣ್ಣೆ ಇವುಗಳನ್ನು ತೇಜಿಯಲ್ಲಿ ಸಾಗಿ ಕೊನೆಗೆ ಮಂದಿಯಾಗುವವು.