1. ನಿಂಬೆ ಹಣ್ಣಿನ ರಸದಲ್ಲಿ ದಾಲ್ಮೀಕಿಯನ್ನು ತೇಯ್ದು ಹಣೆಗೆ ಲೇಪಿಸಿಕೊಂಡರೆ ಅರ್ಧ ತಲೆನೋವು ನಿವಾರಣೆ ಆಗುವುದು.
2. ಹುಳಿದಾಳಿಂಬೆ ಹಣ್ಣಿನ ರಸಕ್ಕೆ ಜೇನುತುಪ್ಪವನ್ನು ಬೆರೆಸಿ, ಒಂದೆರಡು ವಾರ ದಿನವೂ ಒಂದೊಂದು ಬಾರಿ ಸೇವಿಸುತ್ತಿದರೆ ಮಾನಸಿಕ ಒತ್ತಡದಿಂದ ಆಗುವ ತಲೆನೋವು ಕಡಿಮೆ ಆಗುವುದು.
3. ಹಸಿವಿನ ತುಪ್ಪದಲ್ಲಿ ಗೋಲಿ ಗಾತ್ರದ ಬೆಲ್ಲ ಬೆರೆಸಿ, ಬರಿ ಹೊಟ್ಟೆಯಲ್ಲಿ ಮೂರು ನಾಲ್ಕು ದಿನಗಳ ಕಾಲ ತಿನ್ನುತ್ತಿದ್ದರೆ ಅರ್ಧ ತಲೆನೋವು ದೂರ ಆಗುವುದು.
4. ಬಾರ್ಲಿ ಗಂಜಿ ಕುಡಿಯುತ್ತಿರುವುದರಿಂದ ತಲೆನೋವು ನಿಲ್ಲುವುದು.
5. ಎಳೆಯ ಬೇವಿನ ಎಲೆಗಳನ್ನು ಕುಟ್ಟಿ, ರಸ ತೆಗೆದು, ದಿನವು ಒಂದೆರಡು ಟೀ ಸ್ಪೂನಿನಷ್ಟು ಸೇವಿಸುತ್ತಿದ್ದರೆ ತಲೆನೋವು ಕಡಿಮೆ ಆಗುವುದು.
6. ನೆಗಡಿಯೊಂದಿಗೆ ತಲೆ ನೋವು ಇದ್ದಾಗ ಜೀರಿಗೆ, ಮೆಣಸು, ಕೊತ್ತಂಬರಿ ಬೀಜ, ಒಣಶುಂಟಿಯನ್ನು ಕುಟ್ಟಿ ಪುಡಿ ಮಾಡಿಕೊಂಡು, ನೀರಿನಲ್ಲಿ ಚೆನ್ನಾಗಿ ಕುದಿಸಿದ ನಂತರ ಕಷಾಯಕ್ಕೆ ಬೆಲ್ಲದ ಪುಡಿ ಸೇರಿಸಿ,ಮಲಗುವ ಮೊದಲು ಸೇವಿಸುತ್ತಿದ್ದರೆ ತಲೆನೋವು ಕಡಿಮೆ ಆಗುವುದು.
7. ನುಗ್ಗೆ ಸೊಪ್ಪಿನ ರಥದಲ್ಲಿ ಕರಿಮೆಣಸನ್ನು ತೋಯ್ದುಘಿ, ಆ ಗಂಧವನ್ನು ಹಣೆಯ ಮೇಲೆ ಲೇಪಿಸಿಕೊಳ್ಳುವುದರಿಂದ ತಲೆನೋವು ಇಲ್ಲದಂತಾಗುವುದು.
8. ಒಂದು ಬಟ್ಟಲಷ್ಟು ಚಹದಲ್ಲಿ ಒಂದು ಟೀ ಸ್ಪೂನ್ ನಷ್ಟು ನಿಂಬೆಹಣ್ಣಿನ ರಸವನ್ನು ಸೇರಿಸಿ ಕುಡಿಯುವುದರಿಂದ ಪಿತ್ತದಿಂದ ಆಗುವ ತಲೆ ನೋವು ಕಡಿಮೆ ಆಗುವುದು.
9. ಏಲಕ್ಕಿ ಪುಡಿ ಬೆರೆಸಿದ ನಿಂಬೆಹಣ್ಣಿನ ಪಾನಕವನ್ನು ಸೇವಿಸುತ್ತಿದ್ದರೆ ತಲೆ ಸುತ್ತುವುದು ಕಡಿಮೆ ಆಗುವುದು.
10. ನುಗ್ಗೆ ಸೊಪ್ಪನ್ನು ಬೇಯಿಸಿ, ಬಸಿದು ತೆಗೆದ ಕಟ್ಟಿನ ನೀರಿಗೆ ನಿಂಬೆರಸ ಹಿಂದಿ ಕುಡಿದರೆ ದೀರ್ಘಕಾಲದಿಂದ ಇರುವ ತಲೆ ನೋವು ದೂರ ಆಗುವುದು.
11. ಸಕ್ಕರೆ ಬೆರೆಸಿದ ಕೊತ್ತಂಬರಿ ಬೀಜದ ಕಷಾಯ ಸೇವಿಸುತ್ತಿದ್ದರೆ ತಲೆಸುತ್ತುವಿಕೆ ಕಡಿಮೆ ಆಗುವುದು.
12. ಹಸಿಶುಂಠಿಯನ್ನು ನೀರಿನಲ್ಲಿ ತೇಯ್ದು ಆ ಗಂಧವನ್ನು ಹಣೆಗೆ ಹಚ್ಚಿ ಮೈ ತುಂಬಾ ಹೊದ್ದು ಮಲಗಿಕೊಂಡರೆ,ಸ್ವಲ್ಪ ಕಾಲದಲ್ಲಿಯೇ ಹಣೆಯ ಮೇಲೆ ಬೆವರು ಹನಿಗೂಡಿ, ತಲೆ ನೋವು ಇಲ್ಲದಂತಾಗುವುದು.
13. ಮೂರು ದಿನಗಳ ಕಾಲ ಹಸಿವಿನ ಮೊಸರಿನಲ್ಲಿ ಕೆಂಪಕ್ಕಿ ಅನ್ನವನ್ನು ಸೂರ್ಯ ಹುಟ್ಟುವುದಕ್ಕೆ ಮುಂಚೆ ಊಟ ಮಾಡುವುದರಿಂದ ಬಹಳ ಕಾಲದಿಂದ ಇರುವ ಅರ್ಧ ತಲೆನೋವು ವಾಸಿ ಆಗುವುದು.
14. ಕಿರು ನೆಲ್ಲಿಕಾಯಿಯ ಜೊತೆಯಲ್ಲಿ ಉಪ್ಪು ತಿಂದರೆ ಅರ್ಧ ತಲೆನೋವು ತಲೆ ಸುತ್ತುವಿಕೆ ಕಡಿಮೆ ಆಗುವುದು.
15. ಸೇಬಿನ ಹೋಳುಗಳನ್ನು ಉಪ್ಪಿನಲ್ಲಿ ಅದ್ದಿಕೊಂಡು, ಮೂರುವಾರಗಳ ಕಾಲ ನಿರಂತರ ಸೇವಿಸುತ್ತಿದ್ದರೆ ಅರ್ಧ ತಲೆನೋವು ಹೋಗುವುದು.
16. ಅರ್ಧ ತಲೆನೋವಿನಿಂದ ನರಳುತ್ತಿರುವವರು ನುಗ್ಗೆ ಸೊಪ್ಪಿನ ರಸದ ಕೆಲವು ತೊಟ್ಟುಗಳನ್ನು ನೋವಿನ ವಿರುದ್ಧ ದಿಕ್ಕಿನ ಕಿವಿಗೆ ದಿನಕ್ಕೆರಡು ಬಾರಿಯಂತೆ ಎರಡು ದಿನ ತೊಟಕಿಸುವುದರಿಂದ ಸಂಪೂರ್ಣ ಗುಣ ವಾಗುವುದು.
17. ದೊಡ್ಡಪತ್ರೆ ಸೊಪ್ಪಿನ ಚಟ್ನಿ ಮಾಡಿಕೊಡು ತಿಂದರೆ ತಲೆಸುತ್ತುವಿಕೆ ಕಡಿಮೆ ಆಗುವುದು.
18. ಕೆಂಪಕ್ಕಿಯ ಅನ್ನಕ್ಕೆ ಮೊಸರು ಹಾಕಿಕೊಂಡು ತಿನ್ನುವುದರಿಂದ ಅರ್ಧ ತಲೆನೋವು ಮಾಯ ವಾಗುವುದು.
19. ಅನಾನಸ್ ಹಣ್ಣಿಗೆ, ಉಪ್ಪು, ಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ತಲೆ ಸುತ್ತುವುದು ನಿಲ್ಲುವುದು.
20. ಜಜ್ಜಿದ ಈರುಳ್ಳಿಯನ್ನು ಕ್ರಮವಾಗಿ ಸೇವಿಸುತ್ತಿದ್ದರೆ ಹಾಗೂ ಮೂಸುತಿದ್ದರೆ ತಲೆನೋವು ಕಡಿಮೆ ಆಗುವುದು.