ಮನೆ ದೇವಸ್ಥಾನ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ

0

 ಕಳಸ ದೇವಾಲಯದ ಕಡತದಲ್ಲಿ ಅಗಸ್ತ್ಯ ಉಲ್ಲೇಖಿತ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ :

 ಇತಿಹಾಸ ನೆಲೆಯಲ್ಲಿ ಶೃಂಗೇರಿ ಕಳಸ ಹೊರನಾಡು ಪ್ರದೇಶ :

Join Our Whatsapp Group

    ಭೌಗೋಳಿಕವಾಗಿ ಮಲೆನಾಡು ಮತ್ತು ಬಯಲು ಸೀಮೆ ಎರಡು ಈ ಪ್ರದೇಶದಲ್ಲಿ ಸಂಗಮಿಸಿದೆ ಋಷಿಮುನಿಗಳೂ, ಈ ಶಂಕರ, ಶ್ರೀ ಮಧ್ವರು ಓಡಾಡಿದ,ತಪಸ್ಸು ಆಚರಿಸಿದ ಸ್ಥಳಗಳಿರುವ ಈ ಪ್ರದೇಶವನ್ನು ಗಂಗರು,ಕದಂಬರು,ಪೂರ್ವ ಮತ್ತು ಉತ್ತರ ಚಾಲುಕ್ಯರು ರಾಷ್ಟ್ರಕೂಟರು, ಹೊಯ್ಸಳರು,ಮತ್ತು ಕೆಳದಿ, ಮೈಸೂರು ಅರಸರು,ಅಳಿದ್ದಾರೆ.ಅಂತೆಯೇ ಸಾಂತರ,ಮತ್ತು ಕೆಳದಿ, ಮೈಸೂರು ಅರಸರು,ಅಳಿದ್ದಾರೆ.ಅಂತೆಯೇ ಸಾಂತರ,ಬೇಲೂರು,ಕಳಸ ಕಾರ್ಕಳ, ಸೇನವಾರ, ಸಂತೆಬೆನ್ನೂರು, ತರೀಕೆರೆ ಅಧಿಪರೂ ಈ ಪ್ರದೇಶ ಆಳಿರುವುದಿದೆ. ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಸಿಗುವ ಶಾಸನಗಳ ರಾಜಕೀಯ, ಸಮಾಜಕ, ಸಾಂಸ್ಕೃತಿಕವಾಗಿ ಹಾಗೂ ಸಾಹಿತ್ಯ ಕ ದೃಷ್ಟಿಯಿಂದ ಕೆಲವು ಶಾಸನಗಳು ಗಮನ ಸೆಳೆಯುವಂತ ಹವು ಆಗಿವೆ.

ಇಲ್ಲಿ ಹೆಚ್ಚಿನ ಶಾಸನಗಳು ಗಂಗ,ರಾಷ್ಟ್ರಕೂಟ, ಹೊಯ್ಸಳ ಮತ್ತು ವಿಜಯನಗರ ಕಾಲದ್ದು ಸಿಗುತ್ತವೆ. ಕ್ರಿ.ಶ, 12ನೇ ಶತಮಾನದಿಂದ ಕ್ರಿ.ಶ. 17ನೇ ಶತಮಾನದವರೆಗೆ ಸುಮಾರು 5 ಶತಮಾನಗಳ ಕಾಲ ಈ ಜಿಲ್ಲೆಯ ಆಡಳಿತ ನಡೆಸಿದವರು ಕಳಸ ಪ್ರದೇಶವನ್ನು ಆಳಿದ ಕಳಸ ಕಾರ್ಕಳ ರಾಜ ಮನೆತನದ ಅರಸರು. ಇವರು ಮೂಲತಃ ಪೊಂಬುಚ್ಚಪುರದ ಸಾಂತರ ವಂಶಕ್ಕೆ ಸೇರಿದ ಈ ರಾಜಮನೆತನ ಕ್ರಿ. ಶ.12ನೇ ಶತಮಾನದ ಸುಮಾರಿಗೆ ಅದ್ಯಾವುದೋ ಕಾರಣದಿಂದ ಪೊಂಬುಚ್ಛ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಕಳೆದುಕೊಂಡು ತನ್ನ ಅಧಿಕಾರವನ್ನು ಚಿಕ್ಕಮಂಗಳೂರು ಜಿಲ್ಲೆಯ ಕಳಸ ಪ್ರದೇಶಕ್ಕಷ್ಟೇ ಸೀಮಿತಗೊಳಿಸಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಯಿತು. ಪ್ರಾರಂಭದಲ್ಲಿ ಕಳಸ ಪ್ರದೇಶಕಷ್ಟೇ ಸೀಮಿತವಾಗಿದ್ದ ಈ ರಾಜ ಮನೆತನದ ಅಧಿಕಾರ ವ್ಯಾಪ್ತಿಯು ಕ್ರಿ. ಶ. 14ನೇ ಶತಮಾನದ ಹೊತ್ತಿಗೆ  ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಪ್ರದೇಶಕ್ಕೂ  ವಿಸ್ತರಿಸಲಿಟ್ಟಿತು. ಸುಮಾರು ಐದು ಶತಮಾನಗಳ ಕಾಲ ಚಿಕ್ಕಮಂಗಳೂರು ಜಿಲ್ಲೆಯ ಕಳಸ ಪ್ರದೇಶ ಇವರ ಆಳ್ವಿಕೆಗೆ ಒಳಪಟ್ಟಿತ್ತು. ಈ ಕಾರಣದಿಂದಾಗಿ ಈ ರಾಜಮನೆತನವನ್ನು ಕಳಸ ಕಾರ್ಕಳ ರಾಜ್ಯಮನೆತನ ಎಂದು ಇತಿಹಾಸಕಾರರು ಗುರುತಿಸಿದ್ದಾರೆ.ಕಾರ್ಕಳ ಪ್ರದೇಶಕ್ಕೆ ತಮ್ಮ ಆಳ್ವಿಕೆ ನಡೆಸಿದ್ದರಿಂದ ತಮಿಳುನಾಡಿನ ಇತಿಹಾಸದಲ್ಲಿ ಇವರನ್ನು ಬೈರರಸ ಒಡೆಯರೇಂದೆ ಗುರುತಿಸಲಾಗಿದೆ. ವರಂಗ ಶಾಸನದ ಪ್ರಕಾರ ಕಾರ್ಕಳ ಪ್ರದೇಶದಲ್ಲಿ ಇವರ ಆಳ್ವಿಕೆ ಪ್ರಾರಂಭವಾದದ್ದು ಭೈರವ ಎಂಬ ಹೆಸರಿನ ಅರಸನಿಂದ.ಪ್ರಾಯಶಃ ಈ ವಂಶವನ್ನು ಬೈರರಸ ವಂಶ ಎಂದು ಗುರುತಿಸಲು ಈ ಅಂಶವೂ ಕಾರಣ ಆಗಿರಬಹುದು.

ಕ್ರಿ. ಶ. 1154ರ ಮಹಾಮಂಡಲೇಶ್ವರ ಶಾಂತ ಮಾರುದೇವನ ಕಳಸದ ಶಾಸನದಿಂದ ಪ್ರಾರಂಭಿಸಿ ಕ್ರಿ.ಶ. 1069 ರ ಬೈರರಸನ ಶಾಸನದವರೆಗೆ ಈ ರಾಜಮನೆ ತನದ ಸುಮಾರು 40 ರಷ್ಟು ಸಾಸನಗಳು ಚಿಕ್ಕಮಂಗಳೂರು ಜಿಲ್ಲೆಯಾದ್ಯಂತ ಬೆಳಕಿಗೆ  ಬಂದಿವೆ. ಅದರಲ್ಲಿ 18 ಶಾಸನಗಳು ಕಳಸ ಪ್ರದೇಶದಲ್ಲಿ ಮಾತ್ರ ಆಳ್ವಿಕೆ ನಡೆಸಿದ್ದ ಈ ರಾಜಮನೆತನದ ಪ್ರಾರಂಭದ ಕಾಲದ ಶಾಸನಗಳಾಗಿದ್ದು. ಇನ್ನುಳಿದ ಶಾಸನಗಳು ಈ ರಾಜ ಮನೆತನದವರು ಕಾರ್ಕಳ ಪ್ರದೇಶಕ್ಕೆ ತಮ್ಮ ರಾಜ್ಯವನ್ನು ವಿಸ್ತರಿಸಿದ ನಂತರದ ಕಾಲಕ್ಕೆ ಅನ್ವಯಿಸುತ್ತವೆ. ಕ್ರಿ. ಶ 14ನೇ ಶತಮಾನದ ನಂತರ ಈ ಅರಸರು ಕಾರ್ಕಳ ತಾಲ್ಲೂಕಿನ ಕೆರವಸೆ  ಮತ್ತು ಕಾರ್ಕಳವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಕಾರ್ಕಳ ಪ್ರದೇಶದಲ್ಲೇ  ತಮ್ಮ ಪ್ರಾಬಲ್ಯವನ್ನು ಮರೆತಿದ್ದರೂ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಗುರುತಿಸಲಾಗದ ಇವರ ಶಾಸನಗಳಲ್ಲಿ ಕಳಸ ಕಾರ್ಕಳದ ರಾಜ್ಯವನ್ನಾಳುತ್ತಿದ್ದಲ್ಲಿ ಘಟ್ಟದ ಕೆಳಗೆ ಮತ್ತು ಘಟ್ಟದ ಮೇಲಣ ರಾಜ್ಯವನ್ನಾಳುವ ಕಾಲದಲ್ಲಿ ಎಂಬ ಉಲ್ಲೇಖಗಳಿರುವುದನ್ನು ಗಮನಿಸಬಹುದು.ಈ ರಾಜ ಮನೆತನದ ಆಳ್ವಿಕೆಯ ಕೊನೆಯ ತನಕವೂ ಕಾರ್ಕಳ ದೊಂದಿಗೆ ಕಳಸ ಪ್ರದೇಶವೂ ಅದರ ಆಳ್ವಿಕೆಗೊಳಪಟ್ಟಿತ್ತೆಂಬ ವಿಚಾರ ಈ ಉಲ್ಲೇಖನಗಳಿಂದ ಸ್ಪಷ್ಟವಾಗುತ್ತದೆ.