ಮನೆ ರಾಜಕೀಯ ನಾಗಮಂಗಲದಲ್ಲಿ ಕೋಮುಗಲಭೆ: ಓಲೈಕೆಗಾಗಿ ಕಾಂಗ್ರೆಸ್​ ಈ ರೀತಿ ಮಾಡುತ್ತಿದೆ- ಹೆಚ್ ಡಿ ಕುಮಾರಸ್ವಾಮಿ

ನಾಗಮಂಗಲದಲ್ಲಿ ಕೋಮುಗಲಭೆ: ಓಲೈಕೆಗಾಗಿ ಕಾಂಗ್ರೆಸ್​ ಈ ರೀತಿ ಮಾಡುತ್ತಿದೆ- ಹೆಚ್ ಡಿ ಕುಮಾರಸ್ವಾಮಿ

0

ಮಂಡ್ಯ: ನಾಗಮಂಗಲ ಕೋಮುಗಲಭೆಕ್ಕೆ   ಸಂಬಂಧಿಸಿದಂತೆ ಒಂದು ಸಮುದಾಯದ ಓಲೈಕೆಗಾಗಿ ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ. ನಿಜವಾದ ಗಲಭೆಕೋರರು ಬೇರೆ ಇದ್ದಾರೆ, ಅವರ ವಿರುದ್ಧ ಕ್ರಮ ಆಗಲಿ. ಯಾರು ಈ ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಲಿ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿದರು.

Join Our Whatsapp Group

ಕೋಮುಗಲಭೆ ನಡೆದ ಸ್ಥಳಕ್ಕೆ ಶುಕ್ರವಾರ ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳನ್ನು ಕೆಳಗಿಳಿಸಲು ಈ ರೀತಿಯ ಕೆಲಸವಾಗುತ್ತಿರಬಹುದು ಎಂದರು.

ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ರಾಮನಗರ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಾಯಕರೇ ಬೆಂಕಿ ಹಚ್ಚಿಸಿ ಗಲಭೆ ಮಾಡಿಸಿದ್ದರು. ಈಗ ನಾಗಮಂಗಲದಲ್ಲಿ ಗಲಭೆ ಮಾಡಿಸಲಾಗಿದೆ. ಆದರೆ, ಕೆಲವರು ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಹೇಳುತ್ತಾರೆ. ಇನ್ನೂ ಕೆಲವರು ಮುಖ್ಯಮಂತ್ರಿ ಕುರ್ಚಿಗಾಗಿ ಟವೆಲ್ ಹಾಕಿದ್ದಾರೆ ಎಂದು ಹೇಳಿದರು.

ನಾಗಮಂಗಲದಲ್ಲಿ ಗಣೇಶ ಕೂರಿಸಿದವರನ್ನೇ ಎ1 ಮಾಡಿದ್ದಾರೆ. ಲೋಪ ಮುಚ್ಚಿಕೊಳ್ಳಲು ಸಿಕ್ಕ ಸಿಕ್ಕವರನ್ನು ಅರೆಸ್ಟ್ ಮಾಡಿದ್ದಾರೆ. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಅಮಾಯಕರನ್ನು ಬಂಧಿಸಿರುವುದು ತಪ್ಪು. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯ ಸ್ಪಾನ್ಸರ್ ‘ಕೈ’ ನಾಯಕರು. ಆ ಘಟನೆಯಿಂದ ಜೈಲಿಗೆ ಹೋದವರು ಈಗ ಏನು ಮಾಡ್ತಿದ್ದಾರೆ. ಈ ರೀತಿ ನಾಗಮಂಗಲದಲ್ಲೂ ಆಗಬೇಕಾ ಎಂದು ಪ್ರಶ್ನಿಸಿದರು.

ಪೊಲೀಸರನ್ನು ಕೊಲೆ ಮಾಡಲು ಬಂದಿದ್ದರು

ಇದು ಸಣ್ಣ ಗಲಾಟೆ ಎಂಬ ಗೃಹ ಸಚಿವ ಜಿ ಪರಮೇಶ್ವರ್ ಹೇಳುತ್ತಾರೆ. ಈ ಎಫ್​ಐಆರ್​ ನೋಡಿದರೇ ಅವರನ್ನು ಗೃಹ ಸಚಿವ ಅನ್ನೋಕೆ ಆಗುತ್ತಾ? ಸ್ಥಳೀಯ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಈ ಘಟನೆಯಿಂದ ಅಮಾಯಕ‌ ಜನರ ಬದುಕು‌ ಬೀದಿಗೆ ಬಂದಿದೆ. 19 ವರ್ಷದ ಸಣ್ಣ ವ್ಯಕ್ತಿಯ ಜೀವನ ಬೀದಿಗೆ ಬಂದಿದೆ. ಪೊಲೀಸರನ್ನು ಕೊಲೆ ಮಾಡಲು ಬಂದಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರಿಗೂ ಭದ್ರತೆ ನೀಡದ ದರಿದ್ರ ಸರ್ಕಾರ ಇದೆ ಎಂದು ವಾಗ್ದಾಳಿ ಮಾಡಿದರು.

ಎಸ್‌ಐಟಿ ತನಿಖೆ ಸರಿಯಲ್ಲ. ತಲ್ವಾರ್ ಹಿಡಿದು ಓಡಾಡುತ್ತಾರೆ ಅಂದ್ರೆ ಎಷ್ಟು ಧೈರ್ಯ ಇರಬೇಕು. ಪೆಟ್ರೋಲ್ ಬಾಂಬ್ ಎಸೆಯುತ್ತಾರೆ ಎಂದರೆ ಹೇಗೆ? ಮಸೀದಿ ಬಳಿ 10 ನಿಮಿಷ ಡ್ಯಾನ್ಸ್ ಮಾಡಲು ಬಿಟ್ಟವರು ಯಾರು? ಆಗ ಪೊಲೀಸರು ಏನು ಮಾಡುತ್ತಿದ್ದರು? ಹೆಚ್ಚುವರಿ ಪೊಲೀಸರಿದ್ದರೆ ಪರಿಸ್ಥಿತಿ ನಿಯಂತ್ರಣ ಮಾಡಬಹುದಿತ್ತು. ಗಣೇಶ ಮೂರ್ತಿ ಮೆರವಣಿಗೆ ವೇಳೆ ಎಎಸ್​ಪಿ, ಪಿಐ ಇರಲೇ ಇಲ್ಲ. ದೂರು ನೀಡಿರುವ ಪಿಐಗೆ ಎಫ್​ಐಆರ್​ನಲ್ಲಿರುವ ವ್ಯಕ್ತಿ ಹೆಸರು ಹೇಗೆ ಗೊತ್ತು. ಎಫ್‌ಐಆರ್‌ನಲ್ಲಿ ದೊಡ್ಡ ಗುಂಪು ಗಲಾಟೆ ಮಾಡಿದೆ ಎಂದು‌ ಇದೆ. ಆದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಏನೂ ಆಗಿಲ್ಲ ಎನ್ನುತ್ತಾರೆ, ಇವರ ಹೇಳಿಕೆ ಸರಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡ್ಯಾಮ್ ಇವರ ಅಪ್ಪನ ಮನೆಯದ್ದ:

ಮಳವಳ್ಳಿ ‌ಭಾಗದಲ್ಲಿ ಇದುವರೆಗೂ ನೀರು ಕೊಟ್ಟಿಲ್ಲ. ಡ್ಯಾಮ್ ಇವರ ಅಪ್ಪನ ಮನೆಯದ್ದ. ಜಲಪಾತೋತ್ಸವ ಮಾಡುತ್ತಿದ್ದಾರೆ. ಕೆರೆ ಕಟ್ಟೆಗಳಲ್ಲಿ ನೀರು ಇಲ್ಲ. ಚನ್ನಪಟ್ಟಣದಲ್ಲಿ ಕೆಲಸ ಮಾಡಿಸೋಕೆ ಡಿಸಿಎಂ ಬಂದಿದ್ದಾರೆ ಎಂದರು.