ಮನೆ ಯೋಗಾಸನ ಭುಜ ಪೀಡಾಸನ

ಭುಜ ಪೀಡಾಸನ

0

     ‘ಭುಜ’ವೆಂದರೆ, ತೋಳು ಅಥವಾ ಹೆಗಲು  ‘ಪೀಡಾ’ ನೋವು, ಒತ್ತಡ ಈ ಆಸನದಲ್ಲಿ ಕಾಲಿನ ಮಂಡಿಗಳ ಹಿಂಬದಿಯನ್ನು ಹೆಗಲುಗಳಿಗೆ ಒರಗಿಸಿಟ್ಟು, ದೇಹವನ್ನು ಕೈಗಳ ಮೇಲೆ ಸಮತೋಲನಮಾಡಿ ನಿಲ್ಲಿಸಬೇಕಾಗಿರುವುದರಿಂದ ಈ ಆಸನಕ್ಕೆ ಈ ಹೆಸರು.

Join Our Whatsapp Group

 ಅಭ್ಯಾಸ ಕ್ರಮ

1. ಮೊದಲು ತಾಡಸನದ ಭಂಗಿಯಲ್ಲಿ ನಿಲ್ಲಬೇಕು ಬಳಿಕ ಕಾಲುಗಳನ್ನು ಅಗಲಿಸಿ, ಪಾದಗಳ ನಡುವಣ ಅಂತರವನ್ನು ಎರಡಡಿಯಷ್ಟು ಮಾಡಿ ನಿಲ್ಲಬೇಕು.

2. ಆಮೇಲೆ,ಮುಂದಕ್ಕೆ ಬಾಗಿ ಮಂಡಿಗಳನ್ನು ಬಗ್ಗಿಸಿಡಬೇಕು.

3. ಅನಂತರ, ಅಂಗೈಗಳನ್ನು ನೆಲದ ಮೇಲೂರಿ, ಅವೂಗಳ ನಡುವಣಂತರವನ್ನು ಒಂದೂವರೆ ಅಡಿ ಅಂದರೆ,18 ಅಂಗುಲದಷ್ಟು ಮಾಡಿಡಬೇಕು. ಅವುಗಳ ನಡುವೆ ಪಾದಗಳನ್ನು ಕೈಗಳ ಪಕ್ಕಗಳಲ್ಲಿರಿಸಬೇಕು.

4. ಆ ಬಳಿಕ,ತೊಡೆಗಳ ಹಿಂಬದಿಯನ್ನು ಮೇಲ್ವೋ ಳುಗಳ ಹಿಂಬದಿಯ ಮೇಲೆ ಒರಗಿಸಿಟ್ಟು,ಅಂದರೆ ಹೆಗಲ ಮತ್ತು ಮೊಣಕೈ ಇವುಗಳ ಮಧ್ಯ ಭಾಗಕ್ಕೆ ಬರುವಂತಿರಿಸಬೇಕು.

5. ತೊಡೆಗಳನ್ನು ಸ್ಥಾನದಲ್ಲಿ ರಿಸುವಾಗ ಮೊದಲು ಹಿಮ್ಮಡಿಗಳನ್ನು ನೆಲದಿಂದ ಮೇಲೆತ್ತಬೇಕು.

6. ಇದಾದಮೇಲೆ,ಉಸಿರನ್ನು ಹೊರಹೋಗಿಸಿ ಮೇಲ್ಲಮೆಲ್ಲಗೆ ಕಾಲು ಬೆರಳುಗಳನ್ನು ಒಂದೊಂದಾಗಿ ನೆಲದಿಂದ ಮೇಲೆತ್ತಿ, ಕೈಗಳ ಮೇಲೆ ಸಮತೋಲನ ಮಾಡಿ, ದೇಹವನ್ನು ನಿಲ್ಲಿಸಬೇಕು ಅಂತರ,ಕಾಲುಗಳನ್ನು ಗಿಣ್ಣುಗಳ ಬಳಿ ಒಂದಕ್ಕೊಂದು ಹೆಣೆಯಬೇಕು ಮೊದಮೊದಲು ಕಾಲುಗಳ ಜಾರಿ ಇಳಿಬೀಳುತ್ತವೆಯಾದುದರಿಂ ಸಮತೋಲನ ಮಾಡುವುದು ಕಷ್ಟವಾಗಿ ತೋರುತ್ತದೆ. ಈ ಸಮತೋಲನವನ್ನು ಸಾಧಿಸಲು,ತೊಡೆಗಳ ಹಿಂಬದಿಯನ್ನು ಮೇಲ್ದೋಳುಗಳ ಮೇಲೆ ಆದಷ್ಟಕ ಎತ್ತರವಾಗಿರುವಂತೆ ಯತ್ನಿಸಿ ಇರಬೇಕು.ಮೊದಲು ತೋಳುಗಳನ್ನು ತುಸು ಬಾಗಿಸಿ, ಆ ಬಳಿಕ ಪ್ರಯತ್ನದಿಂದ ಕೈಗಳನ್ನು ಆದಷ್ಟು ಹಿಗ್ಗಿಸಿ ತಲೆಯನ್ನು ಮೇಲೆತ್ತಬೇಕು.

7. ಈ ಸಮತೋಲನ ಸ್ಥಿತಿಯಲ್ಲಿ ಸಮವಾಗಿ ಉಸಿರಾಟ ನಡೆಸುತ್ತ, ಕೈಮಣಿ ಕಟ್ಟುಗಳನ್ನು ದೇಹದ ಭಾರವನ್ನು ಎಷ್ಟು ಕಾಲ ಸಹಿಸಬಲ್ಲದೋ ಅಷ್ಟೂ ಹೊತ್ತು ನಿಲ್ಲಿಸಬೇಕು.ಆ ಬಳಿಕ ಕಾಲುಗಳು ಒಂದಾದ ಮೇಲೊಂದರಂತೆ ಹಿಂದಕ್ಕೆ ತೆಗೆದು, ಪಾದಗಳ ಹೆಣೆತವನ್ನು ಸಡಿಲಿಸಿ ಅವುಗಳನ್ನು ನೆಲದ ಮೇಲೆ ಉಸಿರಿಡಬೇಕು ಬಳಿಕ ನೆಲದಿಂದ ಕೈಗಳನ್ನು ಮೇಲೆತ್ತಿ, ಮತ್ತೆ ತಾಡಾಸನಕ್ಕೆ ಬಂದು ನಿಲ್ಲಬೇಕು.

8. ಇದೇ ಭಂಗಿಯನ್ನು ಕಾಲ್ಗಿಣ್ಣುಗಳನ್ನು ಬದಲಾಯಿಸುವುದರ ಮೂಲಕ, ಮತ್ತೆ ಅಪೇಜಿಸಬೇಕು. ಮೊದಲು ಬಲಪಾದವನ್ನು ಎಡಪಾದಕ್ಕೆ ಗಿಣ್ಣಿನೆಡೆಯಲ್ಲಿ ಹೆಣೆದಿದ್ದರೆ, ಮತ್ತೆ ಅಭ್ಯಸಿಸುರುವಾಗ ಎಡಗಾಲನ್ನು ಬಲಗಾಲಗಿಣ್ಣಿನ   ಮೇಲೆರಿಸಿ ಅದಕ್ಕೆ ಹೆಣೆಯಬೇಕು.

 ಪರಿಣಾಮಗಳು

    ಈ ಅಸನಾಭ್ಯಾಸದಿಂದ ಕೈಗಳೂ ಮತ್ತು ಮಣಿಕಟ್ಟುಗಳೂ ಬಲಗೊಳ್ಳುವುದು. ಮಾತ್ರವಲ್ಲದೆ, ಕಿಬ್ಬೊಟ್ಟೆಯು ಸಂಕೋಚನ ಸ್ಥಿತಿಯನ್ನು ಪಡೆದಿರುವುದರಿಂದ ಅದರೊಳಗಿನ ಮಾಂಸಖಂಡಗಳೂ ಸಹ ಶಕ್ತಿಯನ್ನುಗಳಿಸುವವು ಮತ್ತು ದೇಹವು ಹಗುರಗೊಳಿಸುವುದು. ಇದರ ಜೊತೆಗೆ ತೋಳುಗಳಲ್ಲಿಯ ಕಿರುಮಾಂಸಖಂಡಗಳು  ಬೆಳೆದು ಈ ಆಸನಾಭ್ಯಾಸದಿಂದ ಅವು ಲವಲವಿಕೆಯನ್ನು ಹುಟ್ಟಿಸುವುವು. ಇದಕ್ಕಾಗಿ ಇನ್ನು ಬೇರೆ ಅಂಗ ಸಾಧನೆಯ ಅಗತ್ಯವಿರುವುದಿಲ್ಲ ಏಕೆಂದರೆ, ದೇಹದ ಬೇರೆಬೇರೆ ಭಾಗಗಳಿಗೆ ಬೇಕಾಗಿರುವ ತೂಕ ಪ್ರತಿಕೂಲಗಳು ಇದರಿಂದೊದಗುತ್ತದೆ. ಇಲ್ಲಿ ಬೇಕಾದದು  ಮನಸ್ಸಿಗೆ ದಾಡ್ಯ ಮಾತ್ರ.