ಮೈಸೂರು, ಸೆಪ್ಟೆಂಬರ್ 14: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಜಿ ಟಿ ದಿನೇಶ್ ಕುಮಾರ್ ಅಮಾನತು ಬೆನ್ನಲ್ಲೇ ಮುಡಾದ ವಿಶೇಷ ಭೂಸ್ವಾಧೀನಾಧಿಕಾರಿ ಆರ್. ಮಂಜುನಾಥ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಆರ್. ಮಂಜುನಾಥ್ ಸೇರಿದಂತೆ 8 ಜನ ಕೆಎಎಸ್ ಅಧಿಕಾರಿಗಳ ವರ್ಗ
ವೀಣಾ ಆರ್ – ಮುಖ್ಯ ಆಡಳಿತಾಧಿಕಾರಿ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು
ಗೀತಾ ಈ ಕೌಲಗಿ – ಕುಲಸಚಿವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ
ಮಹೇಶ್ ಜೆ – ಮೈಸೂರು ಮಹಾನಗರ ಪಾಲಿಕೆ ಆಯುಕ್ತ
ಮಂಜುನಾಥ್ ಆರ್ – ವಿಶೇಷ ಭೂಸ್ವಾಧೀನಾಧಿಕಾರಿ ಕಬಿನಿ ಜಲಾಶಯ ಯೋಜನೆ, ಮೈಸೂರು
ಜಗನ್ನಾಥ ರೆಡ್ಡಿ – ಆಯುಕ್ತರು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ, ಬಸವಕಲ್ಯಾಣ
ಅರುಣಕುಮಾರ್ ಕುಲಕರ್ಣಿ – ವಿಶೇಷ ಭೂಸ್ವಾಧಿನಾಧಿಕಾರಿ ಕಾರಂಜಾ ಯೋಜನೆ, ಬೀದರ್
ಅನುರಾಧ ವಸ್ತ್ರ – ಕುಲಸಚಿವರು (ಆಡಳಿತ) ಬಾಗಲಕೋಟೆ ವಿಶ್ವವಿದ್ಯಾಲಯ, ಜಮಖಂಡಿ
ಮೊಹಮ್ಮದ್ ಶಕೀಲ್ – ಉಪ ವಿಭಾಗಾಧಿಕಾರಿ, ಬಿದರ್ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.