ಸುಳ್ಯ: ಕೆ.ಎಸ್.ಆರ್.ಟಿ.ಸಿ.ಯಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿರುವ ಪುತ್ತೂರು ವಿಭಾಗದ ಕೆಲ ಚಾಲಕರಿಗೆ ಸಂಬಳದಲ್ಲಿ ಕಡಿತಗೊಳಿಸಿ ಪಾವತಿ ಮಾಡಿರುವ ಆರೋಪ ಕೇಳಿ ಬಂದಿತ್ತು. ಇದರಿಂದ ಅಸಮಾಧಾನಗೊಂಡಿರುವ ಗುತ್ತಿಗೆ ಆಧಾರಿತ ಚಾಲಕರು ಕರ್ತವ್ಯಕ್ಕೆ ಗೈರಾಗಿ ಸೆ.14ರ ಶನಿವಾರ ಪ್ರತಿಭಟಿಸುತ್ತಿದ್ದಾರೆ.
ಸುಳ್ಯ ಕೆ.ಎಸ್.ಆರ್.ಟಿ.ಸಿ. ಘಟಕದಲ್ಲಿ ಈ ಮೊದಲು ಪನ್ನಗ ಸಂಸ್ಥೆಯ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ 9 ಚಾಲಕರಿಗೆ 11 ತಿಂಗಳು ಸಮರ್ಪಕವಾಗಿ ಸಂಬಳ ನೀಡಲಾಗಿತ್ತು. ತಿಂಗಳ ಹಿಂದೆ ಆ ಸಂಸ್ಥೆಯ ಗುತ್ತಿಗೆ ಅವಧಿ ಮುಗಿದ ಬಳಿಕ ಇನ್ನೊಂದು ಸಂಸ್ಥೆ ಪೂಜ್ಯಾಯ ಸೆಕ್ಯೂರಿಟಿ ಸರ್ವಿಸ್ ಸಂಸ್ಥೆಯವರು ಗುತ್ತಿಗೆ ಪಡೆದು ಇವರನ್ನು ನೇಮಿಸಿಕೊಂಡಿದ್ದರು.