ಮನೆ ಮಾನಸಿಕ ಆರೋಗ್ಯ ಆತಂಕ ಬೇನೆ ಯಾರಿಗೆ ಬರುತ್ತದೆ

ಆತಂಕ ಬೇನೆ ಯಾರಿಗೆ ಬರುತ್ತದೆ

0

    ಆತಂಕ ಮನೋಬೇನೆ ಯಾರಿಗೆ ಬೇಕಾದರೂ ಬರಬಲ್ಲದು. ಸ್ತ್ರೀ ಪುರುಷರನ್ನದೆ ಎಲ್ಲ ವಯಸ್ಸಿನವನ್ನಕ ಕಾಡಬಲ್ಲದು. ಬಡವರನ್ನು ಶ್ರೀಮಂತರನ್ನು, ಹಳ್ಳಿಯವರನ್ನು ಪಟ್ಟಣದವರನ್ನು ತಾರತಮಯ್ಯವಿಲ್ಲದೇ ನರಳಿಸುತ್ತದೆ. ಆದರೆ ಆತಂಕ ಮಕ್ಕಳನ್ನು ಹದಿವಯಸ್ಸಿನವರನ್ನು ಹಾಗೂ ವಯಸ್ಸಾದವರನ್ನು ಹೆಚ್ಚಾಗಿ ಕಾಡುತ್ತದೆ.ಅನುಭವದ ಕೊರತೆ, ದೊಡ್ಡವರು ಏನನ್ನುತ್ತಾರೋ ಎಂಬುದು ಮಕ್ಕಳನ್ನು ಆತಂಕಕ್ಕೀಡುಮಾಡಿದರೆ,ಎಂಬುದು   ವೇಗದ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಯಿಂದುಂ ಟಾದ ಗೊಂದಲ ಮತ್ತು ದೊಡ್ಡವರು ಹೇಳುವ ಆದರ್ಶಕ್ಕೂ ವಾಸ್ತವಿಕವಾಗಿ ಪ್ರಪಂಚದಲ್ಲಿ ನಡೆಯುವುದಕ್ಕೂ ಇರುವ ಅಂತರ ವಿದ್ಯಾಭ್ಯಾಸದಲ್ಲಿರುವ ವಿಪರೀತ ಸ್ಪರ್ಧೆ ಹದಿವಯಸ್ಸಿನವರಲ್ಲಿ ಆತಂಕವನ್ನು ಮೂಡಿಸುತ್ತದೆ. ಹತ್ತಿರ ಬರುತ್ತಿರುವ ಸಾವಿನ ಭಯ, ಸತ್ತ ಮೇಲೆ ತಮಗೇನಾಗುವುದೋ ತಮ್ಮ ಮನೆಯವರಿಗೇನಾಗುವುದೋ ಎಂಬ ಯೋಚನೆ ವಯಸ್ಸಾದವರಲ್ಲಿ ಆತಂಕ ಹುಟ್ಟಲು ಕಾರಣವಾಗುತ್ತದೆ. ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿ ನಾನಾ ರೀತಿಯ ಕ್ಲೇಶ. ದುಃಖಕ್ಕೆ ಒಳಗಾದ ವ್ಯಕ್ತಿಗಳೆ ಆತಂಕ ಮನೋಬೆನೆಗೆ ಹೆಚ್ಚು  ತುತ್ತಾಗುತ್ತಾರೆ ಎಂದು ತಿಳಿದು ಬಂದಿದೆ.

Join Our Whatsapp Group

 ಕಾರಣಗಳೇನು

     ಮನೋವಿಜ್ಞಾನಿ ಸಿಗ್ಮಂಡ್ ಫ್ರೋಯ್ಡ್ ನ  ಪ್ರಕಾರ ಮನಸ್ಸಿನಲ್ಲಿ ಉಂಟಾಗುವ ಘರ್ಷಣೆಗಳು ಆತಂಕದ ಮೂಲ.ಕೋಪದಂತಹ ಅಕ್ರಮಣಕಾರಿ ಭಾವನೆಗಳ ಹಾಗೂ ಲೈಂಗಿಕ ಭಾವನೆಗಳ ಪ್ರಕಟಣೆಯ ವಿಚಾರವಾಗಿ ಮನಸಿನಲ್ಲಿ ತಿಕ್ಕಾಟ ನಡೆಯುತ್ತದೆ .ಈ ಭಾವನೆಗಳ ನೇರ ಪ್ರಕಟಣೆಯನ್ನು ಸಮಾಜ ಒಪ್ಪುವುದಿಲ್ಲವಾಗಿ, ಮಗು ಅವನ್ನು ವಯಸ್ಸಿನ ಅಳಕ್ಕೆ ತಳ್ಳುತ್ತವೆ. ಆಗದಿದ್ದಾಗ ಆತಂಕ ಪುಡಿಯುತ್ತದೆ.

     ತಂದೆ ತಾಯಿಗಳು ಸತ್ತು ಹೋಗಿ ಅಥವಾ ಯಾವುದಾದರೂ ಕಾರಣದಿಂದ ದೂರವಾಗಿ, ಅವರ ಮಕ್ಕಳಿಗೆ ಪ್ರೀತಿ ಮಮತೆ ಸಿಗದಿದ್ದರೆ, ವಿಪರೀತ ಶಿಕ್ಷಿಸಿದರೆ ಹಿರಿಯರು ಮಕ್ಕಳಿಗೆ ಒಳ್ಳೆಯ ಮಾದರಿಯಾಗಿ, ಸರಿಯಾಗಿ ಮಾರ್ಗದರ್ಶನ ಮಾಡದಿದ್ದರೆ, ತಮ್ಮ ಸಾಮರ್ಥ್ಯಕ್ಕಿಂತ ಮಿಗಿಲಾದುದನ್ನು ಮಕ್ಕಳು ಸಾಧಿಸಬೇಕು. ಎಂದು ತಂದೆ ತಾಯಿ ಅತಿನಿರೀಕ್ಷೆ ಮಾಡಿದರೆ, ಅಂತಹ ಮಕ್ಕಳು ಬಹಳ ಸಾರಿ ಆತಂಕ ಮನೋಬೇವನೆಗೆ ತುತ್ತಾಗುತ್ತಾರೆ ಎಂದು ತಜ್ಞರು ಕಂಡುಕೊಂಡಿದ್ದಾರೆ ಅನಾಥಾಲಯಗಳಲ್ಲಿ, ಬೋರ್ಡಿಂಗ್ ಶಾಲೆಗಳಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಬೆಳೆದು ದೊಡ್ಡವರಾದ ವ್ಯಕ್ತಿಗಳಲ್ಲಿ  ಹೆಚ್ಚು ಮಂದಿ ಆತಂಕದಿಂದ ಬಳಲುವುದು ಕಂಡುಬಂದಿದೆ.

    ಆತಂಕವನ್ನು ಮೂಡಿಸುವುದರಲ್ಲಿ ಮತ್ತು ಅದನ್ನು ಬಹುಕಾಲ ಇರುವಂತೆ ಮಾಡುವುದರಲ್ಲಿ ನಮ್ಮ ಪರಿಸರ ಸಾಕಷ್ಟು ಪಾತ್ರವಹಿಸುತ್ತದೆ. ಕಂಡು ಕೇಳರಿಯದ ಹೊಸ ಜಾಗ, ಕಷ್ಟಗಳನ್ನೇ ತರುವ ಸುರಕ್ಷಿತವಲ್ಲದ ಸ್ಥಳಗಳು ನಮ್ಮ ವಯಸ್ಸಿನಲ್ಲಿ ಕಳವಳನ್ನುಂಟು ಮಾಡುತ್ತವೆ.“ಆ ಜಾಗದ ಹೆಸರು ಕೇಳಿದರೆ ಜೀವ ಧಗ್  ಎನ್ನುತ್ತೇದೆ”. ಪಟ್ಟಣ ಪ್ರದೇಶಗಳಲ್ಲಿ ತೀರಾ ಯಾತ್ರಿಕವಾದ,ತೀವ್ರ  ಸ್ಪರ್ಧಾತ್ಮಕವಾದ ಅಭದ್ರತೆಯ ಜೀವನ ಸಾಕಷ್ಟು ಆತಂಕವನ್ನುಂಟು ಮಾಡುತ್ತದೆ.ಧಾರ್ಮಿಕ, ಸಾಂಸ್ಕೃತಿಕ,ಹಾಗೂ ನೈತಿಕ ಮೌಲ್ಯಗಳು ಹಾಳಾಗುತ್ತಾ, ಯಾವೊಂದು  ಆದರ್ಶ, ಗುರಿಯೂ ಇಲ್ಲದ ಬಾಳು ಮತ್ತು ಹಣ ಹಾಗೂ ಭೋಗಾ ಜೀವನಕ್ಕೆ ಅತಿಯಾದ ಮಹತ್ವವಿರುವ ಸಮಾಜದಲ್ಲಿ ಆತಂಕ ತಾಂಡವಾಡುತ್ತದೆ. ತನ್ನ ಇತಿಮಿತಿಯ ತಿಳುವಳಿಕೆ ಇಲ್ಲದೆ, ಬೆಟ್ಟದಷ್ಟು ಆಸೆ ಆಕಾಂಕ್ಷೆ ಇಟ್ಟುಕೊಂಡ ವ್ಯಕ್ತಿಗೆ ತನ್ನ ನಿರೀಕ್ಷೆಗೂ, ತನ್ನ ಸಾಧನೆಗಳಿಗೂ ನಡುವೆ ಇರುವ ಆಗಾಧ ಅಂತರವನ್ನು ಕಂಡಾಗ ಆತಂಕ, ಖಿನ್ನತೆ ಕಟ್ಟಿಟ ಬುತ್ತಿ.