ಮನೆ ಮನೆ ಮದ್ದು ನರ ದೌರ್ಬಲ್ಯ

ನರ ದೌರ್ಬಲ್ಯ

0

1. ಹಲಸಿನ ತೋಳೆಯ ರಸಾಯನ ಮಾಡಿ ತಿನ್ನುವುದರಿಂದ ನರದೊರ್ಬಲ್ಯ ದೂರ ಆಗುವುದು.

Join Our Whatsapp Group

2. ಬೆಳ್ಳುಳ್ಳಿಯನ್ನು ನುಣ್ಣುಗೆ ಅರೆದು, ಬಟ್ಟಲು ಹಾಲಿನಲ್ಲಿ ಕದಡಿ,ಚೆನ್ನಾಗಿ ಬಿಸಿ ಮಾಡಿ, ದಿನವೂ ರಾತ್ರಿ ಮಲಗುವ ಮುನ್ನ ಸೇವಿಸುತ್ತಿದ್ದರೆ ನರ ದೌರ್ಬಲ್ಯ ನಿವಾರಣೆ ಆಗುವುದು.

3. ಬಾದಾಮಿ ಬೀಜ, ಸೋಂಪು ಕಾಳು, ಕಲ್ಲು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ ಬಟ್ಟಲು ಬಿಸಿ ನೀರಿನಲ್ಲಿ ಬೆರೆಸಿ ದಿನವೂ ಮಲಗುವ ಮುನ್ನ ಸೇವಿಸುತ್ತಿದ್ದರೆ ನರೋದ್ರೇಕ್ಕೆಮ ನಿವಾರಣೆ ಆಗುವುದು.

4. ಅಗಸೆ ಸೊಪ್ಪಿನ ಪಲ್ಯದಿಂದ ನರಗಳು ಬಲಿಯುವುವು.

5.ಕ್ಷಯ ಹಾಗೂ ನರಗಳ ದೌರ್ಬಲ್ಯದಿಂದ ನಳುತ್ತಿರುವವರಿಗೆ ಕುದಿಸಿದ ಮೇಕೆಯ ಹಾಲಿನಲ್ಲಿ ಸ್ವಲ್ಪ ಜೇನುತುಪ್ಪ ಸೇರಿಸಿ, ಕುಡಿಸುವುದರಿಂದ ನರಗಳ ದೌರ್ಬಲ್ಯ ಕಡಿಮೆ ಆಗುವುದು.

6. ಸೇಬಿನ ಹಣ್ಣುಗಳ  ಹೋಳುಗಳನ್ನು ಜೇನುತುಪ್ಪದಲ್ಲಿ 24 ಗಂಟೆಗಳ ಕಾಲ ನೆನೆ ಹಾಕಿ, ಅದಕ್ಕೆ ಗುಲಾಬಿಯ ದಳಗಳನ್ನು ಸೇರಿಸಿ, ಒಣಗಿಸುವುದು ಒಂದು ವಾರದ ನಂತರ ಇದನ್ನು ಹಾಲಿನೊಂದಿಗೆ ಬೆರೆಸಿ, ದಿನವು ಮೂರು ವೇಳೆ ಒಂದೊಂದು ಟೀ ಚಮಚ  ದಷ್ಟು ಸೇವಿಸುತ್ತಾ ಬಂದರೆ ನರಗಳ ದೌರ್ಬಲ್ಯ ರೋಗವು ದೂರ ಆಗುವು.

7. ಸಿ ಜೀವಸತ್ವ ಕಡಿಮೆ ಇದ್ದರೆ ನರದೌರ್ಬಲ್ಯ ಉಂಟಾಗುವುದು ಸಹಜ. ಮಾವಿನಕಾಯಿಯಲ್ಲಿ ಸಿ ಅನ್ನಸತ್ವ ಹೇರಳವಾಗಿ  ಇರುವುದರಿಂದ ಮಿತವಾಗಿ ದಿನವೂ ತಿನ್ನುವುದರಿಂದ ನರಗಳ ದೌರ್ಬಲ್ಯ ದೂರ ಆಗುವುದು.

8. ನರಗಳಲ್ಲಿ ಹೆಚ್ಚು ಚೈತನ್ಯವನ್ನು ತುಂಬಿಸಿಕೊಳ್ಳುವ ಬೆಳ್ಳುಳ್ಳಿಯನ್ನು ಪ್ರತಿದಿನವೂ ಸೇವಿಸುತ್ತಿರುವುದರಿಂದ ಎಂದು ಸಹಾಯಕ.

9. ನರಗಳ ದೌರ್ಬಲ್ಯದಿಂದ ಉಂಟಾದ ಅಪಸ್ಮಾರ ರೋಗಗಳಿಗೆ ಬಾಳೆ ಮಂದ ಕಾಂಡದಿಂದ ರಸಹಿಂಡಿ, ಎಳೆ ನೀರಿನೊಂದಿಗೆ ಕುಡಿದರೆ ನರಗಳ ದುರ್ಬಲತೆ ದೂರವಾಗಿ,ಶಕ್ತಿಯುಕ್ತ ಎನಿಸುವುವು.

10. ಪರಂಗಿ ಹಣ್ಣಿನ ಸೇವನೆಯಿಂದ ನರಗಳ ದುರ್ಬಲತೆ ದೂರವಾಗಿ ನವ ಚೈತನ್ಯ ವೃದ್ಧಿಸುವುದು.

11. ನುಗ್ಗೆಕಾಯಿಯನ್ನು ಅಡಿಗೆಯಲ್ಲಿ ಹೆಚ್ಚಾಗಿ ಬಳಸುವುದರಿಂದ ನರಗಳ ದೌರ್ಬಲ್ಯವನ್ನು ಹೋಗಲಾಡಿಸಬಹುದು.

12. ದ್ರಾಕ್ಷಿ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ನರಗಳ ಕಾರ್ಯಗಳಲ್ಲಿ ಚೈತನ್ಯ ಹೆಚ್ಚುವುದರ ಮೂಲಕ ಮೂಳೆಗಳು ಬಲಿಯುವವು.

13. ಹಸಿ ಈರುಳ್ಳಿ, ಪ್ರತಿದಿನವೂ ತಿನ್ನುವುದರಿಂದ ಮೂಳೆಗಳು ಬಲಿತು, ನರಗಳ ದೌರ್ಬಲ್ಯ ದೂರ ಆಗುವುವು.