ಮನೆ ಯೋಗಾಸನ ಮಯೂರಾಸನ

ಮಯೂರಾಸನ

0

 ಅಭ್ಯಾಸ ಕ್ರಮ

1. ಮೊದಲು ಮಂಡಿಗಳನ್ನು ಸ್ವಲ್ಪ ಅಗಲಿಸಿ, ಊರಿ ಕುಳಿತುಕೊಳ್ಳಬೇಕು.

Join Our Whatsapp Group

2. ಬಳಿಕ ಮುಂಬಾಗಿ, ಅಂಗೈಗಳನ್ನು ಹಿಮ್ಮುಖಮಾಡಿ ನೆಲದ ಮೇಲೂರಿ, ಎರಡು ಕೈಗಳ  ಕಿರುಬೆರಳುಗಳು ಒಂದನ್ನೊಂದು ಸೋಂಕುವಂತೆಯೂ, ಬೆರಳುಗಳು ಪಾದಗಳ ಕಡೆ ತುದಿಮಾಡುವಂತೆಯೂ ಇರಿಸಬೇಕು.

3. ಆಮೇಲೆ,ಮೊಣ ಕೈಗಳನ್ನು ಬಾಗಿಸಿ, ಮುಂದೊಳುಗಳನ್ನು ಜೊತೆಗೂಡಿಸಬೇಕು. ಬಳಿಕ ಹೊಟ್ಟೆಯೊಳಗಿನ ವಪೆಯೆಂಬ ಪೊರೆಯು ಮೊಣಕೈಗಳ ಮೇಲಿಯೂ, ಎದೆಯ  ಮೆಲ್ದೋಳಿನ ಹಿಂಬದಿಯ ಮೇಲೆಯೂ ಒರಗಿರುವಂತೆ ಅಳವಡಿಸಬೇಕು.

4. ಅನಂತರ ಕಾಲುಗಳನ್ನು ಒಂದೊಂದಾಗಿ ಹಿಗ್ಗಿಸಿಟ್ಟು ಆಮೇಲೆ ಅವೆರಡನ್ನು ಜೊತೆಗೂಡಿಸಿ ಬಿಗಿ ಮಾಡಿಡಬೇಕು.

5. ಇದಾದಮೇಲೆ, ಉಸಿರನ್ನು ಹೊರಕ್ಕೆಬಿಟ್ಟು,ದೇಹದ ಭಾರವನ್ನೆಲ್ಲವನ್ನೂ ಮಣಿಕಟ್ಟುಗಳ ಮತ್ತು ಕೈಗಳ ಮೇಲೆ ಹೊರಸಿ,ಕಾಲುಗಳನ್ನು ಒಂದೊಂದಾಗಿಯೇ ಇಲ್ಲವೆ ಜೊತೆಗೂಡಿಸಿಯೋ ನೆಲದಿಂದ ಮೇಲೆತ್ತುತ್ತಿರುವಂತೆಯೇ ಮುಂಡವನ್ನು ತಲೆಯನ್ನು ಹಿಗ್ಗಿಸಿಡಬೇಕು.  ಬಳಿಕ ದೇಹವೆಲ್ಲವನ್ನೂ ನೆಲಕ್ಕೆ ಸಮಾಂತರವಾಗುವಂತಿರಿಸಿ. ಕಾಲುಗಳನ್ನು ಜೊತೆಯಲ್ಲಿಯೇ ಹಿಗ್ಗಿಸಿ, ಪಾದಗಳನ್ನು ಜೋಡಿಸಿ, ಕೈಗಳ ಮೇಲೆ ಸಮತೋಲನ ಸ್ಥಿತಿಯಲ್ಲಿ ನೆಲೆಸಬೇಕು.

6. ಈ ಭಂಗಿಯಲ್ಲಿ ಸಾಧ್ಯವಾದಷ್ಟು ಕಾಲ, ಅಂದರೆ ಮೆಲ್ಲಮೆಲ್ಲಗೆ 30 ಸೆಕೆಂಡುಗಳಿಂದ 60 ಸೆಕೆಂಡುಗಳವರೆಗೂ ಏರಿಸುತ್ತ ನಿಲ್ಲಲು ಯತ್ನಿಸಬೇಕು. ಈ ಭಂಗಿಯಲ್ಲಿರುವಾಗ ಪಕ್ಕೆಲುಬುಗಳ ಮೇಲೆ ಹೆಚ್ಚು ಒತ್ತಡವನ್ನು ಹಾಕಬಾರದು. ಏಕೆಂದರೆ ವಪೆಯ ಮೇಲೆ ಒತ್ತಡವು ಹೆಚ್ಚಿದಂತೆಲ್ಲ ಉಸಿರಾಟವು ಕಷ್ಟವೆನಿಸುವುದು.

7. ಆ ಬಳಿಕ, ತಲೆಯನ್ನೂ ಮತ್ತು ಕಾಲುಗಳನ್ನೂ ಕ್ರಮವಾಗಿ ಇಳಿಸಬೇಕು.ಬಳಿಕ ಮಂಡಿಗಳನ್ನು ನೆಲದ ಮೇಲೆ ಕೈಗಳ ಬಳಿಯೂರಿ, ಆಮೇಲೆ ಆ ಕೈಗಳನ್ನು ಮೇಲೆತ್ತಿ ವಿಶ್ರಮಿಸಿಕೊಳ್ಳಬೇಕು.

8. ಈ ಸ್ಥಿತಿಯನ್ನುಗಳಿಸಲು ಸಾಧ್ಯವೇನಿಸಿದ ಮೇಲೆ ಕಾಲುಗಳನ್ನು ‘ಪದ್ಮಾಸನ’ದಲ್ಲಿರುವಂತೆ ಒಂದಕ್ಕೊಂದು ಸೇರಿಸುವ ಕ್ರಮವನ್ನು ಈ ಭಂಗಿಯನ್ನಭ್ಯಸಿಸುವ ಕಾಲದಲ್ಲಿ ಕಲಿಯಬೇಕು. ಕಾಲುಗಳನ್ನು ನೀಳಲವಾಗಿ ಹೀಗ್ಗಿಸಿಡುವುದಕ್ಕೆ ಪ್ರತಿಯಾಗಿ ಈ ಭಂಗಿಯನ್ನು ಅಭ್ಯಸಿಸ ಬೇಕು.ಈ ವಿಧವಾದ ಮಯೂರಾಸನದಲ್ಲಿ ವ್ಯತ್ಯಸ್ತ ಮಾಡಿದ ಭಂಗಿಯ ಹೆಸರೆಂದರೆ.

 ಪರಿಣಾಮಗಳು 

     ಈ ಭಂಗಿಯು ಆತ್ಮಶ್ಚರ್ಯಕರವಾದ  ರೀತಿಯಲ್ಲಿ ದೇಹದ ಕಿಬ್ಬೊಟ್ಟಿಗೆ ಚಟುವಟಿಕೆ ಯನ್ನುಂಟುಮಾಡುತ್ತದೆ.ಈ ಆಸನದ ಭಂಗಿಯಲ್ಲಿ ಮೊಣಕೈಗಳ ಒತ್ತಡವು ಕಿಬ್ಬೊಟ್ಟೆಯೊಳಗಿನ  ಆರ್ಯೊರ್ಟ ಸುದ್ಧ ರಕ್ತನಾಳದ  ಮೇಲೆ ಬೀಳುವುದರಿಂದ ಕಿಬ್ಬೊಟ್ಟೆಯೊಳಗಿನ  ಅಂಗಗಳಲ್ಲಿ ರಕ್ತಪರಿಚಲನೆಯು ಬಹು ಚೆನ್ನಾಗಿ ನಡೆಯುತ್ತದೆ.ಅಲ್ಲದೆ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಹೊಟ್ಟೆ ಮತ್ತು ಗುಲ್ಮಗಳಲ್ಲಿಯ ನೋವನ್ನು ಕಳೆಯುತ್ತದೆ. ಮತ್ತು ಕ್ರಮರಹಿತ ಆಹಾರ ಸೇವನೆಯಿಂದುಂಟಾಗುವ ಜೀವಣುವಿಷಗಳ ಉತ್ಪಾದನೆಗೆ ತಡೆಯುಂಟುಮಾಡುತ್ತದೆ.ಇದರ ಜೊತೆಗೆ,ಮಧುಮೂತ್ರದಿಂದ ಪೀಡಿತರದವರಿಗೆ ಈ ಆಸನವು ಅತ್ಯಂತ ಫಲಕಾರಿ. “ಭುಜಂಗ ಭುಕ್ ”ಎಂಬ ಅನ್ವರ್ಥನಾಮವುಳ್ಳ ನವಿಲುಗಳು ಹಾವುಗಳನ್ನು ನುಂಗುವಂತೆ,ಈ ಆಸನವು ಶರೀರದಲ್ಲಿ ಉತ್ಪತ್ತಿಯಾಗುವ ಜೀವಾಣುವಿಷಗಳನ್ನೆಲ್ಲ ನಾಶಪಡಿಸುವ ಶಕ್ತಿಯನ್ನು ಪಡೆದಿದೆ. ಅಲ್ಲದೆ ಈ ಆಸನವು ಮುಂದೊಳುಗಳಿಗೂ ಕೈ ಮಣಿಕಟ್ಟುಗಳಿಗೂ ಮತ್ತು ಮೊಣ ಕೈಗಳಿಗೂ ಶಕ್ತಿಯನ್ನು  ಹೆಚ್ಚಿನ ಪ್ರಮಾಣದಲ್ಲಿ ಒದಗಿಸುತ್ತದೆ.