ಮನೆ ದೇವರನಾಮ ಆ ಬಾನ ಪತದಲ್ಲಿ ಸಪ್ರಾಶ್ವರಥದಲ್ಲಿ

ಆ ಬಾನ ಪತದಲ್ಲಿ ಸಪ್ರಾಶ್ವರಥದಲ್ಲಿ

0

ಆ ಬಾನ ಪತದಲ್ಲಿ ಸಪ್ರಾಶ್ವರಥದಲ್ಲಿ
ರವಿ ಬಂದ ಭುವಿ ಬೆಳಲೂ
ನೀನೇಳು ಇಳೆಯಾಡಲೂ ||
ಈ ರೇಳು ಧರೆಯಾಳಲೆಳು ಗಣಪ |
ಈ ಭವದ ಕಾದಿರುಳ ಕಾಯೊ ಬೆನಕ |
ಈ ಸುಪ್ರಭಾತ ಗೀತೆ ಹಾಡಿಹೆ ಸ್ವಾಗತಿಸುತ್ತೇ|
ಅಣುವಣವು ಅರಳಲಿ ಕರುಣೆ ವೀಕ್ಷಣೆಯಲ್ಲಿ ||ಆ ಬಾನ ||

ಗಣನಾಥನೆ ನಿನ್ನ ಗುಣಗಾನ ಮಾಡುತ |
ಪಕ್ಷಿಗಳ ಸಂಕುಲವು ಕಲರವಿಸಿದೆ |
ಪರಿ ಪರಿಯ ಪರಿಮಳದ ಸುಮ ರಾಶಿ ತಾನರಳಿ |
ನಿನ್ನ ಅರ್ಚಿಸಲೆಂದೆ ನಳ ನಳಿಸಿದೆ |
ಗಜಮುಖನೆ ಗಣಪತಿಯೆ ಗಣನಾಯಕ |
ನಿನ್ನ ನಾರಾಧಿಪುದೆ ನಿಜ ಕಾಯಕ |
ಬಾರಯ್ಯ ಸುಮುಕನೆ ಓಡೋಡಿ ಬಾರಯ್ಯ|
ಭಕ್ತಾರಾಂತರ್ಯದಲ್ಲಿ ಸೇರೆಯಾಗಿ ನಿಲ್ಲಯ್ಯ |
ಸ್ವಾಮಿ, ಪರಮಾತ್ಮನೆ ಆರ್ಶಿಗವಿಗಾತರಿ || ಆ ಬಾನ ||

ಚಾಮರದ ಸೇವೆಯನ್ನು ತಾ ಮಾಡಬೇಕೆಂದು |
ಮಲೆಯ ಮಾರುತವು ಬೀಸುತ್ತಿದೆ |
ಸಿರಿಗಂಧದ ಸೇವೆ ಭಾಗ್ಯವನ್ನು ತಾ ಬಯಸಿ|
ಚಂದದಲಿ ಚಂದನವು ಪರಿಮಳಿಸಿದೆ |
ವಿಘ್ನಗಳ ನೀಗುತ ನೀ ವಿಜಯಿಸು |
ವಿಜಯಗಳ ನೀಡುತ ವಿಜೃಂಬಿಸು|
ಪಂಚಾಕ್ಷರ ಸುತನೆ ಏ ಪಂಚಮುಖನೆ |
ಪರಿಪಾಲಿಸೇಳಯ್ಯ ಏ ಪ್ರಣವ ರೂಪನೆ |
ಸಕಲ ಶ್ರೀಕಾರನೆ ವಿದ್ಯಾದಿ ದೇವನೆ || ಆ ಬಾಣ ||