ಮನೆ ಯೋಗಾಸನ ಹಂಸಾಸನ

ಹಂಸಾಸನ

0

    ‘ಹಂಸ’ವೆಂದರೆ ಹಂಸ ಪಕ್ಷಿ ಅಂಚೆ. ಈ ಆಸನವೂ ಬಹುವಾಗಿ ‘ಮಯೂರಾಸನ’ ವನ್ನೇ ಹೋಲುತ್ತದೆ.ಆದರೆ ಇದರಲ್ಲಿ ಕೈಗಳನ್ನಿಡುವ ಭಂಗಿ ಬೇರೆ ‘ಮಯೂರಾಸನ’ದಲ್ಲಿ ಕೈಬೆರಳುಗಳು ಒಂದನ್ನೊಂದು ಮುಟ್ಟಿ ಕೈಬೆರಳುಗಳ ತುದಿಗಳು ಪಾದಗಳ ಕಡೆಗೆ ತಿರುಗಿಸುತ್ತವೆ. ಆದರೆ ಈ ಹಂಸಾಸನದಲ್ಲಿ ಕೈಬೆರಳುಗಳು ಒಂದನ್ನೊಂದು ಮುಟ್ಟುತ್ತ,ಕೈಬೆರಳ ತುದಿಗಳು ತಲೆಯ ದಿಕ್ಕಿಗೆ ತಿರುಗುತ್ತವೆ. ಈ ಭಂಗಿಯು ನವೀನ ವ್ಯಾಯಾಮ ಶಿಕ್ಷಣದಲ್ಲಿ ಗಿಡದ ಸಮತೋಲನವನ್ನು ಹೋಲುತ್ತದೆ.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ಕಾಲ್ಮಂಡಿಗಳನ್ನು ತುಸು ಅಗಲಿಸಿ,ನೆಲದ ಮೇಲೂರಿ ಕುಳಿತುಕೊಳ್ಳಬೇಕು.

2. ಬಳಿಕ, ದೇಹವನ್ನು ಬಗಿಸಿ, ಅಂಗೈಗಳನ್ನು ನೆಲದ ಮೇಲೂರಿಡಬೇಕು.ಆಮೇಲೆ,ಕೈಬೆರಳುಗಳು ಒಂದನ್ನೊಂದು ತಾಕುವಂತೆಯೂ ಉಳಿದ ಕೈಬೆರಳುಗಳ ತುದಿಗಳು ತಲೆಯ ದಿಕ್ಕನ್ನೇ ತೋರಿಸುವಂತೆ ಅಂದರೆ ಮುಂಗಡೆಗೆ ಚಾಚಿಡಬೇಕು

3. ಆಮೇಲೆ ಮೊಣ ಕೈಗಳನ್ನು ಬಾಗಿಸಿ,ಮುಂದೊಳುಗಳೆ ರಡನ್ನೂ ಜೊತೆಗೂಡಿಸಬೇಕು. ಅಲ್ಲದೇ ವಪೆಯು ಮೊಣ ಕೈಗಳ ಮೇಲೆಯೂ ಎದೆ ಮೇಲ್ದೋಳಿನ ಹಿಂಬದಿಯ  ಮೇಲೆಯೂ ಒರಗಿಸಬೇಕು.

4. ಆ ಬಳಿಕ, ಕಾಲುಗಳನ್ನು ಒಂದಾದ ಮೇಲೊಂದರಂತೆ ನೀಳವಾಗಿ ಹಿಗ್ಗಿಸಿ, ಅವೆರಡನ್ನೂ ಜೊತೆಗೂಡಿಸಿ ಇಡಬೇಕು.

5. ಈಗ ಉಸಿರನ್ನು ಹೊರಬಿಟ್ಟು ಮುಂಡವನ್ನು ಮುಂಗಡೆಗೆ ತೂಗಿಟ್ಟು ದೇಹದ ಭಾರವೆಲ್ಲ ಮಣಿಕಟ್ಟಿಗಳಿಗೂ ಕೈಗಳಿಗೂ ಹೊರಸಿಟ್ಟು ಕಾಲುಗಳನ್ನು ನೆಲದಿಂದ ಮೇಲೆತ್ತಿ ಅವನ್ನು ನೇರವಾಗಿ ಹಿಗ್ಗಿಸಿ,ಪಾದಗಳನ್ನು ಜೊತೆಗೂಡಿಸಿ ನೆಲಕ್ಕೆ ಅವನ್ನು ಸಮಾಂತರ ವಾಗುವಂತಿರಬೇಕು.

6. ಈ ಭಂಗಿಯ ಸ್ಥಿತಿಯಲ್ಲಿ ಉಸಿರನ್ನು ಒಳಕ್ಕೆ ಕಟ್ಟಿಡದೆ, ಸಾಧ್ಯವಾದಷ್ಟು ಕಾಲ ಸಮತೋಲನದಿಂದ ನೆಲೆಸಬೇಕು.ಈ ಆಸನದಲ್ಲಿ ಮುಂದೋಳುಗಳು ನೆಲಕ್ಕೆ ಲಂಬವಾಗಿ ನಿಲ್ಲಲಾರದು.ಏಕೆಂದರೆ, ಕೈ ಗಳಿಟ್ಟಿರುವ ಸ್ಥಿತಿಯಲ್ಲಿ ಮಣಿಕಟ್ಟುಗಳ ಮೇಲೆ ಒತ್ತಡ ಬಹು ಹೆಚ್ಚಾಗಿರುತ್ತದೆ, ‘ಮಯೂರಾಸನ’ಕ್ಕಿಂತಲೂ ‘ಹಂಸಾಸನ’ದೊಳಗೆ ಸಮತೋಲನ ಸ್ಥಿತಿಯಲ್ಲಿ ದೇಹವನ್ನು ನಿಲ್ಲಿಸುವುದು ಕಷ್ಟತರ,ವಪೆಯಮೇಲೆ ಒತ್ತಡವು ಹೆಚ್ಚಾಗಿರುವುದರಿಂದ ಉಸಿರಾಟ ನಡೆಯುವುದು ಕಷ್ಟ ಮತ್ತು ಹೆಚ್ಚು ಪ್ರಯತ್ನ ಬೇಕು. ಈ ಆಸನದಲ್ಲಿ ‘ಮಯೂರಾಸನ’ದಲ್ಲಿರುವಂತೆ ದೇಹದ ಭಾರವನ್ನು ಮುಂದೊಳುಗಳು ಹೊರರುವುದಿಲ್ಲ.

7. ಕಡೆಯದಾಗಿ,ಉಸಿರನ್ನು ಹೊರಬಿಟ್ಟು, ತಲೆಯನ್ನೂ ಕಾಲ್ಬೇರಳುಗಳನ್ನೂ ನೆಲದ ಮೇಲೂರಿ, ಮಂಡಿಗಳನ್ನು ನೆಲದ ಮೇಲೆ ಕೈಗಳ ಪಕ್ಕದಲ್ಲಿಯೇ ಇಟ್ಟು ಮೊಣಕೈಗಳ ಮೇಲಿದ್ದ ದೇಹದ ಭಾರವನ್ನು ತೆಗೆದು, ಕೈಗಳನ್ನೂ ತಲೆಯನ್ನೂ ನೆಲದಿಂದ ಮೇಲೆತ್ತಿ ವಿಶ್ರಮಿಸಿಕೊಳ್ಳಬೇಕು.

ಪರಿಣಾಮಗಳು 

     ಈ ಆಸನವು ಕಿಬ್ಬೊಟ್ಟೆಯ ಭಾಗಗಳಿಗೆ ಲವಲವಿಕೆಯನ್ನುಂಟು ಮಾಡುತ್ತದೆ. ಏಕೆಂದರೆ, ಮೊಣಕೈಗಳು ಕಿಬ್ಬೊಟ್ಟೆಯೊಳಗಿನ ‘ಆಯೋರ್ಟಾ ’ಎಂಬ ಶುದ್ಧ ರಕ್ತನಾಳದ ಭಾಗದ ಮೇಲೆ ಒತ್ತುವುದರಿಂದ ಶುದ್ಧರಕ್ತವು ಕಿಬ್ಬಟ್ಟೆಯೊಳಗಿರುವ ಅಂಗಗಳಲೆಲ್ಲಾ ಸರಾಗವಾಗಿ ಸಂಚರಿಸುವಂತಾಗುತ್ತದೆ. ಉಂಟಾಗುತ್ತದೆ ಇದರಿಂದ ಜೀರ್ಣಕ್ರಿಯೆಯು ಹೆಚ್ಚುತ್ತದೆ.ಮತ್ತು ಜೀವಾಣು ವಿಷಗಳ ಉತ್ಪತ್ತಿಗೆ ಮತ್ತು ಶೇಖರಣೆಗೆ ತಡೆಯುಂಟಾಗುತ್ತದೆ. ಅಲ್ಲದೆ ಇದು ಮೊಣಕೈಗಳು, ಮುಂದೋಳುಗಳು ಮತ್ತು ಮಣಿಕಟ್ಟುಗಳು ಬೆಳೆಯುವಂತೆ ಮಾಡಿ ಅವುಗಳಲ್ಲಿ ಶಕ್ತಿಯನ್ನು ಹೆಚ್ಚಿಸುವುದು.